ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಖರ್ಗೆ, ೨೫ ] ಅಯೋಧ್ಯಾಕಾಂಡವು: ಆte ಸ್ವಲ್ಪ ಮೂತ್ರವೂ ವಿಳಂಬಮಾಡದೆ ಒಡನೆಯೇ ಬಂದುಬಿಡು! ಆಮೇಲೆ ನಮ್ಮ ಕುಲಧರ ವನ್ನನುಸರಿಸಿ ಅಭಿಷೇಕವನ್ನೂ ಹೊಂದುವನಾಗು! ನಿನ್ನ ಶ್ರೀ ಯಸ್ಸಿಗಾಗಿ ನಾನು ಇಲ್ಲಿ ಯಾವ ದೇವತೆಗಳನ್ನೂ ಪ್ರಾಸಬೇಕಾದುದಿಲ್ಲ. ನೀನು ಹುಟ್ಟಿದಂದಿನಿಂದ ಇದುವರೆಗೂ, ಥೈಲ್ಯದಿಂದಲೂ, ನಿಯಮದಿಂ ದಲೂ ಯಾವ ಥರವನ್ನು ಕಾಪಾಡುತ್ತಬಂದೆಯೋ ಆ ಥರದೇವತೆಯೇ ನಿನ್ನನ್ನು ಕಾಪಾಡಲಿ! ಎಲೈ ರಘುವಂಶತಿಖಾಯಣಿಯೆ! ಚತುಷ್ಪಥಗಳಲ್ಲಿ ಯೂ, ದೇವಾಲಯಗಳಲ್ಲಿಯೂ, ಯಾವ ದೇವತೆಗಳಿಗೆ ನೀನು ನಮಸ್ಕರಿಸು ತಿದ್ದೆಯೋ, ಆ ದೇವತೆಗಳೇ ಈಗ ಕಾಡಿನಲ್ಲಿ ಋಷಿಗಳೊಡಗೂಡಿದ ನಿನ್ನನ್ನು ಕಾಪಾಡಲಿ! ಥೀಮಂತನಾದ ಆ ವಿಶ್ವಾಮಿತ್ರ ಮಹರ್ಷಿಯು ಯಾವ ಯಾವ ದಿವ್ಯಾಸಗಳನ್ನು ನಿನಗೆ ಅನುಗ್ರಹಿಸಿರುವನೋ, ಆ ಅಸ್ತ್ರಗಳೇ ನಿನ್ನನ್ನು ಯಾ ವಾಗಲೂ ರಕ್ಷಿಸಲಿ! ನೀನು ಇದುವರೆಗೆ ಮಾಡುತಿದ್ದ ಪಿತೃಶುಶೂಷೆಯೂ, ಮಾತ್ಮ ಶುಶೂಷೆಯೂ, ನಿನ್ನ ಸತ್ಯಸಂಧತೆಯೂ ನಿನ್ನನ್ನು ರಕ್ಷಿಸಿ, ನಿನಗೆ ಚಿರಜೀವವನ್ನು ಕೊಡಲಿ! ನೀನು ಕಾಡಿನಲ್ಲಿ ಸಂಚರಿಸುವಾಗ ಅಲ್ಲಿರತಕ್ಕೆ ಸಮಿತು ಗಳೂ, ಧರ್ಭೆಗಳೂ, ಪವಿತಗಳೂ ಆಗಿ ವೇದಿಕೆಗಳೂ, ದೇವತಾ ಗೃಹಗಳೂ, ದೇವಪೂಜಾರ್ಥವಾಗಿ ರಚಿಸಲ್ಪಟ್ಟ ಅಯಾಪೂಜಾಸ್ಥಳಗಳೂ, ಪ್ರತಗಳೂ, ವೃಕ್ಷಗಳೂ, ಗಿಡಗಳೂ, ಸಣ್ಣಕೊಂಬೆಗಳೂ, ಮಡುಗಳೂ ಪಕ್ಷಿಗಳೂ, ಹಾವುಗಳೂ, ಸಿಂಹಗಳೂ! ನಿನ್ನನ್ನು ರಕ್ಷಿಸಲಿ: ಮತ್ತು ಸಾಧ್ಯ ರೂ, ವಿಶ್ವೇದೇವತೆಗಳೂ, ಸಪ್ತಮರುತ್ತುಗಳೂ, ಮಹರ್ಷಿಗಳೂ ನಿನಗೆ ಮಂಗಳವನ್ನುಂಟುಮಾಡಲಿ!ಧಾತೃವಿಧಾತೃಗಳೇ ಮೊದಲಾದ ದೇವತೆಗಳೂ ಲೋಕಧಾರಕನಾದ ವಿರಾಟ್ಟುರುಷನೂ, ಸೃಷ್ಟಿಕರ್ತನಾದ ಬ್ರಹ್ಮನೂ, ಪೂಷ, ಭಗ, ಅರೆಮರೇ ಮೊದಲಾದ ದ್ವಾದಶಾದಿತ್ಯರೂ,ಇಂದ್ರಾದೃಷ್ಟ ರಿಕ್ಷಾಲಕರೂ, * ಋತುಗಳು, ಪಕ್ಷಗಳು, ಮಾಸಗಳು, ಸಂವತ್ಸರಗಳು,

  • ಇಲ್ಲಿ ಋತು ಮೊದಲಾದುವುಗಳನ್ನು ಆಗಾಗ ಹೇಳಿರುವುದರಿಂದ, ಶನರು ಕಿಯಂತೆ ಕಾಣಬಹುದು. ಒಂದು ಕಡೆಯಲ್ಲಿ ಋತುಗಳೆಂದೂ, ಮತ್ತೊಂದು ಕಡೆ ಯಲ್ಲಿ ಅವುಗಳ ಅಧಿದೇವತೆಗಳೆಂದೂ ಅಗ್ಗವನ್ನು ಹೇಳಿಕೊಳ್ಳುವುದಾದರೆ ಆ ದೋಷ ವಿಲ್ಲ. ಅಥವಾ ಕೌಸಿಯು ಶತ್ರರಕ್ಷಣೆ ವಿಷಯದಲ್ಲಿರುವ ತನ್ನ ಪ್ರೇಮದಾರವತ್ಯ