ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


M ಶ್ರೀಮದ್ರಾಮಾಯಣವು [ಸರ್ಗ, ೧> ಬಹುದು ! ನೀರಿಲ್ಲದೆಯೂ ಪೈರುಗಳು ಜೀವಿಸಿರಬಹುದು ! ರಾಮನಿಲ್ಲದೆ ಒಂ ದು ಕ್ಷಣವಾದರೂ ನನ್ನ ಪ್ರಾಣವು ನಿಲ್ಲಲಾರದು ! :ಎಲೆ ಪಾಪಿನಿ ಇನ್ನು ಸಾಕು! ಈ ನಿನ್ನ ದುರಾಲೋಚನೆಯನ್ನು ಬಿಟ್ಟುಬಿಡು! ಈ ನಿನ್ನ ನಿಶ್ಚ ಯವ ನನ್ನ ಪ್ರಾಣಹಾನಿಗೆ ಕಾರಣವೇಹೊರತು ಬೇರೆಯಲ್ಲ ! ನಾನು ನಿನಗೆ ಪತಿಯೆನಿಸಿಕೊಂಡಿದ್ದರೂ ಚಿಂತೆಯಿಲ್ಲ. ಆದೋ! ತಲೆಯನ್ನು ಬಗ್ಗಿಸಿ ನಿನ್ನ ಕಾಲಿಗೆ ಬೀಳುವೆನು! ನನ್ನಲ್ಲಿ ಪ್ರಸನ್ನಳಾಗು! ಆಹಾ! ಇಂತಹ ಕ್ರೂರವಾದ ಆಲೋಚನೆಯು ನಿನಗೆಲ್ಲಿ ಹುಟ್ಟಿತು? ಇದೇನು? ಒಂದುವೇಳೆ ನೀನು ನಿನ್ನ ಮಗ ನಾದ ಭರತನಲ್ಲಿ ನನಗೆ ಪ್ರೀತಿಯಿರುವುದೇ ಇಲ್ಲವೇ ಎಂಬುದನ್ನು ಕಂಡು ಕೊಳ್ಳಬೇಕೆಂದು ಪರೀಕ್ಷಾರ್ಥವಾಗಿ ಹೀಗೆ ಹೇಳಿರಬಹುದೆ? ಸರಿ! ಹಾಗಿದ್ದರೆ ನೀನು ಭರತನಿಗೆ ಪಟ್ಟಾಭಿಷೇಕವನ್ನು ನಡೆಸಬೇಕೆಂದು ಕೇಳಿದುದೇನೋ ಸಹ ಜವೇ.ಆದರೆ ನೀನು ಪೂರ್ವದಿಂದ ರಾಮನಲ್ಲಿಟ್ಟಿದ್ದ ಪ್ರೇಮವು ನಿನ್ನ ಸ್ಮರಣೆ ಯಲ್ಲಿಲ್ಲವೆ?ರಾಮನೇ ನನ್ನ ಹಿರಿಯಮಗನೆಂದೂ,ಧರಜ್ಞರಲ್ಲಿ ಆತನೇ ಮೇಲಾ ದವನೆಂದೂ,ನಿನ್ನ ಬಾಯಿಯಿಂದ ನೀನೇ ಹೇಳುತಿದ್ದೆಯಲ್ಲಾ! ಈಗ ಅವೆಲ್ಲವೂ ಎಲ್ಲಿಹೋದುವು?ಒಂದುವೇಳೆ ನೀನು ಆ ಮಾತನ್ನು ನನ್ನ ಮುಖೋಲ್ಲಾಸಕ್ಕಾ ಗಿಯೋ, ಅಥವಾ ರಾಮನು ನಿನಗೆ ಮಾಡುತಿದ್ದ ಶುಶೂಷೆಯಿಂದ ಸಂತೋ ಷಹೋಂದಿಯೋ ಹೇಳಿರಬಹುದು. ಈಗ ನಿನಗೆ ಭರತನಲ್ಲಿ ವಿಶೇಷವಾತ್ಸಲ್ಯವು ನೆಲೆಗೊಂಡಿದ್ದರೂ,ರಾಮನಲ್ಲಿ ದ್ವೇಷಬುದ್ದಿಯು ಹುಟ್ಟುವುದಕ್ಕೆ ಕಾರಣವೇ ನು?ನೀನು ಹಿಂದೆ ರಾಮನ ವಿಷಯವಾಗಿ ಹೇಳುತಿದ್ದ ಶ್ಲಾಘನೆಯ ಮಾತುಗ ಳೆಲ್ಲವೂ, ಕೇವಲಮುಖಸ್ತುತಿಯ ಮಾತುಗಳೇಹೊರತು ನಿಜವಾದುವುಗಳಲ್ಲ ವೆಂದೇ ಊಹಿಸಬೇಕಾಗಿದೆ. ಒಂದುವೇಳೆ ರಾಮನನ್ನು ಕಾಡಿಗೆ ಕಳುಹಿಸಬೇ ಕೆಂಬುದನ್ನು ಕೂಡ, ನನ್ನ ಮನಸ್ಸನ್ನು ಪರೀಕ್ಷಿಸುವುದಕ್ಕಾಗಿಯೇ ನೀನು ಹೇಳಿ ರಬಹುದೆ ? ಅದಕ್ಕೂ ಅವಕಾಶವಿಲ್ಲ! ಹಾಗಿದ್ದರೆ ನೀನು ಇಷ್ಟು ಸಂಕಟಪಡು ತಿರಲಿಲ್ಲ!ಎಲೆ ಪಾಪಿನಿ ! ಹೀಗೆ ನೀನು ದುಃಖದಿಂದ ಕೊರಗುವುದಲ್ಲದೆ, ನನ ಗೂ ಇಷ್ಟು ಸಂಕಟವನ್ನುಂಟುಮಾಡಬಹುದೆ ? ಯಾರ ದುರ್ಬೋಧನೆಗೊಳ ಪಟ್ಟು ಈ ಶೂನ್ಯಗೃಹದಲ್ಲಿ ಬಂದು ಸೇರಿರುವೆ? ನಿನ್ನ ಸ್ವಬುದ್ಧಿಯಿಂದ ನೀನು ಹೀಗೆ ಮಾಡಿರುವುದಾಗಿ ತೋರಲಿಲ್ಲ! ಅಯ್ಯೋ! ನೀತಿಗೆ ನೆಲೆಯಾದ ಈ ನಮ್ಮ