ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೧೪.] ಅಯೋಧ್ಯಾಕಾಂಡವು. &೮೩ ಪ್ರವೇತಿಸಿ, ದಶರಥನ ಸಮೀಪದಲ್ಲಿ ನಿಂತನು. ಆಗಲೂ ಈತನಿಗೆ ಆ ದಶರಥನು ಅನುಭವಿಸುತಿದ್ದ ದುರವಸ್ಥೆಯು ತಿಳಿಯಲಿಲ್ಲ. ಸಂತೋ ಷದಿಂದ ಆತನನ್ನು ಸ್ತೋತ್ರಮಾಡುವುದಕ್ಕಾಗಿ, ಎಂದಿನಂತೆ ಪ್ರಾತಃ ಕಾಲದಲ್ಲಿ ತಾನು ಹೇಳಬೇಕಾದ ಮಂಗಳಾಶಾಸನಗಳನ್ನು ಸಕ್ರಮಿಸಿದನು. ವಿನಯದಿಂದ ಕೈಮುಗಿದು ಎಲೆ ಮಹಾತ್ಮನೆ! * ಸೂರೋದಯಕಾಲ ದಲ್ಲಿ ಸಮುದ್ರನು ಒಂದು ತೇಜೋವಿಶೇಷವನ್ನು ಹೊಂದಿ ಉಕ್ಕಿಬರುವಂತೆ, ನೀನೂ ಸಂತುಷಹೃದಯನಾಗಿ ಆನಂದಿಸು! ಇಂದ್ರನನ್ನು , ಸಾರಥಿಯಾ ದ ಮಾತಲಿಯು, ಹೀಗೆ ಉದಯಕಾಲದಲ್ಲಿ ಸ್ತೋತ್ರಮಾಡುತಲಿದ್ದುದರಿಂದ ಲೇ, ಆ ಇಂದ್ರನು ತನ್ನ ವೈರಿಗಳಾದ ದೈತ್ಯರೆಲ್ಲರನ್ನೂ ಜಯಿಸಿದನು. ಅದರಂ. ತೆ ನಾನೂ ಈಗ ನಿನ್ನ ಶ್ರೇಯಪ್ರಾರನೆಮಾಡುವೆನು. + ಸ್ವತಸ್ಸಿದ್ದನಾ. ಗಿ, ಸತ್ವವಿಭುವಾಗಿರುವ ಪರಬ್ರಹ್ಮನನ್ನು , ಶಿಕ್ಷೆ ಮೊದಲಾದ ಆರು ಅಂ ಗಗಳೊಡಗೂಡಿ ವೇದಗಳೂ, ಮೀಮಾಂಸಾರಿವಿದ್ಯೆಗಳೂ, ಸೃಷ್ಟಿ ಕಾರ್ ಕ್ಯಾಗಿ ಇದೇ ಕಾಲದಲ್ಲಿ ಉದ್ಯೋಥಿಸುವಂತೆ, ನಾನೂ ಈಗ ನಿನ್ನನ್ನು ಎಚ ರಗೊಳಿಸುವೆನು, ಸೂರನು - ಚಂದ್ರನೊಡಗೂಡಿ ಸಮಸ್ಯಭೂತಗಳಿಗೂ ಆಶ್ರಯವಾದ ಈ ಭೂಮಿಯನ್ನು ಎಚ್ಚರಗೊಳಿಸುವಂತೆ, ಈಗ ನಾನೂ ನಿನ್ನ ನ್ನು ಎಚ್ಚರಗೊಳಿಸುವೆನು, ಎಲೆ ಮಹಾರಾಜನೆ ಏಳು ! ಮುಂದೆ ನಡೆ ಯಬೇಕಾದ ಮಹೋತ್ಸವಕ್ಕೆ ತಕ್ಕಂತೆ ಮಂಗಳಾಲಂಕಾರಗಳನ್ನು ಮಾ

  • ಸೂರೋದಯದಲ್ಲಿಯೂ ಸಮುದ್ರವು ಉಕ್ಕಿಬರುವುದುಂಟು, ಅಥವಾ ಮೂಲ ದಲ್ಲಿರುವ ಭಾಸ್ಕರಶಬ್ದಕ್ಕೆ ಚಂದ್ರನೆಂದೇ ಅಗ್ಗವನ್ನು ಹೇಳಬಹುದು,

+ “ನಾಮ ರಪಂಚ ಭೂತಾನಾಂ ಕೃತ್ಯಾನಾಂಚ ಪ್ರಪಂಚನಂ ವೇದಶಬೈಬ್ಯ ಏವಾದ ದೇವಾದೀನಾಂ ಚಕಾರ ಸ” ಎಂದರೆ, ಬ್ರಹ್ಮನು ದೇವತೆಗಳೇ ಮೊದಲಾದ ಪ್ರಾಣಿಗಳಿಗೆಲ್ಲಾ, ನಾಮ, ರೂಪ, ಕೃತ್ಯ ಮೊದಲಾದುವುಗಳನ್ನು ವಿಸ್ತಾರವಾಗಿ ನಿರೂ ಪಿಸುವುದಕ್ಕಾಗಿ, ಮೊದಲು ವೇದಗಳನ್ನೇ ಮೂಲವಾಗಿಟ್ಟುಕೊಂಡನೆಂದರ್ಥವು, ಅಥವಾ ಸೃಷ್ಟಿಗೆ ಬೇಕಾದ ಅರ್ಥಗಳನ್ನು ವೇದಗಳಿಂದಲೇ ತಿಳಿದು ಮಾಡುವನೆಂದೂ ಗ್ರಹಿಸಬ ಹುದು. 'ವೇದೇಭ್ಯಏವ ಭೂರಾರ್ದೀ ಜ್ಞಾತ್ವಾ ವೇಧಾರ್ಸ್ವಾ ಸೃಜತಿ'ಬ್ರಹ್ಮನು ವೇದಗ ಳಿಂದಲೇ ಭೂಮ್ಯಾದಿಪದಾರಾಗಳನ್ನು ತಿಳಿದು, ಅವುಗಳನ್ನು ಸೃಷ್ಟಿಸುವನು. ಎಂದರೆ ಭೂಮ್ಯಾದಿಸೃಷ್ಟಿಕ್ರಮವನ್ನು ವೇದಗಳೇ ಬ್ರಹ್ಮನಿಗೆ ಬೋಧಿಸುವುವೆಂದು ಶ್ರುತಿಯು, , , ..----


...

.............