ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫೩ ಶ್ರೀಮದ್ರಾಮಾಯಣವು [ಸರ್ಗ' ೧೨೦ ನನ್ನ ಮುಖ್ಯವಾದ ಅಭಿಲಾಷೆ ! ಎಲೈ ರಾಜನೆ ! ನೀನು ರಾಜಾಧಿರಾಜ ನೆಂದೂ, ಸತ್ಯಸಂಧನೆಂದೂ ಲೋಕದಲ್ಲಿ ಖ್ಯಾತಿಗೊಂಡಿರುವೆ. ಈ ಖ್ಯಾತಿ ಯನ್ನು ತಪ್ಪಿಸಿಕೊಳ್ಳಬೇಡ ! ನಿನ್ನ ಕುಲೀನತೆಯನ್ನೂ, ನಿನ್ನ ಶೀಲವನ್ನೂ ನಿನ್ನ ಜನ್ಮವನ್ನೂ ರಕ್ಷಿಸಿಕೊಳ್ಳುವನಾಗು ! ತಪಸ್ವಿಗಳಾದವರು ಪುಣ್ಯಲೋ ಕಪ್ರಾಪ್ತಿಗೆ, ಸತ್ಯಕ್ಕಿಂತಲೂ ಬೇರೆಯಾದ ಸಾಧನವೇ ಇಲ್ಲವೆಂದು ಹೇಳಿರು ವುದನ್ನು ನೀನೂ ತಿಳಿಯದವನಲ್ಲ. ನಿನ್ನ ಕೀರ್ತಿಯನ್ನು ಕಾಪಾಡಿಕೊಳ್ಳುವುದು ನಿನ್ನ ಭಾರವಾಗಿದೆ” ಎಂದಳು, ಇಲ್ಲಿಗೆ ಹನ್ನೊಂದನೆಯ ಸರ್ಗವ. + ದಶರಥನ ದುಃಖವು. ++ " ಈ ಮಾತುಗಳು ಕಿವಿಗೆ ಬಿಡಕೂಡಲೆ ರಾಜನು,ದಿದ್ದಾಂತನಾಗಿ, ಹಾಗೆಯೇ ಕ್ಷಣಕಾಲದವರೆಗೆ ಮೂರ್ಛಿತನಾಗಿ ಬಿದ್ಧನು. ಆಮೇಲೆ ಮೆಲ್ಲಗೆ ಚೇತರಿಸಿಕೊಂಡು, ತನ್ನ ಮನಸ್ಸಿನಲ್ಲಿ ತಾನು « ಇದೇನು ? ಸ್ವಪ್ಪ ವೋ? ಅಥವಾ ಮೋಹವೋ? ಕೈಕೇಯಿಯು ನಿಜವಾಗಿ ಹೀಗೆ ಹೇಳಿರುವಳೆ? ಎಂದಿ ಗೂ ಹೇಳಲಾರಳು. ಅವಳಿಗೆ ರಾಮನಲ್ಲಿರುವ ವಾತ್ಸಲ್ಯಕ್ಕೆ ಪಾರವೇ ಇಲ್ಲ ! ನಾನೇ ಭಾಂತಿಗೊಂಡಿರಬಹುದೆ? ಅಥವಾ ನಾನು ನನ್ನ ಪೂವ್ರಜನ್ಮದಲ್ಲಿ ಅನುಭವಿಸಿದ ಕಷ್ಟಗಳು ಈಗ ನನ್ನ ಭಾವನೆಗೆ ಬಂದಿರಬಹುದೆ? ಜನ್ಮಾಂತರ ದಲ್ಲಿಯೂ ಈ ವಿಧವಾದ ಅವಸ್ಥೆಯನ್ನು ನಾನು ಅನುಭವಿಸಿರಲಾರನು. ನನಗೆ ಈಗ ಯಾವುದಾದರೂ ಚಿತ್ತವಿಕಾರವುಂಟಾಗಿ ಈ ವಿಧವಾದ ಭಾವನೆ ಯುಂಟಾಗಿರಬಹುದೆ? ಅದಕ್ಕೂ ಕಾರಣವಿಲ್ಲ ! ಇದೇನಾಗಿರಬಹುದು ಎಂ ದು ತನ್ನಲ್ಲಿಯೇ ತಾನು ಪರಿತಪಿಸುತ್ತಿದ್ದನು. ಆಗ ಅವನಿಗೆ ಯಾವು ದೊಂದು ನಿಶ್ಚಯವೂ ತೋರಲಿಲ್ಲ. ಮನಸ್ಸಿಗೆ ಸ್ವಲ್ಪವಾದರೂ ನೆಮ್ಮದಿ ಯಿರಲಿಲ್ಲ. ಕೈಕೇಯಿಯ ಮಾತನ್ನು ಸ್ಮರಿಸಿಕೊಂಡು ಕ್ಷಣಕ್ಷಣಕ್ಕೂ ಮೂರ್ಛಿತನಾಗುವನು! ಬಹಳ ಹೊತ್ತಿನಮೇಲೆ ಮೆಲ್ಲಗೆ ಚೇತರಿಸಿಕೊಳ್ಳುವ ನು! ಇದಿರಾಗಿ ಬಂದು ನಿಂತಿರುವ ಹೆಣ್ಣು ಹುಲಿಯನ್ನು ನೋಡಿದ ಜಿಂಕೆಯಮ ರಿಯು ಹೇಗೋ ಹಾಗೆ, ಹಿಂದುಮುಂದುತೋರದೆ ಗ್ಯಾಂತನಾಗಿಕಳವ ಳಿಸುವನು ! ಕೊನೆಗೆ ದಶರಥನು ಅಲ್ಲಿ ನಿಲ್ಲಲಾರದೆ, ಹೊರಕ್ಕೆ ಬಂದು