ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೨.] ಅಯೋಧ್ಯಾಕಾಂಡವು. ೪೪೫ ಹಾರಾಜವಂಶದಲ್ಲಿ ಹುಟ್ಟಿ, ರಾಜಕುಮಾರಿಯೆನಿಸಿಕೊಂಡಿರುವಳು. ದಯಾ ದಾಕ್ಷೆಣ್ಯಾದಿಗುಣಗಳೆಲ್ಲವೂ ಆಕೆಯಲ್ಲಿ ಸಂಪೂರವಾಗಿ ನೆಲೆಗೊಂಡಿರುವು ವು. ಅಂತವಳು ದೈವಪ್ರೇರಣೆಯಿಲ್ಲದಿದ್ದರೆ, ಕೇವಲಪ್ರಾಕೃತಸಿಯಂತೆ ತ ನೃ ಗಂಡನಿದಿರಾಗಿ ನಿಂತು, ನನ್ನನ್ನು ಕುರಿತು, ಆ ವಿಧವಾದ ಕಿರವಾಕ್ಯವ ನ್ನು ಹೇಳುತಿದ್ದಳೆ! ಎಂದಿಗೂ ಹೇಳಲಾರಳು. ಇದಕ್ಕೆಲ್ಲಾ ದೈವವೇ ಮೂಲ ವು. ದೈವಗತಿಯನ್ನು ಹೀಗೆಂದು ನಿಶ್ಚಯಿಸುವುದು ಯಾರಿಗೂ ಸಾಧ್ಯವಲ್ಲದೈವಬಲದಿಂದ ನಡೆಯತಕ್ಕ ಕೆಲಸವನ್ನು ತಪ್ಪಿಸುವುದಕ್ಕೂ ಯಾರಿಂದಲೂ ಸಾಧ್ಯವಲ್ಲ. ಸಮಸ್ತಭೂತಗಳಲ್ಲಿಯೂ ಅದಕ್ಕೆ ನಿರಂಕುಶವಾದ ಪ್ರಭುತ್ವವಿ ರುವುದು.ಇದು ನಿಜವು. ಈಗ ನೋಡು ನನಗೆ ಕೈಗೆ ಬಂದರಾಜ್ಯವು ತಪ್ಪಿಹೋ ಯಿತು. ಆಕೆಗೆ ನನ್ನಲ್ಲಿ ಬಹುಕಾಲದಿಂದಿದ್ದ ವಾತ್ಸಲ್ಯವೂ ತಪ್ಪಿತು!ಹಾಗೆ ನನ್ನ ಸ್ಥಿತಿಯೂ, ಅವಳ ಬುದ್ದಿಯೂ ಇದ್ದಕ್ಕಿದ್ದ ಹಾಗೆ ವಿಪರೀತವಾಗಿ ಪರಿಣಮಿ ಸಿತಲ್ಲವೆ ! ದೈವಕ್ಕೆ ಯಾವುದೂ ಇದಿರಲ್ಲ! ಎಲೆವನೆ ! ಎಲ್ಲವೂ ದೈವ ವಶವಾಗಿದ್ದರೆ ಪುರುಷಪ್ರಯತ್ನ ದಿಂದ ಪ್ರಯೋಜನವೇನೆಂದೂ, ಆ ಪುರುಷಪ್ರಯತ್ನದಿಂದ ಅದೃಷ್ಟವನ್ನು ತಪ್ಪಿಸುವುದೇಕೆ ಸಾಧ್ಯವಲ್ಲವೆಂದೂ ಲೋಕದಲ್ಲಿ ಅದೃಷ್ಟವುಂಟೆಂಬುದಕ್ಕೆ ನಿದರ್ಶನವೇನೆಂದೂ ನೀನು ಆಕ್ಷೇಪಿಸಬಹುದು. ನಾವು ನಡೆಸುವ ಕಾರಗಳ ಫಲಾಫಲವನ್ನು ವಿಚಾ ರಿಸಿನೋಡಿದರೆ, ಅದು ಚೆನ್ನಾಗಿ ಸ್ಪಷ್ಟಪಡುವುದು. ನಾವು ಎಷ್ಟೋ ಕ ಪಟ್ಟು, ಅಕ್ಕರೆಯಿಂದ ಮಾಡಿದ ಕಾರಗಳೂ ಕೆಲವು ವೇಳೆಗಳಲ್ಲಿ ನಿಷ್ಟ ಲವಾಗುವುವು. ನಾವು ಅಕ್ಕರೆಯಿಲ್ಲದೆ ಮಾಡಿದ ಕೆಲವು ಕಾರ ಗಳಿಗೂ ಸಂಪೂರ್ಣವಾದ ಫಲವು ಲಭಿಸುವುದು. ಇವುಗಳಿಂದ ದೈವಬಲವೇ ಕುಲೋನ್ನತಿ ಮೊದಲಾದ ಸುಗುಣಗಳಿಗೆ ತಕ್ಕಂತೆ ತಾನು ಪತಿಗೆ ವಿಧೇಯಳಾಗಿ ನಡೆ ದುಕೊಳ್ಳಬೇಕಾಗಿದ್ದರೂ, ಅದನ್ನು ಬಿಟ್ಟು, ಗಂಡನಿದಿರಿಗೆ ನಿರ್ಭಯಳಾಗಿ ನಿಂತು, ( ಮಡಾಂ ) ತನಗೆ ಮುಖ್ಯಪ್ರೀತಿಪಾತ್ರನಾದ ನನ್ನನ್ನೇ ವ್ಯಸನದಲ್ಲಿರಿಸುವಂತೆ, (ಈ ಥಂ) ಹೇಗೆ ತಾನೇ, (ಬೂಯಾತ್ಹೇಳುತಿದ್ದಳು? ಸಂಕೋಚವಿಲ್ಲದೆ ಸ್ಪಷ್ಟವಾ ಗಿ ಬಾಯಿಂದ ಹೇಳಿದಳೇಹೊರತು, ಸೂಚನಾಮಾತ್ರದಿಂದಲೂ ತಿಳಿಸಲಿಲ್ಲವೆಂದು ಭಾವವು. ಹೀಗೆ ಅಸಂಭವವೆಂದು ತೋರಿದ ವಿಪರೀತಕಾರಗಳೆಲ್ಲವೂ ನಡೆದಿರುವುದರಿಂ . ಡ, ಇದಕ್ಕೆ ದೈವವೇ ಪ್ರೇರಕವೆಂದು ಭಾವವು