ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೮೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪et ಆಧ್ಯಾ, ೮.) ಏಕಾದಶಸ್ಕಂಧವು. ಮೀನುಗಳು ಗಾಳವನ್ನು ಕಚ್ಚಿ , ಬೆಸ್ತರ ಕೈಗೆ ಸಿಕ್ಕಿ ಸಾಯುವು ದನ್ನು ನೋಡಿ, ಯೋಗಿಯಾದವನು ಜಿಹ್ವಾಚಾಪಲ್ಯವನ್ನು ಬಿಟ್ಟುಬಿಡಬೇ ಕೆಂದು ಗ್ರಹಿಸಿಕೊಂಡೆನು. ಓ ರಾಜೇಂದ್ರಾ! ಇಂದ್ರಿಯಜಯವನ್ನ ಪೇಕ್ಷಿಸ ತಕ್ಕವರು ಕೆಲವು ದಿನಗಳವರೆಗೆ ಆಹಾರವಿಲ್ಲದಿರುವುದರಿಂದ, ಬೇರೆ ಎಲ್ಲಾ ಇಂದ್ರಿಯಗಳ ಶಕ್ತಿಯನ್ನೂ ಅಡಗಿಸಬಹುದು. ರಸನೇಂದ್ರಿಯವನ್ನು ಮಾ ತ್ರ ಜಯಿಸುವುದು ಸಾಧ್ಯವಲ್ಲ. ಏಕೆಂದರೆ, ಹೊಟ್ಟೆಗೆ ಅನ್ನ ವಿಲ್ಲದಷ್ಟೂ ಜಿಂದ್ರಿಯದ ಚಾಪಲ್ಯವು ಹೆಚ್ಚು ಬರುವುದು. ಬೇರೆ ಎಲ್ಲಾ ಇಂದ್ರಿ ಯಗಳನ್ನು ನಿಗ್ರಹಿಸಿಟ್ಟರೂ ರಸನೇಂದ್ರಿಯವನ್ನು ಜಯಿಸಿದಹೊರತು ಮನುಷ್ಯನು ಜಿತೇಂದ್ರಿಯನೆನಿಸಲಾರನು. ಆ ರಸನೇಂದ್ರಿಯವೊಂದನ್ನು ಮಾತ್ರ ಜಯಿಸಿದರೂ, ಬೇರೆ ಇಂದ್ರಿಯಗಳನ್ನೆಲ್ಲಾ ಜಯಿಸಿದಂತೆಯೇ ಆಗುವುದು. ಆದುದರಿಂದ ಯೋಗಿಯೆನಿಸುವವನು ಮೊದಲು ರಸನೇಂದ್ರಿಯ ವನ್ನು ಜಯಿಸಬೇಕು. ಓ ರಾಜೇಂದ್ರಾ ಪೂತ್ವದಲ್ಲಿ ವಿದೇಹನಗರದಲ್ಲಿ ಪಿಂಗಳೆಯೆಂಬ ವೇಶೈಯೊಬ್ಬಳಿದ್ದಳು. ಅವಳ ದೃಷ್ಟಾಂತದಿಂದ ನಾನು ಕಲಿತುಕೊಂಡ ಒಂದಾನೊಂದು ವಿಚಾರವನ್ನು ತಿಳಿಸುವೆನು ಕೇಳು. ಆಕೆಯು ಕಾಮ ಚಾರಿಣಿಯಾಗಿ, ತನ್ನಲ್ಲಿಗೆ ಬರತಕ್ಕವರು ಇಷ್ಮೆ ಹಣವನ್ನು ಕೊಡ ಬೇಕಂಬ ಒಂದು ನಿರ್ಣಯವನ್ನಿಟ್ಟುಕೊಂಡು, ಉತ್ತಮವಾದ ವಸ್ಕಾ ಭರಣಗಳಿಂದ ದೇಹವನ್ನಲಂಕರಿಸಿಕೊಂಡು, ಆಗಾಗ ತನ್ನ ಮನೆಯ ಬಾಗಿ ಲಲ್ಲಿ ಬಂದು ನಿಲ್ಲುತಿದಳು, ವಾರಿಯಲ್ಲಿ ಬರತಕ್ಕವರೆಷ್ಟೋ ಮಂದಿ ಪುರು ಷರು, ಬಹಳಧನಿಕರಾಗಿ ಕಂಡುಬಂದರೂ, ಅವರು ಸಮೃದ್ಧವಾಗಿ ಹಣ ವನ್ನು ಕೊಡುವುದಾಗಿ ಹೇಳಿದರೂ, ಆ ವೇಶ್ಯಯು, ತನಗೆ ಇನ್ನೂ ಹೆಚ್ಚು ಹಣವು ಬೇಕೆಂಬದುರಾಸೆಯಿಂದ,ಅವರೊಡನೆ ರಮಿಸುವುದಕ್ಕೆ ಇಷ್ಟಪಡದೆ ನಿರಾಕರಿಸುತಿದ್ದಳು. ಹೀಗೆಯೇ ಎಷ್ಟೋ ಮಂದಿ ಪುರುಷರು ಆಗಾಗ ಬಂದು ಇವಳಿಂದ ನಿರಾಕೃತಾಗಿ ಹೋಗುತ್ತಿದ್ದರು. ಹಾಗಿದ್ದರೂ ಅವಳು ತಾನು ಕೇಳಿದಷ್ಟು ಹಣವನ್ನು ಕೊಡತಕ್ಕ ಭಾಗ್ಯವಂತನು ಬೇರೆ ಯಾವನಾದರೂ ಬಂದೇಬರುವನೆಂಬ ಆಶೋತ್ತರದಿಂದ, ಆಗಾಗ ಬಂದು,