ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೨ ಶ್ರೀಮದ್ಭಾಗವತವು (ಅಧ್ಯಾ. ೭. ಯಿಲ್ಲದೆ, ಅವುಗಳಿಂದ ಕೃತಾರ್ಥನೆಂದೆಣಿಸದೆ, ಮೇಲೆಮೇಲೆ ಆಶೆಯಿಂದ ಕುದಿಯುತ್ತಿದ್ದೆನು.ಧಾರ್ಥಕಾಮಗಳಿಗೆ ಸಾಧನಭೂತವಾಗಿದ್ದ ನನ್ನ ಗೃಹ ಜೀವನವು ಈಗ ಆಕಸ್ಮಾತ್ತಾಗಿ ಒಮ್ಮೆ ಯೇ ಕೊನೆಗೊಂಡಿತು. ನನಗೆ ಸರ ವಿಧದಲ್ಲಿಯೂ ಅನುರೂಪಳಾಗಿಯೂ, ಎಲ್ಲಾ ಕಾರಗಳಿಗೂ ಅನುಕೂಲೆ ಯಾಗಿಯೂ, ನನ್ನನ್ನೆ ದೈವವೆಂದು ನಂಬಿದವಳಾಗಿಯೂ ಇದ್ಯ ನನ್ನ ಪತ್ರಿ ಯು, ಈ ಶೂನ್ಯವಾದ ಗೃಹದಲ್ಲಿ ನನ್ನೊಬ್ಬನನ್ನೇ ಬಿಟ್ಟು ತನ್ನ ಮುದ್ದು ಮಕ್ಕಳೊಡನೆ ಪರಲೋಕಕ್ಕೆ ಹೋಗುತ್ತಿರುವಳಲ್ಲಾ ! ಅಯ್ಯೋ ! ಇನ್ನು ನಾನು ಪತ್ರಿಪುತ್ರರೆಲ್ಲರನ್ನೂ ಕಳೆದುಕೊಂಡು, ಈ ಹಾಳುಮನೆಯಲ್ಲಿ ಹೇಗೆ ಜೀವಿಸಲಿ ! ಇನ್ನು ಈ ದುಃಖಜೀವನದಿಂದ ನಾನು ಬದುಕಿರುವುದೇಕೆ ? " ಎಂದು ಗೋಳಿಡುತ್ತ, ಬಲೆಯಲ್ಲಿ ಸಿಕ್ಕಿ ಮರಣೋನ್ಮುಖವಾಗಿ ತಳಿಸು ತಿರುವ ತನ್ನ ಹೆಂಡತಿಮಕ್ಕಳನ್ನು ನೋಡಿ ಸಹಿಸಲಾರದೆ, ಅವುಗಳ ಸ್ಥಿತಿ ಯನ್ನು ತನು ಕಣ್ಣಾರೆ ನೋಡುತ್ತಿದ್ದರೂ ಹಿಂದುಮುಂದುತೋರದೆ, ಪ್ರಜ್ಞೆ ತಪ್ಪಿ ತಾನೂ ಆ ಬಲೆಯೊಳಗೆ ಬಿದ್ದು ಸಿಕ್ಕಿಕೊಂಡಿತ.. ಆಮೇಲೆ ಕೂರನಾದ ಆ ಬೇಡನು, ಆ ಕಪೋತದಂಪತಿಗಳನ್ನೂ , ಆ ಮರಿಗಳನ್ನೂ, ಹಿಡಿದು ತನ್ನ ಬುಟ್ಟಿಯಲ್ಲಿ ಸೇರಿಸಿಕೊಂಡು, ತಾನು ಬಂದ ಕಾರವು ಕೈಗೂಡಿತೆಂಬ ಸಂತೋಷದಿಂದ ತನ್ನ ಮನೆಗೆ ಹಿಂತಿರುಗಿಹೋದನು. ರಾಜಾ ! ಹೀಗೆಯೇ ಕುಟುಂಬಿಯಾಗಿ ಇಂದ್ರಿಯಗಳನ್ನು ಜಯಿಸಲಾರದ ಮನುಷ್ಯನು, ಸುಖದುಃಖಾದಿಧ್ವಂದ್ವಗಳಿಗೆ ಸಿಕ್ಕಿ ತೊಳಲುತ್ತ, ಜನ್ಮಾವಧಿ ಕುಟುಂಬಪೋಷಣೆಗಾಗಿಯೇ ಕಷ್ಟಪಡುತ್ತಿದ್ದು, ಕೊನೆಗೆ ಮೇಲೆ ಹೇಳಿದ ಕಪೋತಪಕ್ಷಿಯಂತೆ ತನ್ನ ಪುತ್ರ ಕಳತ್ರಾದಿಗಳೊಡನೆ ಅಪಾರದುಃಖಕ್ಕೆ ಗುರಿಯಾಗುವುದೇ ನಿಶ್ಚಯವು, ಮುಕ್ಕಿದ್ವಾರವನ್ನು ತೆರೆಯುವುದಕ್ಕೆ ಸಾಧನ ವೆನಿಸಿಕೊಂಡ ಉತ್ತಮವಾದ ಮನುಷ್ಯ ಜನ್ಮವು ಲಭಿಸಿರುವಾಗಲೂ, ಯಾವನು ವಿವೇಕಶೂನ್ಯನಾಗಿ ಆಕಪೋತಪಕ್ಷಿಯಂತೆ ಕುಟುಂಬದಲ್ಲಿಯೇ ಅಧಿಕಾಸಕ್ತನಾಗಿರುವನೋ, ಅವನನ್ನು ಆರೂಢಪತಿತಸಿಗೆ (ಮೊದಲು ಈ ತಮಪದವಿಯನ್ನು ಹೊಂದಿದ್ದು ಅದರಿಂದ ಅಧೋಗತಿಗೆ ಬಿಳುವವನಿಗೆ) ಸಮಾನವಾಗಿ ಭಾವಿಸಬಹುದು. ಇದು ಏಳನೆಯ ಅಧ್ಯಾಯವು.