ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೯೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨Ww ಅಧ್ಯಾ, ೧೦ || ಏಕಾದಶಕ್ಕಂಧವು. ನಿರುದ್ದೇಶವಾಗಿ ಅನುಷಿ ಸುತ್ತ ಬರುವುದರಿಂದ ಶುದ್ಧ ಮನಸ್ಕನಾಗುವನು. ಅದರಿಂದ ಅಂತವನು ಆತ್ಮ ಪರಮಾತ್ಮ ಸ್ವರೂಪವನ್ನು ಚೆನ್ನಾಗಿ ಚಿಂತಿಸಿ ಬಲ್ಲನು.ವಿಷಯಾಸಕ್ತರಾದ ಜನರೆಲ್ಲರೂ ಶಾದಿಭೋಗಗಳನ್ನುದ್ದೇಶಿಸಿಯೇ ಪ್ರಯತ್ನಿ ಸುತ್ತಿರುವರೆಂದೂ,ಆ ಪ್ರಯತ್ನದಿಂದ ಅವರಿಗೆ ಕೊನೆಗೆ ಆ ಉದ್ದೇ ಶಕ್ಕೆ ವಿರುದ್ಧವಾದ ಫಲವೇ, ಎಂದರೆ ದುಃಖವೇ ಪ್ರಾಪ್ತವಾಗುವು ದೆಂದೂ, ಅವನಿಗೆ ತಾನಾಗಿಯೇ ತಿಳಿಯುವುದು. ಈ ತಿಳುವಳಿಕೆಯು ಯಾ ವಾಗ ಹುಟ್ಟುವುದೋ, ಆಗ ಅವನಿಗೆ ಕಾಯಾಫಲಗಳಲ್ಲಿ ತನಗೆ ತಾನೇ ಜಿ ಹಾಸೆಯೂ ಹುಟ್ಟುವುದು, ಕನಸಿನಲ್ಲಿ ತೋರುವ ಸುಖದುಃಖಗಳೂ, ಮನ ಸ್ಸಿನಲ್ಲಿ ಹುಟ್ಟುವ ಮನೋರಥಗಳೂ, ಒಮ್ಮೆ ಪ್ರಿಯವಾಗಿಯೂ, ಮತ್ತೊ ಮೈ ಆಪ್ರಿಯವಾಗಿಯೂ ನಾನಾವಿಧವಾಗಿ ತೋರಿದರೂ, ಕೊನೆಗೆ ಯಾವ ಪುರುಷಾವನ್ನೂ ಕೈಗೂಡಿಸದೆ ವಿಫಲವಾಗುವಂತೆ, ಆತ್ಮನಲ್ಲಿ ದೇವ ಮನು ಪ್ಯಾಭೇದಗಳೂ, ಶಬ್ದಾದಿ ವಿಷಯಗಳೂ ಬುದ್ಧಿಗೆ ತೋರುತ್ತಿದ್ದರೂ, ಅವೆಲ್ಲವೂ ಅಸತ್ಯಗಳಾದುದರಿಂದ, ಕೊನೆಗೆ ವಿಫಲಗಳೇ ಆಗುವುವು. ಆದುದ ರಿಂದ ತತ್ವವಿಮರ್ಶನೆಯಿಂದಲೇ ಮನಸ್ಸಿನಲ್ಲಿ ಕಾಮವು ಬಿಟ್ಟು ಹೋಗ ಬೇಕೇ ಹೊರತು, ಆಸತ್ಯಗಳಾದ ವಿಷಯಾದಿಗಳ ಚಿಂತೆಯಿಂದ ಕಾಮಾದಿ ಗಳು ಮತ್ತಷ್ಟು ಪ್ರಬಲವಾಗಿ, ಕೊನೆಗೆ ದುಃಖಕ್ಕೆ ಮೂಲವಾಗುವುದು. ಆದುದರಿಂದ ವಿವೇಕಿಯಾದವನು, ನನ್ನನ್ನೇ ಪರಮಪುರುಷಾರವೆಂದು ನಂಬಿ, ನಿಷ್ಕಾಮವಾದ ನಿವೃತಿಕರವನ್ನೇ ಆಚರಿಸುತ್ತ ಬರಬೇಕು. ಫಲಾ ಪೇಕ್ಷೆಯಿಂದ ನಡೆಸತಕ್ಕ ಪ್ರವೃತ್ತಿಕೆಗಳೆಲ್ಲವನ್ನೂ ತ್ಯಜಿಸಬೇಕು. ಕಾಮ್ಯ ಕರಗಳು ಎಷ್ಟೇ ಭೋಗಾಭಿಲಾಷೆಯನ್ನು ಹುಟ್ಟಿಸಿದರೂ, ತತ್ವಜ್ಞಾನ ದಲ್ಲಿ ಪ್ರವರ್ತಿಸಿದವನಿಗೆ ಆ ಕರಗಳಲ್ಲಿ ಪ್ರವೃತ್ತಿಯುಂಟಾಗದು. ಬ್ರಹ್ಮ ಜ್ಞಾನವನ್ನ ಪೇಕ್ಷಿಸುವವನು, ಯಾವಾಗಲೂ ಅಂತರಿಂಪ್ರಿಯ ಬಹರಿಂದ್ರಿ ಯಗಳನ್ನು ನಿಗ್ರಹಿಸುವುದಕ್ಕೆ ಪ್ರಯತ್ನಿಸುತ್ತಿರಬೇಕು. ಶೌಚಾದಿನಿಯಮಗ ಇನ್ನೂ ಕೂಡ ಯಥಾಶಕ್ತಿಯಾಗಿ ನಡೆಸುತ್ತ, ನನ್ನಲ್ಲಿಯೇ ನಟ್ಟ ಮನಸ್ಸು ಇವನಾಗಿರಬೇಕು. ಮತ್ತು ನನ್ನ ಬ್ರಹ್ಮದ ಸ್ವರೂಪವನ್ನು ಚೆನ್ನಾಗಿ ತಿಳಿದವನಾಗಿಯೂ, ಸಮಸ್ತವನ್ನೂ ನನ್ನ ಸ್ವರೂಪದಿಂದಲೇ ಭಾವಿಕ