ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩8 ಸರ್ಗ, ೧೧.] ಅಯೋಧ್ಯಾಕಾಂಡವು. ಯಂತೆ ನಡೆಸಿಕೊಡುವುದರಲ್ಲಿ ಸಂದೇಹವಿಲ್ಲ. ನನ್ನ ದೇಹವನ್ನಾ ದರೂ ಬಿಟ್ಟು, ಉಳಿದ ಮಕ್ಕಳನ್ನಾದರೂ ಅನಾದರಿಸಿ, ಯಾವ ರಾಮನನ್ನು ಪೋ ಷಿಸಬೇಕೆಂದಿರುವೆನೋ, ಆ ರಾಮನಾಣೆಗೂ ನಿನ್ನ ಇಷ್ಟವನ್ನು ನಡೆಸಿ ಕೊಡುವೆನು. ಎಲೆ ಕಲ್ಯಾಣಿ! ಪ್ರಾಣಕ್ಕಿಂತಲೂ ಮೇಲಾದ ರಾಮನಮೇಲೆ ಯೇ ಆಣೆಯಿಟ್ಟು ಪ್ರಮಾಣಯಾಡಿಕೊಡುವೆನಲ್ಲವೆ? ಇಷ್ಟು ಮಟ್ಟಿಗೆ ಮೋ ಹದಿಂದ ನಿನಗೆ ವಶವಾಗಿರುವ ನನ್ನ ಮನಸ್ಸನ್ನು ನೀನು ತಿಳಿದೂ,ಹೀಗೆ ಶಂ ಕಿಸಿ, ನನ್ನ ನ್ನು ದುಃಖಪಡಿಸಬಹುದೆ ? ಈಗಲಾದರೂ ನಿನ್ನ ಮಾತಿಗೆ ನಾನು ತಪ್ಪವನಲ್ಲವೆಂದು ನಿರ್ಧರಿಸಿಕೊಂಡು, ನನ್ನನ್ನು ದುಃಖದಿಂದ ಬಿಡಿಸಿ ಬದು ಕಿಸು, ನಿನ್ನ ದುಃಖವನ್ನು ನೋಡಿ ನಾನು ಹೇಗೆತಾನೇ ಸಹಿಸುವೆನು ? ತ್ರಿಕ ರಣಶುದ್ಧಿಯಿಂದ ನಾನು ನಿನಗೆ ಅಧೀನನೇ ಇಲ್ಲವೇ ಎಂಬುದನ್ನು ನಿನ್ನ ಮನ ಸ್ಟಾಕ್ಷದಿಂದ ನೀನೇ ಆಲೋಚಿಸಿ ನೋಡು' ಸಂದೇಹಪಡದೆ ಉಚಿತ ರೀತಿಯನ್ನರಿತು ನಿನ್ನಿಷ್ಟವನ್ನು ಹೇಳು! ನನ್ನನ್ನು ಮೋಹಪಾಶದಲ್ಲಿ ಸಿಕ್ಕಿ ಸಿಕೊಂಡಿರುವ ನಿನ್ನ ಮಹಿಮೆಯನ್ನೆ ನೀನು ತಿಳಿಯೆಯಾ ! ಇನ್ನು ನನ್ನಲ್ಲಿ ನಿನಗೆ ಸಂದೇಹವೇಕೆ ? ಸತ್ಯವಾಗಿ ನಿನ್ನ ಇಷ್ಟವನ್ನು ನಡೆಸಿಕೊಡುವೆ ನು. ನನ್ನ ಪುಣ್ಯದಮೇಲೆ ಆಣೆಯಿಟ್ಟು ಸತ್ಯ ಮಾಡುವೆನು! ಸಂಕೋಚ ಪಡದೆ ನಿನ್ನ ಇಷ್ಟವನ್ನು ಹೇಳು.” ಎಂದನು. ಇದನ್ನು ಕೇಳಿ ಕೈಕೇಯಿ ಯು, ದಶರಥನು ತನ್ನ ಪಾಶಕ್ಕೆ ಸಿಕ್ಕಿಬಿದನೆಂದು ಸಂತೋಷಹೊಂದಿ, ಮಂಥರೆಯ ದುರ್ಬೋಧನೆಯನ್ನೇ ಮನಸ್ಸಿನಲ್ಲಿಟ್ಟು ಕೊಂಡಿದ್ದು, ಯು ಕಾಯುಕ್ತ ವನ್ನೂ ವಿಚಾರಿಸದೆ, ಕೇವಲಪಕ್ಷಪಾತಬುದ್ಧಿಯಿಂದ ಸ್ಟಾರ್ ಪರಳಾಗಿ, ತನ್ನ ಹಗೆಗಳೊಡನೆಯೂ ಆಡಬಾರದ ಮಾತನ್ನು ಆಡುವು ದಕ್ಕೆ ಉಪಕ್ರಮಿಸಿದಳು. ರಾಜನು ಸತ್ಯಕ್ಕೆ ತಪ್ಪುವವನಲ್ಲವಾದುದರಿಂದ, ಆತನು ಪ್ರತಿಜ್ಞೆ ಮಾಡಿಕೊಟ್ಟಾಗಲೇ ತನ್ನ ಕೋರಿಕೆಯು ಕೈಗೂಡಿತೆಂದು ನಿಶ್ಚಯಿಸಿ ಮನಸ್ಸಿನಲ್ಲಿಯೇ ಆನಂದಪಡುತ್ತಿದ್ದಳು. ಆದರೆ ಆ ಸಂತೋಷ ವನ್ನು ಹೊರಕ್ಕೆ ಕಾಣಿಸಿಕೊಳ್ಳದೆ, ಕೌಠ್ಯವನ್ನೆ ತೋರಿಸುತ್ತ, ರಾಜನನ್ನು ಕುರಿತು,ಮೃತ್ಯುವನ್ನೇ ಆತನ ಮುಂದೆ ತಂದಿಡುವಂತೆ ಮಹಾಘೋರವಾದ ಒಂದಾನೊಂದು ಮಾತನ್ನು ಹೇಳುವಳು. 11 ಎಲೆ ನಾಥಾ ! ನೀನು ಇದುವ 23