ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಆಧ್ಯಾ, ೮ || ಏಕಾದಶಸ್ಕಂಧನ. - + ಅವಧೂತಯದುಸಂವಾದವು. www ಓ ರಾಜಾ ! ಇನ್ನು ಅಜಗರವೆಂಬ ಹಾವಿನಿಂದ ನಾನು ಗ್ರಹಿಸಿದ ವಿ ಷಯಗಳನ್ನು ತಿಳಿಸುವೆನು ಕೇಳು. ಪ್ರಾಣಿಗಳಿಗೆ ಇಂದ್ರಿಯತೃಪ್ತಿಯೆಂಬು ದು, ಆಯಾಪ್ರಾರಬ್ಧ ಕಮ್ಮಾನುಸಾರವಾಗಿ ಸ್ವರ್ಗದಲ್ಲಿಯೂ, ನರಕದಲ್ಲಿ ಯೂ ಲಭಿಸುವುವು. ದುಃಖಗಳು ಹೇಗೋ ಹಾಗೆಯೇ ಸುಖವೆಂಬುದೂ ಮನುಷ್ಯನಿಗೆ ಅನಪೇಕ್ಷಿತವಾ`ಯೇ ಬಂದು ಸೇರುವವು. ಆದುದರಿಂ ದ ವಿವೇಕಿಯು, ಈ ಸುಖದುಃಖಗಳೆರಡೂ ಕಾಧೀನವೆಂಬುದನ್ನು ತಿಳಿದು, ಸುಖವನ್ನೂ ದುಃಖದಂತೆಯೇ ಭಾವಿಸಿ, ಅದರಲ್ಲಿ ವಿಮುಖನಾಗಿರಬೇಕು. ಆಹಾರವು, ರಸವತ್ತಾದ ಮೃಷ್ಟಾನ್ನವಾಗಿದ್ದರೂ ಕದ ವಾಗಿದ್ದರೂ, ಸ್ವಲ್ಪವಾಗಿದ್ದರೂ ಸಮೃದ್ಧವಾಗಿದ್ದರೂ, ತನಗೆ ಎಷ್ಟು ಮಾತ್ರವು ಲಭಿ ಸುವುದೋ ಅಷ್ಟರಲ್ಲಿಯೇ ದೇಹಧಾರಮಾಡಿಕೊಂಡು, ದೈವಲಬ್ದವಾ ದುದರಲ್ಲಿ ತೃಪ್ತನಾಗಿರುವುದೇ ಅಜಗರವೃತ್ತಿಯೆನಿಸುವುದು. ಆಹಾರವು ತಾ ನಾಗಿ ಅಭಿಸದಿದ್ದಾಗಲೂ ಅದಕ್ಕಾಗಿ ಪ್ರಯತ್ನಿಸಬಾರದು. ಅದರಿಂದ ತನ್ನ ಪಾಬಪಾಪವ ಕಳೆಯಬಹುದೆಂದು ತಿಳಿದು, ಬಹುನಗಳವರೆಗಾದರ ೧ ನಿರುದ್ಯೋಗಿಯಾಗಿ ಹೆಬ್ಬಾವಿನಂತೆ ಸಿಂದಮೇಲೆ ಸುಮ್ಮನೆ ಮಲಗಿರಬೇಕು. ಒಳ್ಳೇ ಇಂದ್ರಿಯಪಾದವನೂ, ದೇಹಬಲವೂ ಇದ್ದವನಾಗಿದ್ದರೂ, ಯಾವ ಸುಖವನ್ನೂ ಕೂರದೆ, ಯಾವ ಉದ್ಯೋಗಕ್ಕೂ ಪ್ರಯತ್ನಿ ಸದೆ, ತತ್ವವಿ ಮರ್ಶನೆಯಲ್ಲಿ ಮಾತ್ರ ಎಚ್ಚರಗೊಂಡು ಮಲಗಿರಬೇಕು ! ಇವೆಲ್ಲವನ್ನೂ ನಾನು ಅಜಗರವೆಂಬ ಹೆಬ್ಬಾವಿನಿಂದ ಗ್ರಹಿಸಿಕೊಂಡೆನು ಮತ್ತು ಮುನಿಯು, ಸಮುದ್ರದಂತೆ ಹೊರಗೆ ಎಲ್ಲರಲ್ಲಿಯೂ ಪ್ರಸನ್ನ ನಾಗಿಯೂ, ಒಳಗೆ ಗಂಭೀರನಾಗಿಯೂ, ಇಂತವನೆಂದು ಬೇರೊಬ್ಬರಿಗೆ ತಿಳಿಯಲಸಾಧ್ಯನಾಗಿಯೂ,ತನ್ನ ಮಹಿಮೆಯನ್ನು ಇಷ್ಟೆಂದು ತಿಳಿಸದವನಾ ಗಿಯೂ, ಇತರರಿಗೆ ದರತಿಕ್ರಮನಾಗಿಯೂ, ಆಕ್ಷೇಭ್ಯನಾಗಿಯೂ, ನಿಶ್ಚಲ ನಾಗಿಯೂ ಇರಬೇಕು. ಸಮುದ್ರವು ಮಳೆಗಾಲದಲ್ಲಿ ಅನೇಕನದೀಘ್ರ ವಾಹಗಳು ಸರತೋ ಮುಖವಾಗಿ ತನ್ನಲ್ಲಿ ಬಂದುಬಿದರೂ ಆದರಿಂದ ಉಕ್ಕಿಬರಲಾರದು. ತೀಕ್ಷವಾದ ಬೇಸಗೆಯಲ್ಲಿಯೂ ಒಣಗಿಹೋಗಲಾರದು