ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೨.] .ಆಯೋಗ್ಯಕಾಂಡವು. ವನ್ನು ನೋಡಿ ನಾವು ಕ್ಷಣಮಾತ್ರವಾದರೂ ಉಪೇಕ್ಷಿಸುತ್ತಿರಬಾರದು. ನಾನು ಇದುವರೆಗೆ ಯಾವಾಗಲೂ ತಂದೆತಾಯಿಗಳ ವಿಷಯದಲ್ಲಿ ಬುದ್ದಿ ಪೂರೈಕವಾಗಿಯಾಗಲಿ, ಪ್ರಮಾದವಶದಿಂದಾಗಲಿ, ಅಪಕಾರವನ್ನು ಮಾಡಿ ರುವುದಾಗಿ ನನಗೆ ತೋರಲಿಲ್ಲ. ನಮ್ಮ ತಂದೆಯು ಯಾವಾಗಲೂ ಸುಳ್ಳಾ ಡಿದವನಲ್ಲ. ಆಡಿದ ಮಾತಿಗೆ ಎಂದಿಗೂ ತಪ್ಪಿದವನಲ್ಲ. ಆತನ ಪರಾಕ್ರಮ ವು ಯಾವಾಗಲೂ ಇತರರಿಂದ ತಿರಸ್ಕೃತವಾದುದಲ್ಲ. ಆತನು ಈ ಭೂ ಲೋಕದಲ್ಲಿ ಯಾರಿಗೂ ಅಂಜುವವನಲ್ಲ.ಆತನಿಗೆ ಪರಲೋಕ ಭಯವೊಂದೇ ಭಯವು, ಮಹಾಪರಾಕ್ರಮವುಳ್ಳ ಆತನು ಈಗ ಪ್ರತಿಜ್ಞೆಗೆ ತಪ್ಪಿ ದರೆ, ನಾವಾಗಿ ಆತನಿಗೆ ಆ ಪರಲೋಕದ ಭಯವನ್ನು ಹೆಚ್ಚಿಸಿದಂತಾ ಗುವುದು. ಅದಕ್ಕೆ ನಾವು ಅವಕಾಶವನ್ನು ಕೊಡಬಾರದು. ಈಗ ನಡೆಯು ತಿರುವ ನನ್ನ ಪಟ್ಟಾಭಿಷೇಕಪ್ರಯತ್ನವನ್ನು ಇಷ್ಟಕ್ಕೇ ನಿಲ್ಲಿಸದಿದ್ದರೆ, ಆತ ನು ಕೈಕೇಯಿಗೆ ತಾನು ಪ್ರತಿಜ್ಞೆ ಮಾಡಿಕೊಟ್ಟ ವಾಕ್ಯವು ತಪ್ಪಿಹೋಯಿತೆಂ ಬುದಕ್ಕಾಗಿ ಮನಸ್ಸಿನಲ್ಲಿ ಸಂಕಟಪಡುವನು. ಆತನ ಸಂಕಟವನ್ನು ನೋಡಿ ನಾವೂ ಪರಿತಪಿಸಬೇಕಾಗುವುದು. ಆದುದರಿಂದ ಎಲೆ “ವತ್ರನೆ ! ನಾನು ಅಭಿಷೇಕಾರವಾಗಿರುವ ಈ ಅಲಂಕಾರಗಳನ್ನು ತೆಗೆದು, ಇಲ್ಲಿಂದ ಹೀಗೆಯೇ ಕಾಡಿಗೆ ಹೋಗಬೇಕೆಂದಿರುವೆನು. ಆಗ ಕೈಕೇಯಿಯು ಮನಸ್ಸಿನ ಸ್ವಲ್ಪವೂ ಕಳಂಕವಿಲ್ಲದೆ ಕೃತಾರಳಾಗಿ, ಮಗನಾದ ಭರತನಿಗೆ ಪಟ್ಟ ವನ್ನು ಕಟ್ಟಿ ನಿರಾತಂಕವಾಗಿರಬಹುದು. ನಾನು ನಾರುಮಡಿಯನ್ನು ಟ್ಟು, ಜಡೆಯನ್ನೂ, ಕೃಷ್ಣಾಜಿನವನ್ನೂ ಧರಿಸಿ, ಕಾಡಿಗೆ ಹೊರಡುವುದನ್ನು ನೋಡಿ ದಹೊರತು, ಆಕೆಯ ಮನಸ್ಸು ಸೀಮಿತವಾಗಿರದು, ಕಾಡಿಗೆ ಹೋಗಬೇಕೆಂಬ ಬುದ್ದಿಯು ಈಗ ನನಗೆ ಸ್ಥಿರವಾಗಿ ಹುಟ್ಟಿರುವುದು. ಮನಸ್ಸನ್ನು ಈ ವಿಷ ಯದಲ್ಲಿ ದೃಢಪಡಿಸಿಕೊಂಡು ಬಿಟ್ಟಿರುವೆನು. ಹೀಗೆ ದೃಢಸಂಕಲ್ಪವುಳ್ಳ ಈ ನನ್ನ ಮನಸ್ಸನ್ನು ಕದಲಿಸಿ, ಆಮೇಲೆ ಪಶ್ಚಾತ್ತಾಪದಿಂದ ಆಯಾಸಪಡಿಸು ವುದು ನನಗೆ ಸರೋಧಾ ಸಮ್ಮತವಲ್ಲ. ಇನ್ನು ನಾನು ಹೊರಡುವೆನು. ನಮ್ಮ ತಂದೆಯು ಸತ್ಯವನ್ನು ಪಾಲಿಸುವುದಕ್ಕಾಗಿಯೇ ನನ್ನನ್ನು ಕಾಡಿಗೆ ಕಳುಹಿಸ ಬೇಕೆಂದು ಮನಸ್ಸಿನಲ್ಲಿ ಸಂಕಲ್ಪಿಸಿರುವೆನು, ಆ ತಂದೆಗೂ ನಾವು ಮನಃಕಿಂ ಕೃತಿಯನ್ನುಂಟುಮಾಡಬಾರದು. ಮತ್ತು ನನ್ನ ಪಟ್ಯಾಭಿಷೇಕವನ್ನು ಕೆಡಿಸ