ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೧.| ಅಯೋಧ್ಯಾಕಾಂಡವು. ರವಲ್ಲವೆ? ನೀನು ರಾಜರಲ್ಲಿ ಬಹಳ ಸತ್ಯಸಂಧನೆಂದು ಖ್ಯಾತಿಹೊಂದಿರುವೆ! ಅದರಮೇಲೆ ನನಗೆ ಪ್ರಾಣಪ್ರಿಯನಾಗಿಯೂ ಇರುವೆ!ನಾನು ಬೇರೆ ಯಾವು ದನ್ನೂ ಕೇಳುವವಳಲ್ಲ. ನೀನು ಪ್ರತಿಜ್ಞೆ ಮಾಡಿಕೊಟ್ಟಿರುವ ಆ ಎರಡುವರ ಗಳನ್ನು ಕೊಟ್ಟರೆ ಸಾಕು. ನೀವು ಪ್ರತಿಜ್ಞೆಗೆ ತಪ್ಪಿದರೆ,ಆ ಅವಮಾನವನ್ನು ಸಹಿಸಿಕೊಂಡು ನಾನು ಬದುಕಿರಲಾರೆನು, ಪ್ರಾಣತ್ಯಾಗವನ್ನು ಮಾಡುವು ದೇ ನಿಜವು” ಎಂದಳು. ಹೀಗೆ ಕೈಕೇಯಿಯು ದಶರಥನನ್ನು ಮಾತಿಗೆ ಸಿಕ್ಕಿಸಿಕೊಳ್ಳಲು, ಬೇಟೆಗಾರನ ಬಲೆಗೆ ಸಿಕ್ಕಿಬಿದ್ದ ಜಿಂಕೆಯಂತೆ,ದಶರಥನು ತನ್ನ ಬಾಯಿಂದ ತಾನೇ ಸಿಕ್ಕಿಬಿದ್ದು, ಅತ್ತಿತ್ತ ಅಲುಗಲಾರದೆ, ಅಪಮ್ಮ, ತ್ಯುವಿಗೊಳಗಾಗುವ ಸಮಯವು ಬಂದೊದಗಿತು. ಕೌಮಾ ರದಿಂದ ಬುದ್ಧಿಗೆಟ್ಟು ತನಗೆ ವರವನ್ನು ಕೊಡುವುದಾಗಿ ಒಪ್ಪಿರುವ ದಶಂ ತನನ್ನು ನೋಡಿ, ಕೈಕೇಯಿಯು ಎಲೈ ಪ್ರಾಣನಾಥನೆ!ಆಗ ನೀನು ನನಗೆ ವಾಗ್ಯಾನ ಮಾಡಿರುವ ವರಗಳಿಗಾಗಿ, ಈಗ ನಾನು ಅಪೇಕ್ಷಿಸುವ ಎರಡು ವಿಷಯಗಳನ್ನು ತಿಳಿಸುವನು ಕೇಳು. ಈಗ ನೀನು ರಾಮನ ಪಟ್ಟಾಭಿಷೇಕಾರವಾಗಿ ಸಮಸ್ತ ಸನ್ನಾಹಗಳನ್ನೂ ಸಿದ್ಧಪಡಿಸಿರುವೆಯಲ್ಲವೆ ? ಅವುಗಳಿಂದಲೇ ಭರತನಿಗೆ ಪ ಬ್ಯಾಭಿಷೇಕವನ್ನು ನಡೆಸಬೇಕು.ಇದೇ ನಾನು ಕೇಳುವ ಮೊದಲನೆಯವರವು! ನೀನು ನನ್ನಲ್ಲಿ ಪ್ರೀತಿಯಿಟ್ಟು ಕೊಟ್ಟಿರುವ ಎರಡನೆಯ ವರಕ್ಕೂ ಈಗ ತಕ್ಕ ಸಮಯವು ಒದಗಿರುವುದು. ಆ ವರಕ್ಕಾಗಿ, ರಾಮನು ಹದಿನಾಲ್ಕು ವರ್ಷಗಳ ವರೆಗೆ ನಾರುಬಟ್ಟೆಯನ್ನುಟ್ಟು, ಜಟಾಧಾರಿಯಾಗಿ ಕೃಷ್ಣಾಜಿನವನ್ನು ಧರಿಸಿ ತಾಪಸನಂತೆ ದಂಡಕಾರಣ್ಯದಲ್ಲಿರಬೇಕು. ಎಲೆ ರಾಜನೆ ! ಆಗ ಭರತನಿಗೆ ಯವರಾಜ್ಯವು ನಿಷ್ಕಂಟಕವಾಗಿ ಸ್ಥಿರಪಡುವುದು. ಭರತನು ನೆಮ್ಮದಿಯಿಂ ದ ರಾಜ್ಯವನ್ನು ಆಳುತ್ತಿರಬೇಕೆಂಬುದೇ ನನ್ನ ಕೋರಿಕೆ'ನೀನು ಕೊಟ್ಟ ವರಗ ಇನ್ನೇ ನಾನು ಈಗ ಯಾಚಿಸಿದೆನೇ ಹೊರತು, ಹೊಸದಾಗಿ ಬೇರೊಂದನ್ನ ಕೇಳುವವಳಲ್ಲ. ಭರತನಿಗೆ ಮಾಡುವ ರಾಜ್ಯಾಭಿಷೇಕವನ್ನು ನೋಡಬೇಕೆಂಬ ನನ್ನ ಸಂತೋಷವು ಹಾಗಿರಲಿ ! ಮುಖ್ಯವಾಗಿ ರಾಮನು ಈಗಲೇ ಕಾಡಿಗೆ ಹೊರಡುವುದನ್ನು ಮನಸ್ತ್ರಪ್ತಿಯಿಂದನೋಡಿ ಸಂತೋಷಪಡಬೇಕೆಂಬುದೇ