ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yea ಶ್ರೀಮದ್ರಾಮಾಯಕರು (ಸರ್ಗ.೨೮: ಪುರುಷಶ್ರೇಷ್ಠನಾದ ರಾಮನು ಧರ ಮಾರ್ಗದಲ್ಲಿಯೇ ವಿಶೇಷವಾತ್ಸಲ್ಯವು ಧೃವನಾದುದರಿಂದ, ಸೀತೆಯು ಹೀಗೆ ಎಷ್ಟೆವಿಧದಲ್ಲಿ ಪ್ರಾಸಿಕೊಂಡರೂ ಅವಳನ್ನು ಕಾಡಿಗೆ ಕರೆದುಕೊಂಡುಹೋಗುವವಿಷಯದಲ್ಲಿ ಇಷ್ಟಪಡಲಿಲ್ಲ. ಅವಳಿಗೆ ಇನ್ನೂ ಅನೇಕವಿಧದಲ್ಲಿ ಬುದ್ದಿವಾದಗಳನ್ನು ಹೇಳುತ್ತ, ಅವಳಪ್ರಯ ತವನ್ನು ತಪ್ಪಿಸುವುದಕ್ಕೆ ಯತ್ನಿಸಿದನು. ಕಾಡಿನಲ್ಲಿ ಸಂಭವಿಸಬಹುದಾದ ಕಷ್ಟಗಳನ್ನೆಲ್ಲಾ ಕ್ರಮವಾಗಿ ವಿವರಿಸತೊಡಗಿದನು. ಇಲ್ಲಿಗೆ ಇಪ್ಪತ್ತೇಳ ನಯಸರ್ಗವು, ಆ ರಾಮನು ವನವಾಸದಲ್ಲಿರುವ ಕಷ್ಟವನ + 1 ಸೀತೆಗೆ ತಿಳಿಸಿದುದು. ಸೀತೆಯು ಹೀಗೆ ಅನೇಕ ವಿಧದಲ್ಲಿ ಪ್ರಾರ್ಥಿಸಿಕೊಳ್ಳತಿದ್ದರೂ, ರಾಮ ನಿಗೆ ವನವಾಸದಲ್ಲಿರಬಹುದಾದ ಕಷ್ಟಗಳನ್ನು ಚಿಂತಿಸಿ, ಆಕೆಯನ್ನು ಕರೆದು ಕೊಂಡು ಹೋಗಬೇಕೆಂಬ ಬುದ್ದಿಯೇ ಹುಟ್ಟಲಿಲ್ಲ. ಧನಾಗಿಯೂ, ಧರನಿರತನಾಗಿಯೂ ಇರುವ ರಾಮನು ಸೀತೆಯನ್ನು ಪುನಃಪುನಃಸಮಾಧಾ ನಪಡಿಸುತ್ತಿದ್ದನು. ಸೀತೆಯಾದರೋ ಕಣ್ಣಿನಲ್ಲಿನೀರುತುಂಬಿಕೊಂಡು ದುಃಖಿ ಸುತಿದ್ದಳು. ಹೇಗಾದರೂ ತನ್ನೊಡನೆ ಬರಬೇಕೆಂದು ಹೇಳುತ್ತಿರುವ ಆಸೀತೆ ಯಮನಸ್ಸನ್ನು ಹಿಂತಿರುಗಿಸುವುದಕ್ಕಾಗಿ ರಾಮನು ಆಕೆಯನ್ನು ಕುರಿತು ಎಲೆ ಸೀತೆ! ನೀನು ದೊಡ್ಡ ವಂಶದಲ್ಲಿ ಹುಟ್ಟಿದವಳು. ಯಾವಾಗಲೂ ಧನಿರತ ಳಾದವಳು. ಆದುದರಿಂದ ನೀನು ಇಲ್ಲಿಯೇ ಇದ್ದುಕೊಂಡು ನಿನ್ನ ಧರ ವನ್ನು ನಡೆಸುತ್ತಿರು! ನಿನ್ನ ಸೌಖ್ಯವನ್ನೇ ನೀನು ಮುಖ್ಯವಾಗಿ ನೋಡಿ ಕೊಳ್ಳಬೇಕೆಂಬುದು ಸರಿಯಲ್ಲ!ಪತಿಯಾದ ನನ್ನ ಆಜ್ಞೆಯನ್ನು ನುಸರಿಸಿ ನಡೆ ಯುವುದೇ ನಿನಗೆ ಇರವು. ಕಾಡಿನಲ್ಲಿ ವಾಸಮಾಡುವುದು ಸುಲಭಸಾಧ್ಯವೆಂ ದೆಣಿಸಬೇಡ! ಅದರಲ್ಲಿ ಅನುಭವಿಸಬೇಕಾದ ಕಷ್ಟಗಳು ಅನೇಕವಾಗಿವೆ. ಅವೆಲ್ಲ ವನ್ನೂ ಒಂದೊಂದಾಗಿ ನಿನಗೆ ತಿಳಿಸುವೆನು ಕೇಳು.ಆಗಲಾದರೂ ನೀನು ಈಗ ಉದ್ದೇಶಿಸಿರುವ ವನವಾಸದಆಸೆಯನ್ನು ಬಿಟ್ಟುಬಿಡಬಹುದು.ವನವೆಂಬುದನ್ನು ಏನೆಂದುಬಲ್ಲೆಯಾ? ಅದರಲ್ಲಿ ಅನುಭವಿಸಬೇಕಾದ ಕಷ್ಯಪರಂಪರೆಗಳಿಗೆ ಪಾ ರವೇ ಇಲ್ಲ. ಹುಲಿಕರಡಿಗಳಿಂದಲೂ,ಕಲ್ಲು ಮುಳ್ಳುಗಳಿಂದಲೂ,ಸಂಚರಿಸುವು