ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ. ೧೩.] - ಅಯೋಧ್ಯಾಕಾಂಡವು. Ke ನು ಬಿಳುವುದನ್ನು ನೋಡಿ ಕೈಕೇಯಿಯು, ನೀಡಿದ್ದ ತನ್ನ ಕಾಲುಗಳೆರಡನ್ನೂ ಮತ್ತೊಂದುಕಡೆಗೆ ಒತ್ತರಿಸಿಕೊಂಡುದರಿಂದ, ಈತನು ನೆಲದಮೇಲೆ ಬಿದ್ದನೇ ಹೊರತು ಅವಳ ಪಾದಗಳನ್ನು ಸ್ಪರ್ಶಿಸಲಿಲ್ಲ.ಇಲ್ಲಿಗೆ ಹನ್ನೆರಡನೆಯ ಸರವು. .(ದತರಥನು ಪುನ: ಕೈಕೇಯಿಯನ್ನು ಸಮಾಧಾನ )+w ಪಡಿಸಿದುದು. ದಶರಥನು ಇಂತಹ ಮಹಾವ್ಯಸನವನ್ನು ಎಂದೂ ಅನುಭವಿಸಿದವನಲ್ಲ. ರಾಜಾಧಿರಾಜನಾಗಿದ್ದು ನೆಲದಮೇಲೆ ಉರುಳುವುದೆಂದರೇನು ? ಹೆಂಡತಿಯ ಕಾಲಿಗೆ ಬಿಳುವುದೆಂದರೇನು ? ಹೀಗೆ ತನ್ನ ಸ್ಥಿತಿಗೆ ಯೋಗ್ಯವಲ್ಲದ ಮಹಾದು ರ್ದಶೆಯನ್ನು ಹೊಂದಿ, ಗಳಿಸಿಟ್ಟ ಪುಣ್ಯದ ಫಲಗಳೆಲ್ಲವೂ ತೀರಿಹೋದಮೇ ಲೆ ಸ್ವರ್ಗದಿಂದ ಕೆಳಗೆ ಬಿದ್ದ ಯಯಾತಿಯಂತೆ, ಶೋಚನೀಯಾವಸ್ಥೆಯಲ್ಲಿ ದ್ದನು. ಆತನಲ್ಲಿ ಇಂತಹ ದುರವಸ್ಥೆಯನ್ನು ನೋಡುತ್ತಿರುವಾಗಲೂ, ಅವರ ಸ್ವರೂಪಿಣಿಯಾದ ಕೈಕೇಯಿಗೆ, ಆತನಲ್ಲಿ ಎಳ್ಳಷ್ಟು ಮರುಕವಾಗಲಿ, ಕರು ಣವಾಗಲಿ ಹುಟ್ಟಲಿಲ್ಲ. ಅತ್ಯಂತಭಯಜನಕವಾದ ರಾಜನ ದುಸ್ಕೃತಿಯನ್ನು ನೋಡಿಯೂ, ಆಕೆಗೆ ಭಯವುಂಟಾಗಲಿಲ್ಲ. ತನ್ನ ಕೋರಿಕೆಯು ಇನ್ನೂ ಕೈಗೂ ಡಲಿಲ್ಲವೆಂಬ ಒಂದೇ ಹಠದಿಂದ ತಿರುಗಿ ತನ್ನ ವರಗಳನ್ನು ಕೊಟ್ಟೇತೀರಬೇಕೆಂ ದು ನಿರ್ಬಂಧಿಸುತ್ತ, ರಾಜನನ್ನು ಕುರಿತು 14 ಎಲೆ ಮಹಾರಾಜನೆ ! ಇದೇನು? ನೀನು ಆಗಾಗ ಇತರರ ಮುಂದೆ «« ನಾನೇ ಸತ್ಯಸಂಧ” ನೆಂದೂ “ ನಾನೇ ವ್ರತನಿಷ್ಠ” ನೆಂದೂ ಹೇಳಿಕೊಳ್ಳುತ್ತಿದ್ದ ಆತ್ಮ ಸ್ತುತಿಯೆಲ್ಲವೂ ಈಗ ಎಲ್ಲಿ ಹೋಯಿತು ? ನನಗೆ ಮೊದಲು ಪ್ರತಿಜ್ಞೆ ಮಾಡಿಕೊಟ್ಟ ವರಗಳನ್ನು ಈಗ ತಪ್ಪಿಸಬೇಕೆಂದಿರುವೆಯಾ ? ಯಾವ ಕಾರಣದಿಂದ ನಿನಗೆ ಈ ದುರ್ಬುದ್ದಿ ಯು ಹುಟ್ಟಿತು?”ಎಂದಳು. ಇದನ್ನು ಕೇಳಿ ದಶರಥನು, ಮಿತಿಮೀರಿದ ಕೋ ಪದಿಂದ ಒಂದುಕ್ಷಣಕಾಲದವರೆಗೆ ಪ್ರಜ್ಞೆ ತಪ್ಪಿದಂತಿದ್ದು, ಕೈಕೇಯಿಯ ನ್ನು ನೋಡಿ, ಎಲೆ ದುಶೀಲೆ ! ನೀನು ನನಗೆ ಶತ್ರುವಾಗಿಯೇ ಹುಟ್ಟಿ, ರವೆ! ನಾನೂ ಸತ್ತು, ಪುರುಷಶ್ರೇಷ್ಠನಾದ ರಾಮನೂ ಕಾಡಿಗೆಹೊರಟು ಹೋದಮೇಲೆ,ನೀನು ಸುಖವಾಗಿರಬಹುದು!ನಿನ್ನ ಕೋರಿಕೆಯು ಕೈಗೂಡಲಿ! ಒಂದುವೇಳೆ ನಾನು ಸ್ವರ್ಗಕ್ಕೆ ಹೋದರೂ, ಅಲ್ಲಿ ದೇವತೆಗಳು ನನ್ನನ್ನು ನೋ