ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಶ್ರೀಮದ್ರಾಮಾಯಕನು [ಸರ್ಗ, ೨. ನಮ್ಮ ಹಾಜರಥವು ಈಗಾಗಲೇ ನಿನ್ನ ಮುಂದೆ ಬರುತ್ತಿರಬೇಕಲ್ಲವೆ?ಹಾಗಿಲ್ಲದಿ ರವುದೇಕೆ?ಕಾಳಮೇಷುದಂತೆ ಶೋಭಿಸುತ್ತ.ನೀಲಪ್ಪತದಂತೆ ಮಹೋನ್ನತ ವಾಗಿ, ಶುಭಲಕ್ಷಣಗಳಿಂದ ಕೂಡಿದ ನಮ್ಮ ಪಟ್ಟದಾನೆಯು, ಸರ್ವಾಲಂಕಾರ ಭೂಷಿತವಾಗಿ ನಿನ್ನ ಮುಂದೆ ಬಾರದಿರುವುದೇಕೆ?ನೀನು ಪಟ್ಟಾಭಿಷಿಕ್ತನಾಗಿ ಬೀದಿಯಲ್ಲಿ ಹೊರಟುಬರುವಾಗ, ನಮ್ಮ ಪುರಾಸುಗಳೂ, ದೇಶವಾಸಿಗಳೂ, ಮಂತ್ರಿಪುರೋಹಿತಾದಿಗಳೂ, ಪ್ರಜೆಗಳಲ್ಲಿ ಪ್ರಮುಖರಾದವರೂ, ಆಯಾ ಬೀದಿಗಳಲ್ಲಿ ಮುಖ್ಯರಾದವರೂ,ಸರ್ವಾಲಂಕಾರಭೂಷಿತಾಗಿ,ನಿನ್ನನ್ನು ಅತ್ಯು ತಾಹದಿಂದ ಹಿಂಬಾಲಿಸಿ ಬರುತ್ತಿರಬೇಕಲ್ಲವೆ? ಹಾಗಿಲ್ಲದಿರುವುದಕ್ಕೆ ಕಾರಣ ವೇನು! ನೀನು ಬರುವಾಗ ನಿನ್ನ ಮುಂದೆ ವೀರಪುರುಷನೊಬ್ಬನು ಸುವರ್ಣ ಮಯವಾದ ನಿನ್ನ ಸಿಂಹಾಸನವನ್ನು ತರಿಸಿಕೊಂಡು ಬರಬೇಕಲ್ಲವೆ ? ಹಾಗೆ ಬಾರದಿರುವುದೇಕೆ ? ಈಗಲೇ ಅಭಿಷಿಕನಾದ ನೀನು ಎಷ್ಟು ಸಂತೋಷ ವುಳ್ಳವನಾಗಿರಬೇಕೋ, ಅಷ್ಟು ವ್ಯಸನವನ್ನು ಹೊರಪಡಿಸುವಂತೆ ನಿನ್ನ ಮು ಖವು ಬಣ್ಣಗುಂದಿರುವುದು: ಸ್ವಲ್ಪವಾದರೂ ಸಂತೋಷವು ಕಾಣುವುದಿಲ್ಲ ! ಇದಕ್ಕೇನು ಕಾರಣವು? ನಾನು ಹಿಂದೆ ಯಾವಾಗಲೂ ಈ ಸ್ಥಿತಿಯನ್ನು ನೋಡಿದವಳಲ್ಲ ! ಹೀಗಾಗುವುದಕ್ಕೆ ಕಾರಣವೇನು ?” ಎಂದಳು. ಹೀಗೆ ಭಯಗ್ರಸ್ತಳಾಗಿ ದುಃಖಿಸುತ್ತಿರುವ ಸೀತೆಯನ್ನು ನೋಡಿ ರಾಮನು “ಎಲೆ ಪ್ರಿಯೆ ! ನಮ್ಮ ತಂದೆಯು ಈಗ ನನ್ನನ್ನು ಈ ಊರನ್ನು ಬಿಟ್ಟು ಹೊರಡಿಸಿ,ಕಾಡಿಗೆ ಕಳುಹಿಸಬೇಕೆಂದಿರುವನು. * ನೀನೋ ಸತ್ಕುಲದಲ್ಲಿ ಹು ಟೈದವಳು, ಸಮಸ್ಥರಗಳನ್ನೂ ಚೆನ್ನಾಗಿ ತಿಳಿದು, ಅದರಂತೆಯೇ ಆಚ ರಿಸತಕ್ಕವಳು. ರಾಜರ್ಷಿಯಾದ ಜನಕರಾಜನಿಗೆ ಮಗಳೆನಿಸಿಕೊಂಡಿರುವೆ! ಆದುದರಿಂದ ಎಂದಿಗೂ ನೀನು ಅಥರಕ್ಕೆ ಪ್ರವರ್ತಿಸಲಾರೆ!ಆದರೆ,ಪೂರೆ ತರಗಳನ್ನು ಚೆನ್ನಾಗಿ ತಿಳಿಯುವುದಕ್ಕೆ ಮೊದಲು ನೀನು ಸಂಭ್ರಮಪಡಬೇ ಡ!ಆಕ್ರೋಶಕ್ಕೆ ಇದು ಸಮಯವಲ್ಲ. ಆತುರಪಡದೆ ಸಾವಧಾನವಾಗಿ ಕೇಳು,

  • ರಾಮನು, ತಾನು ಮುಂದೆ ತಿಳಿಸುವ ದೊಡ್ಡ ಅಪ್ರಿಯವಾರ್ತೆಯನ್ನು ಕೇ ಆದರೆ, ಸೀತೆಗೆ ಸಹಿಸಲಾರದಷ್ಟು ವ್ಯಸನವು ಪ್ರಾಪ್ತವಾಗುವುದೆಂಬುದಕ್ಕಾಗಿ, ಅವಳ ಮನಸ್ಸಿಗೆ ಮೊದಲು ಪ್ರೋತ್ಸಾಹವನ್ನು ಕೊಟ್ಟು ದೃಢಪಡಿಸಬೇಕೆಂಬ ಉದ್ದೇಶದಿಂದ ಇಲ್ಲಿ ಅವಳ ಗವರ್ನನವನ್ನು ಮಾಡುವನೆಂದು ಗ್ರಹಿಸಬೇಕು.