ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೮. ಶ್ರೀಮದ್ರಾಮಾಯಣವು [ಸರ್ಗ, ೨, ನ್ನು ತಗ್ಗಿಸಿಕೊಂಡು ಕೇಳುತಿದ್ದನು.ಆದರೆ ಈತನಿಗೆ ಒಂದುಭಾಗದಲ್ಲಿರಾಮನಿ ಗೆ ರಾಜ್ಯವು ತಪ್ಪಿಹೋಗುವುದೆಂಬ ವ್ಯಸನವೂ, ಮತ್ತೊಂದುಭಾಗ ದಲ್ಲಿ, ಆತನ ಧೈಯ್ಯಸಾಹಸಗಳನ್ನೂ, ಸ್ಥಿರಸಂಕಲ್ಪವನ್ನೂ ನೋಡಿ ಸಂ ತೋಷವೂ ಉಕ್ಕುತಿತ್ತು. ಈ ದುಃಖಹರ್ಷಗಳನಡುವೆ ಆತನ ಮನಸ್ಸು ತೂ ಗಾಡುತಿತ್ತು ಆದರೆ ಆತನ ಕೋಪವುಮಾತ್ರ ಶಾಂತವಾಗದಿದ್ದುದರಿಂದ, ಹಣೆಯಲ್ಲಿ ಹುಬ್ಬುಗಳನ್ನು ಗಂಟಿಕ್ಕಿ, ಪಟ್ಟಿಯಲ್ಲಿ ಸಿಕ್ಕಿಬಿದ್ದ ಮಹಾಸರ್ಪವು ರೋಷದಿಂದ ಬುಸುಗುಟ್ಟುವಂತೆ ನಿಟ್ಟುಸಿರು ಬಿಡುತಿಮ್ಮನ್ನು ಹುಬ್ಬುಗಂ ಟುಹಾಕಿದ ಆತನ ಮುಖವು, ಕೋಪಗೊಂಡ ಸಿಂಹವಮುಖದಂತೆ, ನೋಡು ವವರಿಗೆ ಅತ್ಯಂತಭಯಂಕರವಾಗಿ ಕಾಣುತಿತ್ತು. ಅನೆಯು ತನ್ನ ಸುಂಡಿಲನ್ನು ತೂಗಾಡಿಸುವಂತೆ, ಆತನು ಕೋಪದಿಂದ ಕೈಗಳನ್ನೊದರುತ್ತ, ತನ್ನ ಕೊರ ಳನ್ನು ಕುಗ್ಗಿಸಿ,ಅತ್ತಿತ್ತ ತಿರುಗಿಸುತ್ತ ಓರೆಗಣ್ಣಿನಿಂದ ತನ್ನ ಅಣ್ಣನನ್ನು ನೋ ಡಿ, ಅಣ್ಣಾ! ನಿನಗೆ ತಿಳಿಯದುದೊಂದೂ ಇಲ್ಲವು!ಹೀಗಿದ್ದರೂ ನೀನೇಕೆ ? ಷ್ಟು ಕಳವಳಿಸುತ್ತಿರುವೆ ? ಇಷ್ಟು ಸಂಭ್ರಮಗಳಿಗೆ ಇದು ಸಮಯವಲ್ಲ. ಪಿತೃ ವಾಕ್ಯಪರಿಪಾಲನವೆಂಬ ಥರಕ್ಕೆ ಲೋಪವುಂಟಾಗಬಾರದೆಂದೂ, ಅಧರಕ್ಕೆ ಪ್ರವರ್ತಿಸಿದರೆ ಲೋಕದ ಜನವೂ ಅದೇ ಮಾರ್ಗವನ್ನನುಸರಿಸುವುದೆಂದೂ ಶಂಕಿಸಿ, ಕಾಡಿಗೆ ಹೊರಡುವ ಪ್ರಯತ್ನವನ್ನು ಮಾಡಿರುವೆಯಷ್ಟೆ ? ಇ ದೊಂದು ಕೇವಲಭ್ರಮವೇ ಹೊರತು ಬೇರೆಯಲ್ಲ. ಧಯ್ಯಕ್ಕೆ ಲೋಪವೆಂಬ ವ್ಯಾಜವನ್ನಿಟ್ಟುಕೊಂಡು, ಲೋಕನೀತಿಗೆ ಅಂಜದಿರಬಹುದೆ? ಯಾವಾಗಲೂ ಯುಕ್ತಾಯುಕ್ತವನ್ನು ವಿಚಾರಿಸಿ ಕಾಠ್ಯಗಳನ್ನು ನಡೆಸತಕ್ಕ ಸ್ವಭಾವವುಳ್ಳ ನಿಮ್ಮಂತವರು, ಈಮಾತನ್ನಾಡಬಾರದು. ನಿನ್ನ ಶೌರವಾದರೋಅಸಾಧಾರ ಣವಾದುದು.ಇದರಮೇಲೆ ಪೌರುಷವನ್ನೇ ಮುಖ್ಯಬಲವಾಗಿ ಉಳ್ಳ ಕ್ಷತ್ರಿಯ ದೈವಕ್ಕಿಂತಲೂ ಪೌರುಷವೇ ಪ್ರಬಲವೆಂದೂ, ಕೇವಲದುರ್ಬಲರು ಮಾತ್ರವೇ ದೈವ ಬಲವನ್ನು ಇದಿರುನೋಡುತ್ತಿರಬೇಕೆಂದೂ, ಧರವನ್ನಾಶ್ರಯಿಸಬೇಕಾದರೆ ಅದು ಅರ್ಥಕಾಮಗಳಿಗೆ ವಿರುದ್ದವಾಗಿದ್ದರೆ, ಅಂತಹ ಧರವನ್ನನುಸರಿಸಬಾರದೆಂ, ಸಂ ಗ್ರಹವಾಗಿ ಪೂರೈಪಕ್ಷಗಳನ್ನು ಹೇಳಿದ್ದನು. ಹೀಗೆ ಸಂಗ್ರಹಿಸಲ್ಪಟ್ಟ ಪೂರೂಪಕ್ಷಗಳ « ಲಕ್ಷಣನು ಈಸರ್ಗದಲ್ಲಿ ವಿಸ್ತಾರವಾಗಿ ಪ್ರತಿಪಾದಿಸಲು, ಅದಕ್ಕೆ ರಾಮನೂ ಶನ: ತನ್ನೆ ಸಿದ್ಧಾಂತವನ್ನು ತಿಳಿಸುವನು,