ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೯.] ಅಯೋಧ್ಯಾಕಾಂಡವು, ಆso ನಾನು ಕನ್ಯಾವಸ್ಥೆಯಲ್ಲಿ ತಂದೆಯ ಮನೆಯಲ್ಲಿದ್ದಾಗ, ಒಂದಾನೊಂದು ದಿ ನ ನನ್ನ ತಾಯಿಯಬಳಿಯಲ್ಲಿ ಕುಳಿತಿದ್ದೆನು. ಆಗ ಸದಾಚಾರಸಂಪನ್ನಳಾದ ತಾಪಸಸಿಯೊಬ್ಬಳು ಬಂದು ನನ್ನನ್ನು ನೋಡಿ ( ಕೆಲವುಕಾಲದವರೆಗೆ ನೀನು ವನವಾಸವನ್ನನುಭವಿಸಬೇಕಾಗಿರುವು.” ಎಂದು ನನ್ನ ಮುಂದೆಯೇ ಹೇಳಿದ್ದಳು. ನಾನು ವಿವಾಹಿತಳಾಗಿ ಇಲ್ಲಿಗೆ ಬಂದಮೇಲೆಕೂಡ, ನಾವಿಬ್ಬ ರೂ ಗಂಗಾತೀರದಲ್ಲಿರುವ ತಪೋವನಗಳಲ್ಲಿದ್ದು ಬರಬೇಕೆಂದು ಆಗಾಗ ನಿ ಇನ್ನು ನಿರ್ಬಂಧಿಸಿ ಪೀಡಿಸುತಿದ್ದೆನಲ್ಲವೆ? ನೀನೂ ನನ್ನಲ್ಲಿ ಪ್ರಸನ್ನ ನಾಗಿ ಆ ಕೋರಿಕೆಯನ್ನು ಈಡೇರಿಸಿಕೊಡುವುದಾಗಿ ಒಪ್ಪಿರುವೆಯಲ್ಲವೆ ! ವನವಾಸ ವೆಂಬುದನ್ನು ನಾನು ಒಂದು ದೊಡ್ಡ ಉತ್ಸವವೆಂದೇ ಎಣಿಸಿರುವೆನು. ನಿನಗೆ ಮಂಗಳವಾಗಲಿ! ನೀನು ಕಾಡಿನಲ್ಲಿರುವಾಗ “ನಿನ್ನ ಪಾದಶುಕ್ರೂಷೆಯನ್ನು ಮಾಡುತ್ತಿರಬೇಕೆಂಬುದೇ ನನ್ನ ಮುಖಾಭಿಲಾಷೆಯು, ನೀನೂ ಅಸೂಯಾದಿ ದುರ್ಗುಣಗಳಿಲ್ಲದೆ,ನಿರಲವಾದ ಮನಸ್ಸುಳ್ಳವನಾಗಿರುವೆ. ಇಂತಹ ನಿನ್ನನ್ನು ಪ್ರೀತಿಪುರಸ್ಸರವಾಗಿ ಉಪಚರಿಸಿ, ನನ್ನ ಪಾಪಗಳೆಲ್ಲವನ್ನೂ ಹೋಗಲಾಡಿಸಿ ಕೊಳ್ಳಬೇಕೆಂದಿರುವೆನು. ಪತಿಯಾದ ನಿನ್ನನ್ನು ಹಿಂಬಾಲಿಸಿರಬೇಕಾದುದೇ ನನ್ನ ಥರವು. ಪತಿಯಾದ ನೀನೇ ನನಗೆ ಪರದೈವವು!ಪರಲೋಕದಲ್ಲಿಯೂ ಡ ಎಡೆಬಿಡದೆ ನಿನ್ನನ್ನು ಸೇರಿರಬೇಕಂಬುದೇ ನನ್ನ ಮತವು.ಎಲೈ ಧೀ ಮಂತನೆ! ಲೋಕದಲ್ಲಿ ಯಾವವಸ್ತಿಯು ತಂದೆತಾಯಿಗಳಿಂದ ಅವರವರ ವರ್ಣಾಶ್ರಮ ಧರ್ಮಗಳನ್ನನುಸರಿಸಿ ದಾನದಾರಾಪೂರೈಕವಾಗಿ ಮತ್ತೊಬ್ಬ ಪುರುಷನಿಗೆ ವಿವಾಹಮಾಡಿಕೊಡಲ್ಪಡುವಳೋ, ಅಂತಹ ಸೀಗೆ ಪರಲೋ ಕದಲ್ಲಿಯೂ ಆ ಪುರುಷನೇ ಪತಿಯಾಗಿರುವನು.” ಎಂಬೀ ಶ್ರುತಿಪ್ರಮಾ ಣಸಿದ್ಧವಾದ ವಿಷಯವನ್ನು, ಯಶಸ್ವಿಗಳಾದ ಅನೇಕಬ್ರಾಹ್ಮಣರ ಮುಖ ದಿಂದ ಕೇಳಿರುವೆವಲ್ಲವೆ? ಹೀಗಿರುವಾಗ ನೀನು ಸದಾಚಾರಸಂಪನ್ನೆ ಯಾಗಿ ಯೂ, ಪತಿವ್ರತೆಯಾಗಿಯೂ, ಅಗ್ನಿ ಸಾಕ್ಷಿಕವಾಗಿ ವಿವಾಹಿತಳಾಗಿಯೂ ಇ ರುವ ನನ್ನನ್ನು ಯಾವಕಾರಣಕ್ಕಾಗಿ ಸಂಗಡ ಕರೆದುಕೊಂಡು ಹೋಗುವು ದಿಲ್ಲವೆಂದು ಹೇಳುವೆಯೋ ಕಾಡನು.ಎಲೈ ಕಕುಸ್ಥವಂಶಶಿಖಾಮಣಿಯೆ! ನಿನ್ನಲ್ಲಿ ಪರಮಭಕ್ತಿಯುಳ್ಳವಳಾಗಿ,ಪತಿವ್ರತೆಯಾಗಿ,ಸುಖದುಃಖಗಳಿಗೆ ಸಮ 81