ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮೪ ಶ್ರೀಮದ್ರಾಮಾಯಣವು [ಸರ್ಗ. ೧೪, ಡಿಕೊಳ್ಳುವನಾಗು. ಈ ಮೇರುಪರೈತರಿಂದ ತೇಜೋವಿಶಿಷ್ಯನಾಗಿ ಹೊರಟು ಬರುವ ಸೂಯ್ಯನಂತೆ, ದಿವ್ಯಾಲಂಕಾರಭೂಷಿತವಾದ ದೇಹದಿಂದ ಪ್ರಜೆಗಳ ನ್ನು ಸಂತೋಷಪಡಿಸು ! ಎಲೈ ಕಕುತ್ಸ್ಥವಂಶತಿಖಾಮಣಿಯೆ! ಚಂದ್ರಸೂ ರೈರೂ, ಕುಬೇರನೂ, ವರುಣನೂ, ಇಂದ್ರಾಗ್ನಿಗಳೂ ಸಿನಗೆ ಜಯವನ್ನು ಕೊಡಲಿ ! ರಾಮಾಭಿಷೇಕವನ್ನು ಮುಂದಿಟ್ಟುಕೊಂಡಿರುವ ಪೂಜ್ಯವಾದ ರಾತ್ರಿಯು ಕಳೆದುಹೋಯಿತು. ನಿನ್ನ ಉದ್ದೇಶದಂತೆ ರಾಮಾಭಿಷೇಕಕ್ಕಾಗಿ ನಡೆಸಬೇಕಾದ ಸಮಸ್ತಕಾಠ್ಯಗಳೂ ಸಿದ್ಧಪಡಿಸಲ್ಪಟ್ಟಿರುವುವು. ಪುರಜನ ರೂ, ದೇಶದ ಜನರೂ, ವರಕರೂ, ಇನ್ನೂ ಅನೇಕಬ್ರಾಹ್ಮಣೋತ್ರ ಮರೂ ನಿನ್ನ ಆಜ್ಞಾನುವತ್ತಿಗಳಾಗಿ ಕೈಕಟ್ಟಿಕೊಂಡು ನಿಂತಿರುವರು. ವಸಿಷ್ಠನೂ ಬಂದು ಸಿದ್ಧನಾಗಿರುವನು. ರಾಜವೆ :ರಾಮನ ಪಟ್ಟಾಭಿಷೇಕಕ್ಕೆ ಆಪ್ಪಣೆಯನ್ನು ಕೊಡು ! ಕಾವಲಿಲ್ಲದ ಮಂದೆಯಂತೆಯೂ, ನಾಯಕನಿಲ್ಲದ ಸೇನೆಯಂತೆಯೂ, ಚಂದ್ರನಿಲ್ಲದ ರಾತ್ರಿಯಂತೆಯೂ, ವೃಷಭವಿಲ್ಲದ ಗೋ ಸಮೂಹದಂತೆಯೂ, ರಾಜನಿಲ್ಲದ ರಾಜ್ಯವು ಹದ್ದುಮೀರಿಹೋಗುವುದು, ಆದುದರಿಂದ ಬೇಗ ಏಳು” ಎಂದನು. ಹೀಗೆ ಅರಗರ್ಭಿತವಾದ ಸಾಂತ್ವವಾಕ್ಯಗಳಿಂದ ಎಚ್ಚರಿಸುತ್ತಿರುವ ಸುಮಂತ್ರನ ವಾಕ್ಯವನ್ನು ಕೇಳಿ ರಾಜನಿಗೆ ಮತ್ತಷ್ಟು ಶೋಕೊದ್ರೇಕವುಂಟಾಯಿತು. ಅವನು ತನ್ನ ಪ್ರಿಯಪುತ್ರನಾದ ರಾಮನ ಚಿಂತೆಯಿಂದ ರಾತ್ರಿಯೆಲ್ಲವೂ ಎಡೆಬಿಡದೆ ಅಳು ತಿದ್ದುದರಿಂದ ಕೆಂಪಾದಕಣ್ಣುಳ್ಳವನಾಗಿ, ಸುಮಂತ್ರನನ್ನು ಕುರಿತು ('ಎ ಲೈ ಸುಮಂತ್ರನೆ' ಮೊದಲೇ ಚಿಂತೆಯಿಂದ ಬಳಲಿರುವ ನನ್ನನ್ನು ಮರ್ಮಭೇದ ಕಗಳಾದ ಈ ಮಾತುಗಳಿಂದ ಮತ್ತಷ್ಟು ಕಷ್ಟಪಡಿಸಬೇಕೆಂದು ಸೀನು ಬಂದಿ ರುವಹಾಗಿದೆ" ಎಂದನು. ಹೀಗೆ ದುಃಖದಿಂದಲೂ, ದೈನಂದಲೂ ಪ್ರತ್ಯುತ್ತರವನ್ನು ಕೊಟ್ಟ ರಾಜನ ಮಾತನ್ನು ಕೇಳಿ, ಸುಮಂತ್ರನು ಬೇ ರೆ ಯಾವ ಮಾತನ್ನೂ ಆಡದೆ,ರಾಜಗೆ ಕೈ ಮುಗಿದು ಆ ಸ್ಥಳವನ್ನು ಬಿಟ್ಟು ..........

  • ಶೂರನು ಮೇರುವನ್ನು ಸುತ್ತುವನೇಹೊರತು ಅದರಿಂದ ಉದಿಸುವುದಿಲ್ಲ, ಅಲ್ಲಿ ಮೇರುವಿನಿಂದ ಹೊರಟ” ನೆಂದರೆ, ಅಲ್ಲಿನ ರಥಚಕ್ರದ ದಾರಿಯಿಂದ ಹೊರಟು ಬಂದವನೆಂದು ಗ್ರಾಹನ,