ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇe ಶ್ರೀಮದ್ರಾಮಾಯಕರು (ಸರ್ಗ, 10, "ಮತ್ತೇನನ ಮಗನಾದ ಸತ್ಯವಂತನನ್ನು ತ್ರಿಕರಣಶುದ್ಧಿಯಿಂದ ಅನು ಸರಿಸಿ, ಆತನ ಶುಶೂಷೆಯನ್ನೇ ವ್ರತವಾಗಿ ಉಳ್ಳ ಸಾವಿತ್ರಿಯಂತೆ, ನಾನೂ ನಿನ್ನನುಸರಿಸಿ ನಡೆಯತಕ್ಕವಳೆಂದೇ ತಿಳಿ ! ಎಲೆ ಪಾಪರಹಿತನೆ : ತಮ್ಮ ಕುಲವನ್ನೇ ಕೆಡಿಸತಕ್ಕ ಇತರನೀಚಸೀಯರಂತೆ ನನ್ನನ್ನೆಣಿಸಬೇಡ ! ನಾನು ಯಾವಾಗಲೂ ಮನಸ್ಸಿನಲ್ಲಿಯಾದರೂ ನಿನ್ನನ್ನು ಹೊರತು ಇತರರನ್ನು ನೆನೆಯತಕ್ಕವಳಲ್ಲ. ಆದುದರಿಂದ ನಿನ್ನನ್ನು ಬಿಟ್ಟರೆ ನನಗೆ ಬೇರೆ ದಿಕ್ಕಿಲ್ಲವೆಂ ಬುದನ್ನರಿಯೆಯಾ? ನಿನ್ನೊಡನೆ ನಾನು ಬಂದೇ ಬರುವೆನು. ದೃಢಪತಿವ್ರತೆ ಯೆಂದು ನನ್ನನ್ನು ನೀನು ಚೆನ್ನಾಗಿ ತಿಳಿದಿದ್ದರೂ, ಸಂಗಡಕರೆದುಕೊಂಡು ಹೋಗುವುದಿಲ್ಲವೆಂದು ಹೇಳುವೆಯಲ್ಲವೆ ! ಇರಲಿ ! ರಾಮಾ! * ನಾನು ಕು ಮಾರಾವಸ್ಥೆಯಲ್ಲಿಯೇ ನಿನ್ನನ್ನು ಕೈಹಿಡಿದೆನು ! ಬಹುಕಾಲದಿಂದ ನಿನ್ನ ಸಂ ಗಡಲೇ ವಾಸಮಾಡುತ್ತಿರುವೆನು ! ನಾನು ಪತಿವ್ರತೆಯೆಂಬುದನ್ನೂ ನೀನು ಚೆನ್ನಾಗಿ ಬಲ್ಲೆ! ನಾನೊಬ್ಬಳೇ ನಿನಗೆ ಧಮ್ಮ ಪತ್ನಿ ಯೆಂಬುದು ಲೋಕವಿದಿತ ವಾಗಿದೆ. ಹೀಗಿರುವಾಗಲೂ ಪತ್ನಿ ಯನ್ನು ಇತರರಿಗೊಪ್ಪಿಸಿ, ಅದರಿಂದ ತನ್ನ ಜೀವನವನ್ನು ನಡೆಸಿಕೊಳ್ಳುವ ಶೈಲೂಷನಂತೆ, ನನ್ನನ್ನು ಮತ್ತೊಬ್ಬರ ವಶ ದಲ್ಲಿ ಒಪ್ಪಿಸಬೇಕೆಂದಿರುವೆಯಾ? ನೀನು ಯಾರಿಗೆ ಹಿತವನ್ನು ಮಾಡುತ್ತಿರಬೇ

  • ಇದಕ್ಕೆ 'ಸ್ವಯಂ ತು ಭಾಸ್ಕಾಂ ಕ್ಯಾರೀಂ ಚಿರಮಧ್ಯುಷಿತಾಂ ಸತೀಂ! ಶೈಲೂಷ ಇವ ಮಾಂ ರಾಮ ಪರೇಭ್ಯ ದಾತುಮಿಚ್ಛಸಿ” ಎಂದು ಮೂಲವು, ರಾಮ ನು ಭರತನಿಗೆ ರಾಜ್ಯವನ್ನು ಬಿಟ್ಟುಕೊಡುವುದು ಸೀತೆಗೆ ಅಭಿಮತವಿಲ್ಲದುದರಿಂದ ಆಕೆ ಯು ಈ ಮಾತನ್ನು ಹೇಳಿದುದಾಗಿಯೂ ಅಗ್ಗಾಂತರವನ್ನು ಹೇಳಬಹುದು. ಹೇಗಂ ದರೆ:-(ರಾಮ) ಎಲೈ ರಾಮನೆ ! (ಭಾರಾಂ) ಭರಿಸುವುದಕ್ಕೆ ಯೋಗ್ಯವಾಗಿಯೂ, (ಸಂ) ಅನಶ್ವರವಾಗಿಯೂ, (ಚಿರಮಧ್ಯುಷಿತಾಂ) ಬಹುಕಾಲದಿಂದ ವಂಶಪರಂಪರೆ

ಯಾಗಿ ಬಂದುದಾಗಿಯೂ, (ಕೌಮಾರೀ೦) ಕುಮಾರವಯಸ್ಕನಾದ ನಿನಗೆ ಅನುಭವಿ ಸುವುದಕ್ಕೆ ಯೋಗ್ಯವಾಗಿಯೂ, ಎಂದರೆ, ಯೌವರಾಜರೂಪವಾಗಿಯೂ ಇರುವ (ಮಾಂ)ರಾಜ್ಯಲಕ್ಷ್ಮಿಯನ್ನು, (ಶೈಲೂಷ ಇವ) ನಾಟಕದಲ್ಲಿ ಕೇವಲ ವೇಷಧಾರಿಗಳಾಗಿ ಬಂದ ನಟರಂತೆ, (ಪರೇಭ್ಯಃ) ಭರತಾದಿಗಳಿಗೆ (ದಾತುಮಿಚ್ಛಸಿ ಕಿರಿ) ಕೆಂಗಲಪೇಕ್ಷೆ ಸುವೆಯಾ? ಇದು ಎಂದಿಗೂ ನಿನ್ನಂತವನಿಗೆ ತಕ್ಕುದಲ್ಲವೆಂದು ಮಹೇಶ್ವರತೀರಮ್ಮಾ ಖ್ಯಾನಭಾವವು,