ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೨೧] ಅಯೋಧ್ಯಾಕಾಂಡವು. ೪೧. ಆದು ಹೋಗಲಿ! ನಮ್ಮ ರಾಮನಿಗೆಜನ್ಮದ್ವೇಷಿಯಾಗಿದ್ದವನೂಕೂಡ ಆತನ ನ್ನು ನಿಂದಿಸಲಾರನು. ಆತನಿಂದ ತಿರಸ್ಕೃತನಾದವನೂ ಪ್ರತ್ಯಕ್ಷದಲ್ಲಿಯಾಗ ಲಿ,ಪರೋಕ್ಷದಲ್ಲಿಯಾಗಲಿ ಅವನಲ್ಲಿ ದೋಷವನ್ನು ಹೇಳಲಾರನು. ಹೀಗೆ ಈ ವತೆಗಳಿಗೆ ಸಮಾನನಾಗಿ, ಕಪಟವನ್ನರಿಯದ ಋಜುಸ್ವಭಾವವುಳ್ಳವನಾಗಿ, ಜಿತೇಂದ್ರಿಯನಾಗಿ, ಶತ್ರುಗಳಲ್ಲಿಯೂ ದಯೆಯನ್ನು ತೋರಿಸತಕ್ಕವನಾಗಿ ರುವ ಇಂತಹ ಪತ್ರವನ್ನು, ನಮ್ಮ ಬುದ್ಧಿಯುಳ್ಳ ಯಾವಮನುಷ್ಯನು ತಾನೆ ನಿಷ್ಕಾರಣವಾಗಿ ತೊರೆದುಬಿಡುವನು ? ಇಷ್ಟು ವಯಸ್ಸಾದರೂ ಬಾಲ್ಯ ವಯಸ್ಸುಳ್ಳವನಂತೆ ಚಪಲಬುದ್ಧಿಯಿಂದ ಕಾಮವಿಕಾರಕ್ಕೊಳಗಾಗಿರುವ ಈ ರಾಜನ ಮಾತನ್ನು ಯಾವ ಮಕ್ಕಳು ತಾನೇ ಗೌರವಿಸುವರು? ರಾಜನೀತಿ ಯನ್ನು ವಿಚಾರಿಸುವಪಕ್ಷದಲ್ಲಿ, ಪ್ರೌಢರಾದ ಮಕ್ಕಳು, ಚಪಲಬುದ್ದಿಯುಳ್ಳ ಇಂತಹ ತಂದೆಗಳ ಮಾತನ್ನು ಮನಸ್ಸಿಗೆ ತಂದುಕೊಳ್ಳದೆ, ತಮ್ಮ ದಾರಿ ಯನ್ನು ತಾವು ಹಿಡಿಯುವರು, ಅಣ್ಣಾ ! ಈ ವನವಾಸಪ್ರಸ್ತಾವವು ಹೊರ ರಬೀಳುವುದಕ್ಕೆ ಮೊದಲೇ, ನೀನು ರಾಜ್ಯವೆಲ್ಲವನ್ನೂ ಸ್ವಾಧೀನಪಡಿಸಿಕೊ ಳ್ಳುವನಾಗು ! ನಿನಗೆ ನಾನೂ ಸಹಾಯಕನಾಗಿರುವೆನು. ನಾನು ಧನುರಾರಿ ಯಾಗಿ ನಿನ್ನ ಪಾರ್ಶ್ವದಲ್ಲಿ ಬೆಂಬಲವಾಗಿರುವಾಗ, ನಿನ್ನ ಮೇಲೆ ಯಾರೂ ಕೈಮಾಡಲಾರರು. ಹಗೆಗಳೆಲ್ಲರೂ ನಮ್ಮನ್ನು ಕಂಡರೆ ಯಮನನ್ನು ಕಂ ಡಂತೆ ನಡುಗುವರು ಅಥವಾ ಒಂದುವೇಳೆ ಈ ಆಯೋಧ್ಯೆಯ ನಿವಾಸಿಗ ಇಲ್ಲಿ ಯಾರಾದರೂ ನಿನಗೆ ಕೆಡುಕನ್ನು ಮಾಡುವುದಾಗಿ ತೋರಿಬಂದರೆ, ಈ ಪಟ್ಟಣವನ್ನೆಲ್ಲಾ ನನ್ನ ಈ ತೀಕ್ಷವಾದ ಬಾಣಗಳಿಂದ ನಿರಾನುಷ್ಯವಾಗಿ ಮಾಡಿಬಿಡುವೆನು. ಮತ್ತು ಇಲ್ಲಿ ಭರತನ ಕಡೆಯವರಾಗಿಯೂ, ಆತನಿಗೆ ಹಿತವನ್ನು ಬಯಸತಕ್ಕವರಾಗಿಯೂ ಇರುವವರು ಯಾರಾದರೂ ಕಂಡುಬಂ ದರೆ, ಅಂತವರನ್ನು ಈಕ್ಷಣವೇ ಕೊಲ್ಲುವೆನು. ಇದು ಸಾಧುತ್ವಕ್ಕೆ ಕಾಲವಲ್ಲ! ನಾವು ಮೃದುವಾಗಿದ್ದಷ್ಟೂ ಇತರರು ನಮ್ಮನ್ನು ತಿರಸ್ಕರಿಸುವರು. ಒಂದು ವೇಳೆ ನಮ್ಮ ತಂದೆಯಾದ ದಶರಥನೇ, ಪುನಃ ಕೈಕೇಯಿಯಿಂದ ಪ್ರೇರಿಸ ಲ್ಪಟ್ಟು, ದುಷ್ಯ ಸ್ವಭಾವವುಳ್ಳವನಾಗಿ, ನಿನ್ನಲ್ಲಿ ದ್ವೇಷಬುದ್ಧಿಯನ್ನಿಟ್ಟು, ಏ ನಾದರೂ ವಿರೋಧವನ್ನು ಮಾಡಬಹುದಾಗಿ ತೋರಿದರೆ, ಆ ಕ್ಷಣವೇ ಆತ