ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೪೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


afe afs' ಶ್ರೀಮದ್ರಾಮಾಯಣವು [ಸರ್ಗ, ೧೬, *ಅಲ್ಲಿ, ಕಾವಿಬಟ್ಟೆಯನ್ನು ಟ್ಟು, ದೇಹವನ್ನು ಚೆನ್ನಾಗಿ ಅಲಂಕರಿಸಿಕೊಂಡು, ಕೈ ಯಲ್ಲಿ ಕಟ್ಟಿಗೆಯನ್ನು ಹಿಡಿದು, ಮುದುಕರಾದ ಕೆಲವು ಅಂತಃಪುರಾಧಿಕಾರಿಗ ಳು, ಬಹಳ ಎಚ್ಚರಿಕೆಯಿಂದ ಬಾಗಿಲಲ್ಲಿ ನಿಂತಿದ್ದರು. ಸುಮಂತ್ರನು ಈ ಜನರ ಸಂಭ್ರಮಗಳನ್ನು ನೋಡುತ್ತ, ಆ ಸ್ಥಳವನ್ನು ಪ್ರವೇಶಿಸಿದೊಡನೆಯೇ, ಅಲ್ಲಿದ್ದ ಸೇವಕರೆಲ್ಲರೂ ಥಟ್ಟನೆ ತಮ್ಮ ತಮ್ಮ ಆಸನಗಳನ್ನು ಬಿಟ್ಟು ಎದ್ದು ನಿಂತು ಗೌರವಿಸಿದರು. ಆಗ ಅವರನ್ನು ನೋಡಿ ಸುಮಂತ್ರನು, ಬಹ ೮ ನವ್ರಭಾವದೊಡನೆ ಎಲೈ ದ್ವಾರಪಾಲಕರೆ ! ಸುಮಂತ್ರನು ಬಂದು ಬಾಗಿಲಲ್ಲಿರುವನೆಂದು ಈಗಲೇ ಹೋಗಿ ರಾಮನಿಗೆ ತಿಳಿಸಿರಿ” ಎಂದನು.

  • ಇಲ್ಲಿ 'ತತ್ರ ಕಾಷಾಯಿಣೋ ವೃರ್ದ್ಧಾ ವೇತ್ರಪಾರ್ಣೀ ಸ್ವಲಂಕೃರ್ತಾ | ದದ ರ್ಶ ನಿಷ್ಠರ್ತಾ ಬ್ಯಾರಿ ಸದ್ಯರ್ಕ್ಷ ಸುಸಮಾಹಿರ್ತಾ!!”ಎಂಬುದೇ ಮೂಲಶೋಕವು. (ಕಾಷಾಯಿಣ:) ಕಾವೀಬಣ್ಣದ ಅಂಗಿಯನ್ನು ಧರಿಸಿದವರು. ರಾಮನ ಪ್ರೀತ್ಯಕ್ಷವಾಗಿ ವಿಚಿತ್ರಾಲಂಕಾರವನ್ನು ಧರಿಸಿದವರೆಂದು ಭಾವವು. (ವೃರ್ದ್ಘಾ) ತೊಂಬತ್ತೈದುವಯ ಸುಳ್ಳ ಮುದುಕರನ್ನೇ ಅಂತ:ಪರಾಧಿಕಾರದಲ್ಲಿರಿಸುವ ಸಂಪ್ರದಾಯವಾದುದ ರಿಂದ, ಅಲ್ಲಿದ್ದವರೆಲ್ಲರೂ ಹಣ್ಣು ಮುದುಕರಾಗಿದ್ದರೆಂದರು. (ವೇತ್ರಪಾರ್ಣೀ) ಬೆತ ವನ್ನು ಹಿಡಿದವರು, ಮಹಾಧನುಸ್ಸನ್ನು ಧರಿಸಿ ತೈಲೋಕ್ಯವನ್ನೂ ರಕ್ಷಿಸುತ್ತಿರುವ ಶ್ರೀರಾಮನನ್ನೇ, ಇವರು ನೇತ್ರಧಾರಿಗಳಾಗಿ ರಕ್ಷಿಸುತ್ತಿರುವರೆಂಬ ವಿಚಿತ್ರವಾದ ಮಹಿ ಮೆಯುಳ್ಳವರೆಂದು ಭಾವವು. (ಸ್ವಲಂಕೃರ್ತಾ ; 'ಸು + ಅಲಂಕೃರ್ತಾ ಚೆನ್ನಾಗಿ ಅಲಂಕರಿಸಲ್ಪಟ್ಟವರೆಂದರೆ, ಚಕ್ರವರಿ ಕುಮಾರನಾದ ರಾಮನು ಅರಮನೆಯಲ್ಲಿ ಸುಖವಾಗಿ ಸ್ನಾನಭೋಜನಾದಿಗಳನ್ನು ಮಾಡಿಕೊಂಡು, ತನ್ನ ದಿವ್ಯಾಂತ:ಪುರವನ್ನು ಪ್ರವೇಶಿಸುವಾಗ, ಈ ಅಂತ:ಪುರಾಧಿಕಾರಿಗಳೂ ಕೂಡ ದಶರಥನಂತೆಯೇ ರಾಮನಲಿ ಬಹಳ ಸಲಿಗೆಯುಳ್ಳವರಾಗಿಯೂ, ಅವನಿಗೆ ಅಂತರಂಗ ಭೂತರಾಗಿಯೂ ಇರುವುದ ರಿಂದ, ಈತನನ್ನು ಅಪ್ಪಿಕೊಂಡು, ತೊಡೆಯಮೇಲಿಟ್ಟು ಲಾಲಿಸಿ ಕಳುಹಿಸುವುದುಂಟು. ಅದಕ್ಕಾಗಿ ಕಸ್ತೂರಿ, ಕುಂಕುಮ ಕೇಸರಿ, ಮೊದಲಾದ ಸುವಾಸನಾದ್ರವ್ಯಗಳಿಂದ ಯಾವಾಗಲೂ ತಮ್ಮ ದೇಹವನ್ನು ಅಲಂಕರಿಸಿಕೊಳ್ಳುತಿದ್ದರೆಂದು ಭಾವವು, ಮತ್ತು (ಸ್ವಲಂಕೃರ್ತಾ) ಪಟ್ಟಾಭಿಷಿಕ್ತರಾಗುವ ಸೀತಾರಾಮರ ಅಲಂಕಾರಕ್ಕಿಂತಲೂ,ಆರಾಮಾ ಭಿಷೇಕದಲ್ಲಿ ತಮಗುಂಟಾದ ಉತ್ಸಾಹಕ್ಕಾಗಿ ಅಲ್ಲಿನ ಸೇವಕರು ಮಾಡಿಕೊಂಡಿದ್ದ ಅಲಂಕಾರವು ಮತ್ತಷ್ಟು ಅತಿಶಯಿತವಾಗಿತ್ತೆಂದು ಸೂಚಿತವಾಗುವುದು,