ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರ್ಗ. ೩. ಅಯೋಧ್ಯಾಕಾಂಡವು. We ದಿಂದ ಸಂಭವಿಸುತ್ತಿರುವ ಸೇವಕಜನರಿಂದ ನಿಬಿಡವಾಗಿತ್ತು. ಇತ್ತಲಾಗಿ ರಾಮನು ಸ್ವಭಾವಗಂಭೀರನಾಗಿದ್ದರೂ, ಆತನ ಇಂದ್ರಿಯಗಳೆಲ್ಲವೂ ಚಿಂತೆ ಯಿಂದ ಕಳವಳಿಸಿ, ಆತನ ಮುಖವು ದುಃಖದಿಂದ ಕಂಡಿರುವುದನ್ನು ನೋಡಿ ದಳು. ಆತನನ್ನು ಕಂಡೊಡನೆ ಭಯದಿಂದ ನಡುಗುತ್ತ, ಥಟ್ಟನೆ ಇದಿರೆದ್ದು ಬಂ ದಳು, ಹೀಗೆ ಭಯದಿಂದ ತತ್ತಳಿಸುತ್ತಿರುವ ಸೀತೆಯನ್ನು ಕಂಡು, ರಾಮ ನೂ ತನ್ನ ಮನಸ್ಸಿನಲ್ಲಿ ಇದುವರೆಗೂ ಅಡಗಿಸಿಕೊಂಡಿದ್ದ ವ್ಯಸನವನ್ನು ತಡೆದಿ ಟ್ಟುಕೊಳ್ಳಲಾರದೆ ಹೋದನು.ಆತನ ಮುಖದಲ್ಲಿ ವ್ಯಸನವಿಕಾರಗಳು ತೋ ರ್ಪಟ್ಟುವು.ಇವುಗಳನ್ನು ಕಂಡು ಸೀತೆಯು ಮತ್ತಷ್ಟು ವ್ಯಸನಪರವಶಳಾಗಿರಾ ಮನನ್ನು ಕುರಿತು, (ಆರನೆ! ಇದೇನು? ಈಗ ನಿನಗೆ ಈ ಅವಸ್ಥೆಯುಂಟಾದುದ ಕ್ಕೆ ಕಾರಣವೇನು? ಸಮಸ್ಯಸಂಪತ್ತುಗಳಿಗೂ ಮೂಲವಾಗಿ, ಬೃಹಸ್ಪತಿದೇವ ತಾತ್ಮಕವಾದ ಪುಷ್ಯ ನಕ್ಷತ್ರವು ಈಗಲೇ ಪ್ರಾಪ್ತವಾಗಿರುವುದಾಗಿ ಪ್ರಾಜ್ಞ ರಾದ ಬ್ರಾಹ್ಮಣರೆಲ್ಲರೂಹೇಳುತ್ತಿರುವರಲ್ಲವೆ? ನಿನ್ನ ಅಭಿಷೇಕಕ್ಕಾಗಿ ನಿಶ್ಚಯಿ ಸಲ್ಪಟ್ಟ ಈ ಶುಭಮುಹೂತ್ರದಲ್ಲಿಯೂ ನೀನು ಉತ್ಸಾಹವಿಲ್ಲದೆ ದುಃಖಿಸುವು ದಕ್ಕೆ ಕಾರಣವೇನು ? ಇಷ್ಟು ಹೊತ್ತಿಗೆ, ಶತಶಲಾಕೆಗಳಿಂದ ಕೂಡಿ, ನೊರೆ ಯಂತೆ ಬಿಳುಪಾದಶೈತಚ್ಛತ್ರವು ನಿನ್ನ ನೆತ್ತಿಯಮೇಲೆ ಶೋಭಿಸುತ್ತಿರಬೇಕ ಲ್ಲವೆ ? ನಿನ್ನ ಅಂದವಾದ ಮುಖಕಮಲವು ಇದುವರೆಗೂ ಆ ಛತ್ರಛಾಯೆ ಯಲ್ಲಿ ಶೋಭಿಸದಿರುವುದಕ್ಕೆ ಕಾರಣವೇನು ? ಕಮಲದಂತೆ ಅರಳಿದ ಕಣ್ಣು ಗಳಿಂದ ಶೋಭಿಸುವ ಈ ನಿನ್ನ ಮುಖವು, ಚಂದ್ರಹಂಸಗಳಂತಿರುವ ರಾಜ ಚಿಹ್ನಗಳಾದ ಚಾಮುಗಳಿಂದ ಬೀಸಲ್ಪಡದಿರುವುದಕ್ಕೆ ಕಾರಣವೇನು ? ಪ್ರಶಸ್ತವಾಕ್ಕುಳ್ಳ ಹೊಗಳುಭಟರೂ, ಪುರಾತನವೃತ್ತಾಂತಗಳನ್ನು ಪ್ರಶಂಸೆಮಾಡುವ ಸೂತರೂ, ವಂಶಾವಳಿಯನ್ನು ಕೀರ್ತಿಸುವ ಮಾಗಧ ರೂ ಸಂತೋಷದಿಂದ ಬಂದು ಮಂಗಳವಾಕ್ಯಗಳಿಂದ ನಿನ್ನನ್ನು ಈಗಲೂ ಸ್ತುತಿಸದಿರುವುದಕ್ಕೆ ಕಾರಣವೇನು ? ವೇದವಿತ್ತುಗಳಾಗ ಬ್ರಾಹ್ಮಣರೆಲ್ಲ ರೂ ಬಂದು, ಸ್ನಾನದಿಂದ ಶುದ್ಧವಾಗಿರುವ ಈ ನಿನ್ನ ತಿರಸ್ಸಿನಮೇಲೆ ಶಾ ಸೈಕವಾದ ಜೇನು, ಮೊಸರು, ಮೊದಲಾದ ಮಂಗಳದ್ರವ್ಯಗಳಿಂದ ಇನ್ನೂ ಅಭಿಷೇಕಮಾಡದಿರುವುದೇಕೆ ? ಸ್ವರ್ಣಾಭರರಣಗಳಿಂದಲಂಕರಿಸ ಲ್ಪಟ್ಟ ವೇಗವಾದ ನಾಲ್ಲುಕುದುರೆಗಳಿಂದ ಕೂಡಿದ ಪರಥವೆಂಬ