ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರ್ಗ, ೨೩] ಅಯೋಧ್ಯಾಕಾಂಡವು. ೪೪ ತರಿಸಲ್ಪಟ್ಟ ಈ ಜಲಕುಂಭಗಳಿಂದೇನು? ಇದರಿಂದ ನನಗೆ ಸ್ನಾನವನ್ನು ಮಾ.. ಡಿಸಿದರೂ, ರಾಜ್ಯಾಭಿಷೇಕಾರ್ಥವಾಗಿಯೇ ನನಗೆ ಈ ಸ್ನಾನವನ್ನು ನಡೆಸಿದ ಹಾಗೆ ಕೈಕೇಯಿಯು ಸಂದೇಹಪಡಬಹುದು. ಆದುದರಿಂದ ಈ ರಾಜದ್ರವ್ಯ ಸಂಬಂಧವನ್ನೇ ಬಿಟ್ಟು, ಕಾಡಿನಲ್ಲಿ ನನ್ನ ಕೈಯಿಂದ ನಾನೇ ತೀರ್ಥಜಲವನ್ನು ತಂದು ತಾಪಸಸ್ನಾನವನ್ನು ಮಾಡಿಕೊಳ್ಳುವೆನು. ನನಗೆ ರಾಜ್ಯವಾದರೇನು? ವನವಾದರೇನು? ಎರಡೂ ಸಮಾನವೇ. ಒಂದುವೇಳೆ ರಾಜ್ಯಕ್ಕಿಂತಲೂ ವನ ವಾಸವೇ ಶ್ರೇಯಸ್ಕರವೆಂದೂ ಹೇಳಬಹುದು. ಅದರಲ್ಲಿ ಈ ರಾಜ್ಯಭಾರದ ಶ್ರಮವಿಲ್ಲ. ಅಪೂವಸ್ತುಗಳೆಲ್ಲವನ್ನೂ ನೋಡಬಹುದು. ಆದುದರಿಂದ, ವತ್ಸ ಲಕ್ಷಣಾ ! ಈಗ ನಡೆದಿರುವ ಅಭಿಷೇಕಕಾರವನ್ನು ಕೆಡಿಸುವುದಕ್ಕೆ ನಮ್ಮ ಚಿಕ್ಕ ತಾಯಿಯು ಕಾರಣವೆಂದು ಎಂದಿಗೂ ನೀನು ತಿಳಿಯಬೇಡ. ದೈವಪ್ರೇರಣೆಯಿಂದಲೇ ಆಕೆಗೆ ಈ ಬುದ್ದಿಯುಂಟಾಗಿರುವುದೇಕೊರತು ಬೇರೆಯಲ್ಲ. ಆದೈವದ ಪ್ರಭಾವವನ್ನೇ ಇದುವರೆಗೂ ನಾನು ನಿನಗೆ ತಿಳಿಸಿರು ವೆನು. ನಿನಗೂ ಈ ವಿಷಯವು ಮೊದಲೇ ತಿಳಿದಿರಬಹುದು. ದೈವಿಕವಾಗಿ ಸಂಭವಿಸಿದುದಕ್ಕೆ ನಾವು ಈಗ ಕೈಕೇಯಿಯನ್ನು ನಿಂದಿಸುವುದೇಕೆ? ಆದುದ ರಿಂದ ನಿನ್ನ ಕೋಪವನ್ನು ತಡೆದು, ಶಾಂತಿಯನ್ನು ಹೊಂದು.” ಎಂದನು. ಇಲ್ಲಿಗೆ ಇಪ್ಪತ್ತೆರಡನೆಯಸರ್ಗವ.

  • ಲಕ್ಷಣನು ದೈವಬಲಕ್ಕಿಂತೆ ಪುರುಷಪ್ರಯತ್ನವೇ |
  • ಪ್ರಬಲವೆಂದು ವಾದಿಸಿದುದು, ರಾಮನು ಹೀಗೆ ಅನೇಕಸಮಾಧಾನಗಳನ್ನು ಹೇಳುತ್ತಿದ್ದರೂ, ಲಕ್ಷಣ ನಿಗೆ ಆ ಬುದ್ಧಿವಾದಗಳೊಂದೂ ಸಮ್ಮತವಾಗದುದರಿಂದ, ಸುಮ್ಮನೆ ತಲೆಯ
  • ಹಿಂದೆ ರಾಮನು 'ದೈವವೇ ಪ್ರಬಲವಾದುದರಿಂದ ರಾಜ್ಯವು ತಪ್ಪಿದುದಕ್ಕಾ ಗಿ ಸಂತಾಪಪಡಬಾರದು, ಧರವೇ ಸಮಸ್ತಶ್ರೇಯಸ್ಸುಗಳಿಗೆ ಮೂಲಾಧಾರವು, ಪಿ ತೃವಚನಪರಿಪಾಲನವೆಂಬುದು ಧರಮೂಲವಾಗಿರುವುದರಿಂದ, ಅದನ್ನು ಅಮ್ಮನಾಗಿ ನಡೆಸಿಯೇ ತೀರಬೇಕು, ತಂದೆಯಾಜ್ಞೆಯು ತಾಯಿಯ ಮಾತಿಗಿಂತಲೂ ಹೆಚ್ಚುತೂ ಜ್ಯವಾದುದರಿಂದ, ಮೊದಲು ತಂದೆಯಾಜ್ಞೆಯನ್ನೇ ನಡೆಸಬೇಕು” ಎಂಬೀ ಏಷಯ ಗಳನ್ನು ಮಾತ್ರ ಯುಕ್ತಿಪೂರಕವಾಗಿ ಸಿದ್ಧಾಂತಪಡಿಸಿದ್ದನು, ಇದಕ್ಕಾಗಿ ಲಕ್ಷಹನು