ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಕ, ೨೬ ಅಯೋಧ್ಯಾಕಾಂಡವು, ೪೯ ತಂದೆಯು ಈಗ ನನ್ನನ್ನು ಕಾಡಿಗೆ ಕಳುಹಿಸಬೇಕಾದ ಕಾರಣಗಳುಂಟು. ಸತ್ಯಪ್ರತಿಜ್ಞನಾದ ನಮ್ಮ ತಂದೆಯು, ಪೂರದಲ್ಲಿ ನಮ್ಮ ತಾಯಿಯಾದ ಕೈಕೇಯಿಗೆ, ಎರಡುವರಗಳನ್ನು ಕೊಡುವುದಾಗಿ ವಾಗ್ದಾನಮಾಡಿದ್ದನು. ಆತನು ಈಗ ನನಗೆ ರಾಜ್ಯಾಭಿಷೇಕವನ್ನು ಮಾಡಬೇಕೆಂದು ಸಿದ್ಧನಾಗಿ ರುವುದನ್ನು ನೋಡಿ, ಕೈಕೇಯಿಯು ತನಗೆ ಹಿಂದೆ ಅಭಯಕೊಟ್ಟಿದ್ದ ಆ ವರಗಳೆರಡನ್ನೂ ಈಗಲೇ ಕೊಡಬೇಕೆಂದು ರಾಜನನ್ನು ನಿರ್ಬಂಧಿಸಿದಳು. ತಂದೆಯು ಮಾತಿಗೆ ತಪ್ಪವವನಲ್ಲವಾದುದರಿಂದ ಧಮ್ಮ ಪಾಶಕ್ಕೆ ಸಿಕ್ಕಿಬಿ ದ್ವಿರುವನು. ಈಗ ನಾನು ಹದಿನಾಲ್ಕು ವರ್ಷಗಳವರೆಗೆ ದಂಡಕಾರಣ್ಯ ದಲ್ಲಿ ವಾಸಮಾಡಬೇಕಾದುದೊರಿದು. ಭರತನಿಗೆ ಯ್ವರಾಜ್ಯಾಭಿಷೇಕವು ನಡೆಯುವುದೊಂದು! ಇವೆರಡನ್ನೂ ತಂದೆಯು ಸಿಕ್ತ ಯಿಸಿರುವನು. ಈಗ ನಾ ನು ಕಾಡಿಗೆ ಹೊರಡುವೆನು. ಅದಕ್ಕಾಗಿ ನಿನ್ನನ್ನು ನೋಡಿ ಹೋಗಬೇಕೆಂದು ಬಂದೆನು. ಈಗ ನಾನು ನಿನಗೆ ತಿಳಿಸಬೇಕಾದ ಬುದ್ದಿವಾದಗಳು ಕೆಲವುಂಟು. ನಾನು ಬರುವವರೆಗೂ ನೀನು ಅದನ್ನ ನುಸರಿಸಿಯೇ ನಡೆಯುತ್ತಿರಬೇಕು, ಭ ರತನಮುಂದೆಮಾತ್ರ ಸೀನು ನನ್ನ ಗುಣಗಳನ್ನು ಸ್ತುತಿಸಬೇಡ ! ಧೀರ ರಾದವರು ಪರಸ್ತುತಿಯನ್ನು ಕೇಳಿ ಸಹಿಸಲಾರರು. ಆದುದರಿಂದ ಯಾವಾಗ ಲೂ ನೀನು ಆತನಮುಂದೆ ನನ್ನ ಗುಣಗಳನ್ನು ಸ್ತುತಿಸಬಾರದು. ಭರತ ನು ಇನ್ನು ಮೇಲೆ ತನ್ನ ಇತರಸಾಮಾನ್ಯಬಂಧುಗಳಂತೆ ನಿನ್ನನ್ನು ಪೋಷಿಸು ತಿರಬಹುದೇಹೊರತು, ನನ್ನಂತೆಯೇ ಅಸಾಧಾರಣವಾದ ಪ್ರೀತಿ ಯಿಂದ ಪೋಷಿಸುವನೆಂಬ ಆಶೋತ್ತರವನ್ನು ನೀನು ಇಟ್ಟಿರಬಾರದು.ಆತನ ಮನೋನುಕೂಲೆಯಾಗಿ ನಡೆಯುತ್ತಿದ್ದರೆಮಾತ್ರವೇ ನೀನು ಈ ಅರಮನೆ ಯಲ್ಲಿರಬಹುದು. ಆತನಿಗೆ ಪ್ರತಿಕೂಲಳಾಗಿ ಪ್ರವರ್ತಿಸಿದರೆ, ನಿನಗೆ ಸೌ ಖ್ಯವಿಲ್ಲ. ಕೊನೆಗೆ ಈ ಸ್ಥಳವನ್ನೇ ಬಿಟ್ಟು ಹೋಗಬೇಕಾಗಿ ಬರುವುದು, ತಂದೆ ಯು ತಾನಾಗಿಯೇ ಇಷ್ಟಪಟ್ಟು ಭರತನಿಗೆ ರಾಜ್ಯವನ್ನು ಕೊಟ್ಟಿರುವುದರಿಂ ದ, ಆಭರತನ ಮನಸ್ಸಿಗೆ ತೃಪ್ತಿಕರವಾಗುವಂತೆ ನಡೆದುಕೊಳ್ಳಬೇಕಾದುದೇ ನಿನ್ನ ಕತ್ರವ್ಯವು. ಅದರಲ್ಲಿಯೂ ವಿಶೇಷವಾಗಿ ದಶರಥನ ಮನಸ್ಸಿಗೂ ನೀನು ಅನುಕೂಲೆಯಾಗಿರಬೇಕು. ನಾನು ಈಗ ತಂದೆಯ ಪ್ರತಿಜ್ಞೆಯನ್ನು ಪಾಲಿ ಸುವುದಕ್ಕಾಗಿಯೇ ಕಾಡಿಗೆ ಹೊರಡುವೆನು.ನೀನು ಉದಾರಮನಸ್ಸುಳ್ಳವಳಾ