ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೪, ಅಯೋಧ್ಯಾಕಾಂಡವು. ೩೮೧ ಸನೆಯುಳ್ಳ ರೂಪಗಳನ್ನು ಹತ್ತಿಸಿಟ್ಟಿದ್ದರು, ಹೀಗೆ ವಸಿಷ್ಠನು ಇಂದ್ರ ಭವನದಂತೆಅತಿಮನೋಹರವಾದ ಆ ಪಟ್ಟಣದ ಬೀದಿಗಳನ್ನು ದಾಟಿಬಂದು, ಅಂತಃಪುರದ ಸಮೀಪವನ್ನು ಸೇರಿದನು. ಅಲ್ಲಿ ಅನೇಕ ಪಕ್ಷಿಸಮೂಹಗಳಿಂದ ಮನೋಹರವಾಗಿಯೂ, ಜನಸಮೃದ್ಧವಾಗಿಯೂ, ಬ್ರಾಹ್ಮಣಗೋಷ್ಠಿ ಯಿಂದ ತುಂಬಿದುದಾಗಿಯ, ಯಜ್ಞಕಾರದಲ್ಲಿ ನಿಪುಣರಾದ ಋಷಿಸ ಮೂಹಗಳಿಂದ ದೂರವಾಗಿಯೂ ಇರುವ ಅಂತಃಪುರವನ್ನು ಪ್ರವೇಶಿಸಿ, ಅಲ್ಲಿದ್ದ ಜನರ ಗುಂಪನ್ನೂ ದಾಟಿಕೊಂಡು ಮುಂದೆ ಬಂದನು. ಈ ಸಂಭ ಮಗಳನ್ನು ನೋಡಿದಾಗ ಆ ವಸಿಷ್ಠ ಸಿಗುಂಟಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಇಷ್ಟರಲ್ಲಿ ಸುಮಂತ್ರನೆಂಬ ಸಾರಥಿಯೂಕೂಡ, ಸಯ್ಯಾಲಂಕಾರ ಭೂಷಿತನಾಗಿ ಆ ಅಂತಃಪು ಬ್ಯಾರಕ್ಕೆ ಬಂದು ಸೇರಿದನು.'ವಸಿಷ್ಠನು ಅಂತಃ ಪರದ್ವಾರದಲ್ಲಿ ನಿಂತಿದ್ದ ಆತನನ್ನು ನೋಡಿ, “ಎಲೆ ಸೂತನೆ ! ನೀನು ಈ ಗಲೇ ಹೋಗಿ ನಾನು ಬಂದಿರುವೆನೆಂದು ದಶರಥನಿಗೆ ತಿಳಿಸು : ಇದೊ! ಇಲ್ಲಿ ನೋಡು, ರಾಮಾಭಿಷೇಕಕ್ಕಾಗಿ ಗಂಗೆಯಿಂದಲೂ, ನಾಲ್ಕು ಸಮುದ್ರಗಳಿಂ ದಲೂ ತುಸಲ್ಪಟ್ಟ ಪುಣ್ಯತೀರ್ಥಗಳಿಂದ ತುಂಬಿದ ಸುವರಕುಂಭಗಳು ಸಿದ್ಧ ವಾಗಿರುವುವು.ಇದೋ ಇಲ್ಲಿ ಅಭಿಷೇಕಾಧ್ಯವಾಗಿ, ಅತ್ತಿಯಮರದಿಂದ ಮಾಡ ಲ್ಪಟ್ಟ ಮಂಗಳಪೀಠವನ್ನು ತರಿಸಿಟ್ಟಿರುವೆನು. ನವಧಾನ್ಯಗಳೂ ಸಿದ್ಧವಾಗಿರು ವುವು. ಸುಗಂಧದ್ರವ್ಯಗಳೆಲ್ಲವನ್ನೂ ತರಿಸಿಟ್ಟಿರುವೆನು. ನವರತ್ನಗಳೂ ಸಿದ್ಧ ವಾಗಿರುವುವು. ಜೇನು, ಮೊಸರು, ತುಪ್ಪ, ಹಾಲು, ದರೈಗಳು, ಪುಷ್ಪಗಳು ಇವೆಲ್ಲವನ್ನೂ ತರಿಸಿಟ್ಟಿರುವೆನು. ಮನೋಹರಾಕಾರವುಳ್ಳ ಆತ್ಮಕನ್ನಿಕೆಯ ರೂ ಸಿದ್ಧರಾಗಿರುವರು. ಇದೋ.ಇಲ್ಲಿ ಮದಿಸಿದ ಮಹಾಗಜವು ನಿಲ್ಲಿಸಲ್ಪಟ್ಟಿ ರುವುದು. ನಾಲ್ಕು ಕುದುರೆಗಳಿಂದ ಕೂಡಿದ, ಕಾಂತಿವಿಶಿಷ್ಟವಾದ ಮಹಾರಥ ವು ಇಲ್ಲಿರುವುದು. ಮೇಲಾದ ಕತ್ತಿ, ಉತ್ತಮವಾದ ಬಿಲ್ಲು, ಪಲ್ಲಕ್ಕಿ,ಚಂದ್ರ

  • “ಇಲ್ಲಿ ಚತುರಶ್ಮಿ ರಥಶ್ಚಿರ್ಮಾ ” ಎಂದು ಮೂಲಶ್ಲೋಕವು. ಇದರಲ್ಲಿ ಎರಡನೆಯ ಅಕ್ಷರವಾದ 'ತು” ಎಂಬುದು, ಗಾಯತ್ರಿಯ ನಾಲ್ಕನೆಯ ಅಕ್ಷರವಾದು ದರಿಂದ, ಇದುವರೆಗೆ ರಾಮಾಯಣದಲ್ಲಿ ಮೂರುಸಹಸ್ರಗ್ರಂಥಗಳು ಮುಗಿದು, ನಾಲ್ಕ ನೆಯಸಹಸ್ರನು ಈ ಶ್ಲೋಕದಿಂದ ಆರಂಭಿಸಲ್ಪಡುವುದೆಂದು ಗ್ರಹಿಸಬೇಕು.