ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೦೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀಮದ್ರಾಮಾಯಕನು [ಸಗ,೨೩, ನನ್ನ ಕತ್ತಿಯಿಂದ ತುಮುರುತುಮುರಾಗಿ ಕತ್ತರಿಸಿ, ಅವುಗಳ ಅಂಗಾಂಗಳೆ ಲ್ಲವನ್ನೂ ಯುದ್ಧರಂಗದಲ್ಲಿ ಹರಡಿ, ಜನಸಂಚಾರಕ್ಕೂ ಅವಕಾಶವಿಲ್ಲದಂತೆ ಮಾಡುವೆನು. ಇದೊ! ಈ ನನ್ನ ಕತ್ತಿಯನ್ನು ನಾನು ಒಂದಾವರಿ ರಣರಂ ಗದಲ್ಲಿ ಬೀಸಿದರೆ,ಶತ್ರುಸೈನ್ಯದ ಆನೆಗಳೆಲ್ಲವೂ ಮಿಂಚಿನೊಡಗೂಡಿದ ಮೇವು ಗಳಂತೆ, ಆ ಖಡ್ಡ ಕಾಂತಿಯೊಡಗೂಡಿ, ಪರೂತಗಳಂತೆ ಉರುಳಿಬಿಳುವುವು. ನಾನು ಉಡುವಿನ ಚರದ ಕೈಗೌಸಣಿಗೆಯನ್ನಿಟ್ಟು, ಬಿಲ್ಲು ಹಿಡಿದು, ಯುದ್ಧಕ್ಕೆ ಬಂದು ನಿಂತಮಾತ್ರಕ್ಕೆ, ತಾನೂ ಒಬ್ಬ ಗಂಡಸೆಂದು ನನ್ನಿ ದಿರಾಗಿ ಬಂದು ನಿಲ್ಲತಕ್ಕ ವೀರಪುರುಷನಾವನು ? ಏಕಕಾಲದಲ್ಲಿ ಅನೇಕ ಬಾಣಗಳನ್ನು ಬಿಟ್ಟು ಒಬ್ಬ ವೀರನನ್ನು ಕೊಲ್ಲುವುದಕ್ಕಾಗಲಿ, ಒಂದೇಬಾಣ ದಿಂದ ಏಕಕಾಲದಲ್ಲಿ ಅನೇಕರನ್ನು ಕೊಲ್ಲುವುದಕ್ಕಾಗಲಿನನಗೆಶಕ್ತಿಯುಂಟು! ಹೀಗೆ ಸಮಯೋಚಿತವಾದ ಶಸ್ತಚಾತುರದಿಂದ, ಚತುರಂಗಸೈನ್ಯಗಳಿಗೂ ಮರ ಸ್ಥಾನಗಳನ್ನು ಹಿಡಿದು ಬಾಣಗಳನ್ನು ಪ್ರಯೋಗಿಸಬಲ್ಲೆನು. ಆರನೆ ! ನನ್ನ ಶಸ್ತ್ರ ಪ್ರಭಾವವನ್ನಾದರೂನೋಡು! ಈಗ ದಶರಥರಾಜನಿಗಿರುವ ಪ್ರಭು ಶ್ರವನ್ನೇ ತಪ್ಪಿಸಿ, ಆದೇಪ್ರಭುಪದವಿಯಲ್ಲಿ ನಿನ್ನನ್ನು ನಿಲ್ಲಿಸುವುದಕ್ಕೂ, ಇ ಹೋ! ಈ ನನ್ನ ಶಸ್ತ್ರಗಳು ಸಮರವಾಗಿರುವುವು. ನಾನು ರಾಜಕುಮಾರನಾ ಗಿ ಹುಟ್ಟಿದುದರಿಂದ, ಇದುವರೆಗೆ ಈ ನನ್ನ ತೋಳುಗಳೆರಡೂ ಕೇವಲಚಂದ ನುಲೇಪನಕ್ಕೂ ತೋಳ್ಳಳೆಗಳನ್ನಿಟ್ಟುಕೊಳ್ಳುವುದಕ್ಕೂ, ತ್ಯಾಗಮಾ ಡುವುದಕ್ಕೂ, ಮಿತ್ರರನ್ನು ಪಾಲಿಸುವುದಕ್ಕೂ ಯೋಗ್ಯವಾಗಿದ್ದುವು. ಇವು ಗಳೇ ಈಗ ನಿನ್ನ ಕಾವ್ಯಕ್ಕೆ ಸಿದ್ಧವಾಗಿರುವುವು. ನಿನ್ನ ಅಭಿಷೇಕಕ್ಕೆ ಅಡ್ಡಿಯ ನ್ನು ಮಾಡುವ ವಿರೋಧಿಗಳನ್ನು ನಿಗ್ರಹಿಸುವುದಕ್ಕೆ ಮುಂದುವರಿಯುತ್ತಿ ರುವುವು, ಅಣ್ಣಾ ! ನಿನ್ನ ಹಗೆಯಾರೆಂಬುದನ್ನು ತಿಳಿಸು ! ಈಗಲೇ ಆತನ ಪ್ರಾಣವನ್ನು ಹೀರಿಬಿಡುವೆನು ! ಆತನ ಕಿರಿಯನ್ನು ತಲೆಯೆತ್ತದ ಹಾಗೆ ಮಾಡುವೆನು ! ಆತನ' ಮಿತ್ರರನ್ನೂ ಹುಟ್ಟಡಗಿಸುವೆನು! ನೀನು ನನಗೆ ಆಜ್ಞೆ ಯನ್ನು ಮಾತ್ರ ಕೊಟ್ಟರೆ ಸಾಕು ! ಈ ಸಮಸ್ತಭೂಮಂಡಲವನ್ನೂ ನಿನಗೆ ವಶಪಡಿಸಿಕೊಡುವೆನು! ಇದೋ! ನಾನು ನಿನಗೆ ಕಿಂಕರನಾಗಿ ನಿನ್ನ ಆಜ್ಞೆ ಯನ್ನೇ ಇಡಿರುನೋಡುತ್ತಿರುವೆನು.” ಎಂದನು. ಇದನ್ನು ಕೇಳಿ ರಾಮನು ಲಕ್ಷಣನಿಗೆ ಅನೇಕ ವಿಧದಲ್ಲಿ ಸಮಾಧಾನವನ್ನು ಹೇಳಿ, ಆತನ ಕಣ್ಣೀರನ್ನು