ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ; ೨೪.] ಅಯೋಧ್ಯಾಕಾಂಡವು. ತನ್ನ ಕೈಯಿಂದಲೇ ಒರೆಸಿ, “ವ ಲಕ್ಷಣಾ! ಸುಮ್ಮನೆ ಹೀಗೆ ದುಡು ಕಬಾರದು. ತಂದೆಯಾಜ್ಞೆಯನ್ನು ಮಾತ್ರ ನಾನೆಂದಿಗೂ ಮೀರಿ ನಡೆಯತಕ್ಕ ವನಲ್ಲ. ಈ ವಿಷಯವನ್ನು ನೀನು ಚೆನ್ನಾಗಿ ತಿಳಿ : ಸೌಮ್ಯ ಸ್ವಭಾವವುಳ್ಳ ನೀನೂ ಹೀಗೆ ದಾರಿತಪ್ಪಿ ಹೋಗುವುದುಚಿತವಲ್ಲ! ಆದುದರಿಂದ ಸನ್ಮಾರ್ಗ ದಲ್ಲಿ ಪ್ರವರಿಸು.” ಎಂದನು. ಇಲ್ಲಿಗೆ ಇಪ್ಪತ್ತು ಮೂರನೆಯ ಸರ್ಗವು, +{ ರಾಮನ ವನವಾಸನಿಶ್ಚಯವನ್ನು ಕೌಸಲೆ ಯು. 1 ಅನುಮೋದಿಸಿದುದು. * * ಹೀಗೆ ಪಿತೃವಾಕ್ಯ ಪರಿಪಾಲನದಲ್ಲಿಯೇ ರಾಮನು ದೃಢಸಂಕಲ್ಪವುಳ್ಳ ವನಾಗಿರುವುದನ್ನು ನೋಡಿ, ಕೌಸಲ್ಯ ಯು ಕಣ್ಣೀರುಸುರಿಸುತ್ತ, ಥಯು ಕವಾದ ಒಂದಾನೊಂದು ಮಾತನ್ನು ಹೇಳುವಳು. (ವತ್ಸ ರಾಮಾ! ನೀನು ಇದುವರೆಗೆ ದುಃಖವೆಂಬುದನ್ನೇ ಕಂಡವನಲ್ಲ.ಧರಸ್ವರೂಪನೆನಿಸಿಕೊಂಡು ಸಮಸ್ತ ಪ್ರಾಣಿಗಳಿಗೂ ಪ್ರಿಯವನ್ನೇ ನುಡಿಯತಕ್ಕ ಸುಸ್ವಭಾವವುಳ್ಳವನು, ರಾಜಾಧಿರಾಜನಾದ ದಶರಥನಿಗೆ ನನ್ನಲ್ಲಿ ಹುಟ್ಟಿರುವ ನೀನು, ಕಾಡಿಗೆ ಹೋಗಿ, ಅಲ್ಲಿ ಉದಿರಿರುವ ಧಾನ್ಯಕಣಗಳನ್ನಾ ಯುತ್ತ, ಅದರಿಂದಲೇ ಜೀವಿಸುತ್ತಿರ ಬೇಕಾಗಿ ಬಂದಿರುವುದಲ್ಲಾ ? ಸುಕುಮಾರಾಂಗನಾದ ನೀನು ಈ ಕೆಲಸವ ನ್ನು ಹೇಗೆ ಮಾಡಬಲ್ಲೆ ? ನಿನ್ನನ್ನಾಶ್ರಯಿಸಿ ಬದುಕುತ್ತಿರುವ ಕೃತ್ಯ ವರ್ಗಗಳೆಲ್ಲವೂ ಮೃಷ್ಟಾನ್ನವನ್ನು ಭುಜಿಸುತ್ತಿರುವುವು. ಅಂತಹ ಉದಾರ ಪ್ರಭುವಾದ ನೀನೇ ಈಗ ಕಾಡಿನಲ್ಲಿ ಸುತ್ತಿ, ಗೆಡ್ಡೆಗೆಣಸುಗಳನ್ನೂ, ಹಣ್ಣು ಹಂಪಲುಗಳನ್ನೂ ತಿಂದು ಹೇಗೆ ಜೀವಿಸಬಲ್ಲೆ?ದಶರಥರಾಜನು ತನಗೆ ಪ್ರಿ ಯಪುತ್ರನಾಗಿಯೂ, ಮಹಾಗುಣಾಡ್ಯನಾಗಿಯೂ ಇರುವ ರಾಮನನ್ನು ಕಾಡಿಗೆ ಕಳುಹಿಸಿಬಿಡುವನೆಂಬ ಮಾತನ್ನು ಕೇಳಿದರೂ, ಯಾರೂ ನಂಬಲಾ ರರು, ಅಥವಾ ಒಂದುವೇಳೆ ನಂಬಿದರೂ ಮಹಾಘೋರವಾದ ಈ ವ್ಯಸನ ವಾರೆಯನ್ನು ಕೇಳಿ ಯಾರೂ ಅಂಜದಿರಲಾರರು. ಎಷ್ಟು ಹೇಳಿದರೇನು ? ಮುಖ್ಯವಾಗಿ ದೈವಸಂಕಲ್ಪಕ್ಕೆ ಯಾವುದೂ ಇದಿರಲ್ಲ. ಲೋಕದ ಸಮಸ್ತ ವ್ಯಾಪಾರಗಳಿಗೂ ದೈವವೇ ನಿಯಾಮಕವು. ಸರಲೋಕಪ್ರಿಯನಾದ ನಿನ