ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀಮದ್ರಾಮಾಯಣವು ಸರ್ಗ, ೨೧ ದೊಡ್ಡ ವ್ಯಸನವನ್ನು ತಂದಿಡುವುದರಲ್ಲಿ ಸಂದೇಹವಿಲ್ಲ. ನಾನು ಈಗಲೇ ದಂ ಡಕಾರಣ್ಯಕ್ಕೆ ಹೋಗಬೇಕಾಗಿರುವುದು. ಇನ್ನು ನನಗೆ ಈ ರತ್ನಮಯವಾದ ಪೀಠದಿಂದೇನು ? ಕಾಡಿನಲ್ಲಿ ತಾಪಸಯೋಗ್ಯವಾದ * ವಿಘ್ನರವೆಂಬ ದಾ ಸವದಮೇಲೆ ಕುಳಿತುಕೊಳ್ಳುವ ಕಾಲವು ಈಗ ನನಗೆ ಪ್ರಾಪ್ತವಾಗಿದೆ. ಇನ್ನೂ ಆರೆಂಟುವರ್ಷಗಳವರೆಗೆ ನಾನು ಜನಶೂನ್ಯವಾದ ಅಡವಿಯಲ್ಲಿಯೇ ವಾಸಮಾಡಬೇಕಾಗಿ ಬಂದಿರುವುದು.ಇನ್ನು ಮೇಲೆ ನಾನು ಕಾಡಿನಲ್ಲಿ ಜೇನ್ನು ಗೆಡ್ಡೆಗೆಣಸುಗಳು, ಹಣ್ಣು ಹಂಪಲುಗಳು, ಮುಂತಾದುವನ್ನು ತಿಂದು ಜೀವಿ ಸುತ್ತಿರಬೇಕು. ಇನ್ನು ಮೇಲೆ ನನಗೆ ಅಡಿಗೆಯವರಿಂದ ಸಂಸ್ಕರಿಸಲ್ಪಟ್ಟ ಮಾಂಸವೂ ದುರಭವು. ಇನ್ನು ನಾನು ಋಷಿಗಳಂತೆ ಜೀವಿಸಬೇಕಾಗಿಬಂ ಹಿರುವುದು. ನಮ್ಮ ಮಹಾರಾಜನು ಭರತನಿಗೆ ಯೌವರಾಜ್ಯಾಭಿಷೇಕವನ್ನು ಮಾಡುವನು. ತಾಪಸನಂತೆ ದಂಡಕಾರಣ್ಯದಲ್ಲಿರಬೇಕೆಂದು ನನಗೆ ನಿಯಮಿಸಿರುವನು. ಇನ್ನು ಹದಿನಾಲ್ಕು ವರ್ಷಗಳವರೆಗೆ ನಾನು ನಿರ್ಜನ ವಾದ ಕಾಡಿನಲ್ಲಿ ವಾನಪ್ರಸ್ಥಾಶ್ರಮಕ್ಕೆ ಯೋಗ್ಯವಾದ ಕಠ್ಯಗಳನ್ನು ನಡೆ ಸುತ್ತ, ಹಣ್ಣು ಹಂಪಲುಗಳನ್ನು ತಿಂದು ವಾಸಮಾಡುತ್ತಿರುವೆನು.” ಎಂ ದನು. ಈ ಮಾತನ್ನು ಕೇಳಿದೊಡನೆ ಕೌಸಲ್ಯಯು, ಕೊಡಲಿಯಿಂದ ಕಡಿದ ಮರದ ತುಂಡಿನಂತೆ ಪ್ರಜ್ಞೆ ತಪ್ಪಿ ನೆಲದಮೇಲೆ ಬಿದ್ದು, ಪುಣ್ಯಕ್ಷಯ ವಾದಮೇಲೆ ಸ್ವರ್ಗದಿಂದ ಕೆಳಗೆಬಿದ್ದ ದೇವತಾಸ್ಸಿಯಂತೆ ಕಾಣುತಿ ದಳು. ಯಾವಾಗಲೂ ದುಃಖವನ್ನೆ ಕಂಡರಿಯದ ಆಕಯು, ಮುರಿದ ಬಾಳೇ ಗಿಡದಂತೆ, ಮೂರ್ಛಯಿಂದ ಸುಕ್ಕಿಬಿದ್ದಿರುವುದನ್ನು ನೋಡಿ, ರಾಮನು ಥಟ್ಟ ನೆ ಸಮೀಪಕ್ಕೆ ಬಂದು, ಅವಳನ್ನು ಕೈದಿಡಿದು ಮೇಲಕ್ಕೆತ್ತಿ ಕುಳ್ಳಿರಿಸಿದನು. ಬಹಳಭಾರವನ್ನು ಹೊತ್ತು,ಆದರಿಂದುಂಟಾದ ಆಯಾಸವನ್ನು ಪರಿಹರಿಸಿಕೊ

  • ಇಲ್ಲಿ (ವಿಷ್ಕರಾಸನಯೋಗೋಮೇ ಕಾಲ:)-ಎಂದು ಮೂಲವು. ವಿಷ್ರವೆಂದರೆ ಇಪ್ಪತ್ರದು ದರ್ಭಗಳಿಂದ ರಚಿತವಾದ ತಾಪಸರ ಆಸನಕ್ಕೆ ಹೆಸರು,

+ ಇಲ್ಲಿ “ಷಾಷ್ಚ ವರ್ಷಾಣಿ” ಎಂದು ಮೂಲ 3. ಹದಿನಾಲ್ಕು ವರ್ಷಗ ಇಂದು ಹೇಳಿದರೆ ಬಹಳದೀರ್ಘಕಾಲವಾಗಿ ಕಾಣುವುದೆಂಬ ಶಂಕೆಯಿಂದ, ಆರೆಂಟು ವರ್ಷಗಳಿಂದ ಮಿತವಾದ ಸಂಖ್ಯೆಗಳನ್ನೇ ಉಪಯೋಗಿಸಿದುದಾಗಿ ಗ್ರಹಿಸಬೇಕು, --- -