ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


seo

  • ಶ್ರೀಮದ್ರಾಮಾಯಣವು [ಸರ್ಗ. ೧೪. ತುಗಳು ನನಗೆ ಕೇಳಲಸಹ್ಯವಾಗಿರುವುವು. ಸುಮ್ಮನೆ ಉತ್ತರಪ್ರತ್ಯುತ್ತರಗ ಳಿಂದೇನು! ದುಃಖವನ್ನು ಬಿಡು! ರಾಮನನ್ನು ಉಪಾಯದಿಂದ ಈಗಲೇ ಇಲ್ಲಿ ಗೆ ಕರೆಸು! ಆತನನ್ನು ಕಾಡಿನಲ್ಲಿರುವಂತೆ ನಿಯಮಿಸಿ, ನನ್ನ ಮಗನನ್ನು ರಾಜ್ಯ ದಲ್ಲಿರಿಸು! ಹೀಗೆ ಮಾಡಿದಹೊರತು ನನ್ನ ಮನಸ್ಸಿಗೆ ನೆಮ್ಮದಿಯಿರದು ! ನೀ ನೂ ಕೃತಕೃತ್ಯನಾಗಲಾರೆ! ಆದುದರಿಂದ ಮೊದಲು ನನ್ನನ್ನು ನಿಷ್ಕಂಟಕವಾ ದ ಸ್ಥಿತಿಯಲ್ಲಿರಿಸಿ, ಆಮೇಲೆ ನೀನು ಪ್ರಾತರಾಹಿ ಕಾದಿಕೃತ್ಯಗಳನ್ನು ನಡೆಸುವ ವುದಕ್ಕಾಗಿ ಹೋಗಬಹುದು ” ಎಂದಳು. ತೀಕ್ಷವಾದ ಕಶೆಯ ಪೆಟ್ಟಿನಿಂದ ನೊಂದ ಕುದುರೆಯಂತೆ, ರಾಜನು ಅವಳ ಕೂರವಾಕ್ಯದಿಂದ ನೊಂದವ ನಾಗಿ, ಕೈಕೇಯಿಯನ್ನು ಪುನಃ ನೋಡಿ (ಎಲೆ ಫುತುಕಿ! ಆದುದಾಯಿತು! * ಧಮ್ಮ ಪಾಶಕ್ಕೆ ನಾನು ಕಟ್ಟುಬಿದ್ದೆನು. ಈಗ ನನ್ನ ಬುದ್ದಿಯೇ ನನ್ನ ಆಧೀನವಾ ಗಿಲ್ಲ! ಧಶೀಲನಾಗಿ, ನನಗೆ ಪ್ರಾಣಪ್ರಿಯನಾಗಿರುವ ರಾಮನನ್ನು ಇನ್ನೊಂ ದಾವೃತ್ತಿಯಾದರೂ ಮನಸ್ವಿಯಾಗುವಂತೆ ಕಣ್ಣಿಂದ ನೋಡಿಬಿಡಬೇ ಕೆಂದು ನನ್ನ ಆಸೆಯಿರುವುದು” ಎನ್ನುತ್ತಿರುವಾಗಲೇ, ಚೆನ್ನಾಗಿ ಬೆಳಗಾ ಯಿತು. ಸೂರೈನೂ ಉದಿಸಿದನು. ಪರಿಶುದ್ಧವಾದ ಪುಷ್ಯ ನಕ್ಷತ್ರವು ಸಮಿ? ಪಿಸಿತು. ಶುಭಮುಹೂರ್ತ ಕಾಲವು ಪ್ರಾಪ್ತವಾಯಿತು. ಇಷ್ಟರಲ್ಲಿ ಅತ್ಯಲಾಗಿ ಗುಣಸಂಪನ್ನ ನಾದ ವಸಿಷ್ಠನು, ಶಿಷ್ಯರೊಡಗೂಡಿ ಸಮಸ್ಯಸಾಮಗ್ರಿಗಳ ನ್ನೂ ಸಿದ್ಧಪಡಿಸಿಕೊಂಡು, ಪಟ್ಟಣದೊಳಕ್ಕೆ ಪ್ರವೇಶಿಸಿದನು. ಅಷ್ಟರೊಳ ಗಾಗಿ ಬೀದಿಗಳೆಲ್ಲವೂ ಜಲಸೇಚನದಿಂದ ತಂಪೇರಿಸಲ್ಪಟ್ಟಿದ್ದುವು. ಅಲ್ಲಲ್ಲಿ ಧ್ವಜಪತಾಕೆಗಳು ಏರಿಸಲ್ಪಟ್ಟಿದ್ದುವು. ಅಲ್ಲಲ್ಲಿ ಪ್ರಷ್ಟಗಳನ್ನು ಚೆಲ್ಲಿದ್ದರು. ಮನೆಮನೆಯ ಬಾಗಿಲುಗಳಲ್ಲಿಯೂ ಪುಷ್ಪಮಾಲಿಕೆಗಳು ಕಟ್ಟಲ್ಪಟ್ಟಿದ್ದುವು. ಪುರವಾಸಿಗಳೆಲ್ಲರೂ ಹರ್ಷದಿಂದ ಓಡಾಡುತಿದ್ದರು, ಅಂಗಡಿಗಳೆಲ್ಲವೂ ಸದಾ ರ್ಥಸಮೃದ್ಧಿಗಳಿಂದ ಶೋಭಿಸುತ್ತಿದ್ದುವು.ಎಲೈಕ್ಲಿನೋಡಿದರೂ ಈ ಮಹೋ. ತೃವದ ಕೊಂಡಾಟಗಳೇ ನಡೆಯುತ್ತಿದ್ದುವು. ರಾಮನ ಪಟ್ಟಾಭಿಷೇಕವನ್ನು ಸಮಸ್ತಜನಗಳೂ ಕುತೂಹಲದಿಂದ ಇದಿರುನೋಡುತಿದ್ದರು. ಅಲ್ಲಲ್ಲಿ ಸುವಾ
  • ಈ ವಾಕ್ಯದಿಂದ ದಶರಧನು ರಾಮನನ್ನು ಕಾಡಿಗೆ ಕಳುಹಿಸುವುದಕ್ಕೆ ಸ್ವಲ್ಪ ಮಟ್ಟಿಗೆ ಅನುಜ್ಞೆ ಕೊಟ್ಟು ದಾಗಿ ಸೂಚಿತವಾಗುವುದು,

--- - -