ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರ್ಗ: ೧.) ಅಯೋಧ್ಯಾಕಾಂಡವು. ೨೭೬ ರಾವಣನನ್ನು ಕೊಲ್ಲಿಸುವುದಕ್ಕಾಗಿ, ದೇವತೆಗಳೆಲ್ಲರೂ ಬಂದು ಪ್ರಾಕ್ಕಿಸಿದು “ಅಜಾಯಮಾನೋ ಬಹುಧಾ ವಿಜಾಯತೇ” ಇತ್ಯಾದುಪನಿಷತ್ತುಗಳಲ್ಲಿ ಪ್ರಸಿದ್ಧನಾ ದವನೆಂದು ಭಾವವು. (ದೇವೈಃ) (ದೀವ್ಯತಿ' ಎಂದರೆ ಕೋರುವುದು. ದೇವತೆಗಳು ಭಾಗ ವತಾಗ್ರಣಿಗಳಂತೆ ಅನನ್ಯ ಪ್ರಯೋಜನರಾಗಿ ಭಗವಚ್ಚರಣಾಗತಿಯನ್ನು ಮಾಡಿದವರಲ್ಲ. ಮತ್ತೇನೆಂದರೆ, ರಾಕ್ಷಸಾದಿವಧವನ್ನು ಕೊರಿಯೇ ಭಗವಚ್ಚರಣಾಗತಿಯನ್ನು ಮಾಡಿದ ವರಾದುದರಿಂದ ಪ್ರಯೋಜನಾ೦ತರಪರರೆಂದರು, ಮತ್ತು 'ದೀವ್ಯತಿ' ಎಂದರೆ ಮದಿ ಸುವವನೆಂಬ ಅರವೂ ಇರುವುದರಿಂದ, ಈಶ್ವರೆಹಮಹಂಭೋಗಿ” ಇತ್ಯಾದಿಪ್ರಕಾ ರವಾಗಿ, 'ತಾನೇ ಈಶ್ವರನು, ತಾನೇ ಭೋಗಿಯು' ಎಂಬ ದುರಭಿಮಾನವುಳ್ಳವರೆಂದೂ ಭಾವವು. ಇದಕ್ಕೆ ನಿದರ್ಶನರೂಪವಾಗಿ, ದೇವತೆಗಳು ನರಕಾಸುರನ ವಧಕ್ಕಾಗಿ ಕೃಷ್ಣ ನಲ್ಲಿ ಶರಣಾಗತಿಯನ್ನು ಮಾಡಿ, ಆ ಸ್ವಕಾರವು ಸಿದ್ಧಿಸಿದಮೇಲೆ ಪಾರಿಜಾತಕ್ಕಾಗಿ ಆ ಕೃಷ್ಣನೊಡನೆಯೇ ಹೋರಾಡಿದವರಲ್ಲವೆ ? ಹೀಗೆ ಮದಾಂಧರಾದವರೆಂದು ಭಾವವು, (ಉದೀರ ರಾವಣಸ್ಯ ವಧಾಸ್ಥಿಭಿಃ) ಗರದಿಂದ ಕೊಬ್ಬಿ, ಮೂರುಲೋಕಗಳನ್ನೂ ನಾಶಮಾಡುತ್ತ, ತನಗೆ ವರಕೊಟ್ಟ ದೇವತೆಗಳನ್ನೇ ರಾಜ್ಯಚ್ಯುತರನ್ನಾಗಿ ಮಾಡಲೆಳಸಿದ ರಾವಣನನ್ನು ಕೊಲ್ಲಿಸಬೇಕೆಂದು ಕೋರಿಬಂದ ದೇವತೆಗಳಿಂದ(ಅರಿತ: ಪ್ರಾಸಲ್ಪಟ್ಟ ವನಾಗಿ, ಆ ಪ್ರಾನೆಗಾಗಿಯೇ ವಶ್ಯನಾದನೇ ಹೊರತು ಉಪಾಸಿಸಲ್ಪಟ್ಟವನಲ್ಲವೆಂದು ಭಗವಂತನ ಸೌಲಭ್ಯವು ಸೂಚಿತವಾಗುವುದು, (ಮಾನನೇ ಲೋಕೇ) ಮನುಷ್ಯ ಲೋ ಕದಲ್ಲಿ ಎಂಬುದರಿಂದ, ಈ ಭೂಲೋಕದಲ್ಲಿರುವ ಮನುಷ್ಕಗಂಧವನ್ನೇ ಸಹಿಸಲಾರದು ದಕ್ಕಾಗಿ, ಕೆಳಕ್ಕೆ ಬಾರದೆ, ಮೇಲೆ ಯೋಜನದೂರದಲ್ಲಿಯೇ ಇದ್ದುಕೊಂಡು, ಯಾಗ ಗಳಲ್ಲಿ ಹವಿಸ್ಸುಗಳನ್ನು ಗ್ರಹಿಸತಕ್ಕೆ ದೇವತೆಗಳಕೂಡ ಯಾವನಿಗೆ ಮನುಷ್ಯ ಪ್ರಾಯರಾರ್ಗಿುವರೋ, ಅಂತಹ ಪರಮಾತ್ಮನೂಕೂಡ, ತನ್ನ ಸೌಭ್ಯಾತಿಶಯದಿಂದ ಅಷ್ಟು ಹೀನವಾದ ಮನುಷ್ಯಲೋಕದಲ್ಲಿ ಅವತರಿಸಿದನೆಂದು ಭಾವವು, ಜಜ್ಜೆ) ಸೃಸಿಂ ಹದಿಗಳಂತೆ ಸಂಭಾದಿಗಳಿಂದ ಹೊರಟು ಬಂದವನಲ್ಲ, ಮನುಷ್ಯರು ಹತ್ತು ತಿಂಗಳ ವರೆಗೆ ಮಾತ್ರವೇಗರ್ಭದಲ್ಲಿ ಬಳೆದು ಹುಟ್ಟುವರು, 'ಈತನೋ ತತಶ್ಯ ದ್ವಾದಶ ವ ರ್ಹೆ” ಎಂಬಂತೆ ಇನ್ನೂ ಎರಡು ತಿಂಗಳಕಾಲ ಹೆಚ್ಚಾಗಿ ಮನುಷ್ಯ ಗರ್ಭದಲ್ಲಿದ್ದು ಹುಟ್ಟಿದವನೆಂದರನ. (ವಿಷ್ಣು) ಸವಾಪಕನಾದವನು. (ಸನಾತನಃ) ಕೊನೆಮೊದ ಲಿಲ್ಲದ ನಿತ್ಯವಸ್ತುವಾದವನು. (ಜಜ್ಜೆ) ಹುಟ್ಟಿದನು. ಎಂಬುದರಿಂದ, ತಾನು ಸರ ವ್ಯಾಪಕನಾಗಿದ್ದರೂ, ತನ್ನ ವ್ಯಾಪ್ಯ ವಸ್ತುಗಳಲ್ಲಿ ಏಕದೇಶವಾದ ದಶರಥನಿಗೆ ತನ್ನ ಮಗನೆಂಬ ಅಭಿಮಾನಕ್ಕೆ ಪಾತ್ರನಾಗಿದ್ದನೆಂದೂ, ನಿತ್ಯವಸ್ತುವಾಗಿದ್ದರೂ ತನಗೆ ತಾನೇ ಜನ್ಮಾದಿಗಳನ್ನುಂಟುಮಾಡಿಕೊಂಡನೆಂದೂ ಅಭಿಪ್ರಾಯವು.