ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೮೪

ಶ್ರೀಮದ್ಭಾಗವತವು (ಅಥ, #. ಪ್ರಾಣಿಗಳು (ಇರುವೆಗಳು) ಕಟ್ಟಿದ ಗೂಡಿನಲ್ಲಿ ಸೇರಿಕೊಂಡು ಸುಖವಾಗಿ ರುವಂತೆ, ಯೋಗಿಯಾದವನೂ ಕೂಡ, ತಾನು ಹೋದಕಡೆಯಲ್ಲಿ ಸಾಧುಗ ಳಾದ ಗೃಹಸ್ಕರ ನಿವಾಸಗಳನ್ನು ಸೇರಿ, ಅಲ್ಲಲ್ಲಿ ನಿದ್ರಾಹಾರಗಳನ್ನು ಸಿರಹಿ ಸಿಕೊಂಡು ತನ್ನ ಜೀವನವನ್ನು ಕಳೆಯುತ್ತ ನಿಶ್ಚಿಂತನಾಗಿರಬಹುದೆಂದೂ ಗ್ರಹಿಸಿದೆನು. ಆಮೇಲೆ ನಾನು ಊರ್ಣನಾಭಿ (ಜೇಡರಹುಳು) ಗಳ ಚರೆ ಯಿಂದ ಗ್ರಹಿಸಿದ ವಿಷಯವನ್ನು ತಿಳಿಸುವೆನು ಕೇಳು. ಜೇಡರಹುಳುಗಳು ತಮ್ಮ ಹೃದಯದಿಂದಲೇ ದಾರವನ್ನು ನಿಮ್ಮಿಸಿ, ಅದನ್ನು ನಾನಾಕಡೆಗೂ ಬಲೆಯಂತೆ ವಿಸ್ತರಿಸಿ, ಅದರಲ್ಲಿಯೇ ತಾನು ಏಹರಿಸುತ್ತಿದ್ದು, ತಿರುಗಿ ಆ ನೂಲನ್ನು ತನ್ನಲ್ಲಿಯೇ ಅಡಗಿಸಿಟ್ಟುಕೊಳ್ಳುವುದಲ್ಲವೆ ? ಅದರಂತೆಯೇ ಭಗವಂತನು, ಮೊದಲು ಪ್ರಳಯದಶಿ ಯಲ್ಲಿ ತಾನು ತನ್ನ ಸಂಕಲ್ಪ ರೂಪ ವಾದ ಮಾಯೆಯಿಂದ ಸೃಷ್ಟಿಸಿದ ಜಗತ್ತೆಲ್ಲವನ್ನೂ , ಕಾಲರೂಪವಾದ ತನ್ನ ಶಕ್ತಿಯಿಂದ ಉಪಸಂಹರಿಸಿ, ತನ್ನಲ್ಲಿಯೇ ಅಡಗಿಸಿಟ್ಟುಕೊಂಡು, ತಾ ನೊಬ್ಬನಾಗಿಯೇ ನಿಲ್ಲುವನು. ಎಂದರೆ,ಚಿದಚಿತ್ತುಗಳೆರಡೂ ನಾಮರೂಪ ವಿಭಾಗಗಳಿಲ್ಲದ ಸೂಕ್ಷದಶಿಯಿಂದ, ಆ ಪರಮಪುರುಷನಿಗೆ ಶರೀರಭೂತ ವಾಗಿ ನಿಲ್ಲುವುದು, ಸೃಷ್ಟ ಕಾಲದಲ್ಲಿ ಭಗವಂತನು ತನಗೆ ಶರೀರವಾದ ಆ ಸೂಕ್ಷಚಿದಚಿತ್ತುಗಳನ್ನೇ ಸ್ಕೂಲರೂಪಕ್ಕೆ ತಿರುಗಿಸಿ, ತನ್ನ ಸಂಕಲ್ಪ ಶಕ್ತಿಯಿಂದ ಪ್ರಪಂಚರೂಪವಾಗಿ ಹರಡುವನು. ಇದರಿಂದ, ಈ ಜಗತ್ತಿಗೆ ಆ ಭಗವಂತನೇ ನಿಮಿತ್ತಕಾರಣನಾಗಿಯೂ,ಉಪಾದಾನಕಾರಣನಾಗಿಯೂ ಇರುವನು ಹೀಗೆ ಪ್ರಪಂಚವು ಸೂಕ್ಷದಶೆಯಲ್ಲಿಯೂ, ಸ್ಕೂಲದಶೆಯಲ್ಲಿ ಯೂ ಆ ಭಗವಂತನಿಗೆ ಶರೀರವಾಗಿಯೇ ಇರುವುದರಿಂಥ, ಆತನು ಅವೆಲ್ಲ ಕ್ಕೂ ಆಶ್ರಯವಾಗಿ, ತನಗೆ ಬೇರೊಂದು ಆಧಾರವಸ್ತುವಿಲ್ಲದೆ, ಎಲ್ಲವೂ ತಾ ನೊಬ್ಬನೇ ಆಗಿರುವನು. ಸೃಷ್ಟಿದಶೆಯಲ್ಲಿ ವೈಷಮ್ಯದಿಂದಿದ್ದ ಸತ್ಯಾದಿಗಳೆ ಲ್ಲವೂ, ಕಾಲರೂಪವಾದ ಆವನ ಸಂಕಲ್ಪಶಕ್ತಿಯಿಂದ, ಪ್ರಳಯದಶೆಯಲ್ಲಿ ಸಾಮ್ಯವನ್ನು ಹೊಂದಿ, ಒಂದೇಪಥವಾಗುವುವು. ಭಗವಂತನು ಹೀಗೆ ಸಕಲ ಜಗತ್ಕಾರಣಭೂತನಾದುದರಿಂದ jಆದಿಪುರುಷನೆನಿಸಿಕೊಂಡು, ಚಿದಚಿತ್ತು