ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಚಂL ಶ್ರೀಮದ್ರಾಮಾಯಣವು (ಸರ್ಗ, 19 ಭವಿಸುತಿದ್ದ ಸರೊತ್ತಮವಾದ ಮಂಚವನ್ನೂ ನಿನಗಾಗಿಯೇ ಕೊಡಬೇ ಕಂದಿರುವಳು. ಆ ಮಂಚವು ಅಮೂಲ್ಯವಾದ ನವರತ್ನಗಳಿಂದ ಕೆತ್ತಲ್ಪಟ್ಟು, ದಿವ್ಯವಾದ ಮೇಲುಹೊದ್ದಿಕೆಯಿಂದ ಕೂಡಿ, ಆಕೆಗೆ ಬಹುಪ್ರೀತಿಪಾತ್ರನಾ ಗಿರುವುದು.ನಿನ್ನಲ್ಲಿರುವ ಪ್ರೀತಿವಿಶೇಷಕ್ಕಾಗಿ ಅದನ್ನೂ ನಿನಗೇ ಕೊಡುವುದಾ ಗಿರುವಳು. ನನಗೆ ನನ್ನ ಸೋದರಮಾವನು ಕೊಟ್ಟ ಶತ್ರುಂಜಯವೆಂಬ ಹೆಸ ರುಳ್ಳ ಆನೆಯೊಂದಿರುವುದು. ಇನ್ನೂ ಸಾವಿರಾರು ಆನೆಗಳೊಡನೆ ಅದನ್ನೂ, ನಿನಗೆ ಕೊಟ್ಟು ಬಿಡುವೆನು” ಎಂದನು. ಹೀಗೆ ಹೇಳಿದ ರಾಮನ ಮಾತನ್ನು ಕೇ ಆ ಸುಯಜ್ಞನು ಅವೆಲ್ಲವನ್ನೂ ಪ್ರತಿಗ್ರಹಿಸಿ, ರಾಮಲಕ್ಷ್ಮಣರಿಗೂ, ಸೀತೆಗೂ ಮಂಗಳಾತೀರಾದಗಳನ್ನು ಮಾಡಿದನು. ಆಮೇಲೆ ರಾಮನು ಕಾಲ್ಯದಕ್ಷ ನಾಗಿಯೂ, ಜಾಗರೂಕನಾಗಿಯೂ, ತನಗೆ ಪ್ರಿಯಸಹೋದರನಾಗಿಯೂ ಇರುವ ಲಕ್ಷಣವನ್ನು ನೋಡಿ, ಬ್ರಹ್ಮದೇವನು ದೇವೆಂದ್ರನಿಗೆ ಆಜ್ಞೆಮಾ ಡುವಂತೆ ಒಂದಾನೊಂದು ಮಾತನ್ನು ಹೇಳುವನು. (ವತ್ಸ ಲಕ್ಷಣ! ನೀನು ಈಗಲೇ ಹೋಗಿ ಆಗಸ್ಯವಿಶ್ವಾಮಿತ್ರರ ಮಕ್ಕಳಿಬ್ಬರನ್ನೂ ಕರೆದುಕೊಂ ಡುಬಾ ! ಅವರಿಬ್ಬರೂ ಬ್ರಾಹ್ಮಣರಲ್ಲಿ ಬಹಳ ಮೇಲೆನಿಸಿಕೊಂಡಿರುವರು. ಪೈರುಗಳಿಗೆ ನೀರೆರೆಯುವಂತೆ, ನೀನೇ ನಿನ್ನ ಕಮ್ಮಿಂದ ಅವರಿಗೆ ರತ್ನಾಭರಣ ಗಳನ್ನು ಕೊಟ್ಟು ಪೂಜಿಸು. ಅವರಿಗೆ ಬೇಕಾದಷ್ಟು ಬೆಳ್ಳಿ ಬಂಗಾರಗಳನ್ನೂ, ಸಾವಿರಾರು ಗೋವುಗಳನ್ನೂ , ಅಮೂಲ್ಯವಾದ ರತ್ನಗಳನ್ನೂ ಕೊಟ್ಟು, ಅವರನ್ನು ಸಂತೋಷಪಡಿಸು : ತೈತ್ತಿರೀಯ ಶಾಖೆಯನ್ನು ಕಲಿಯುತ್ತಿರುವ ಶಿಷ್ಯರೆಲ್ಲರಿಗೂ ಆಚಾರನಾಗಿ, ಪಂಡಿತೋತ್ತಮನಾಗಿ, ಸಮಸ್ತ ವೇದಗಳ ನ್ಯೂ ಬಲ್ಲವನಾಗಿರುವ ಬ್ರಾಹ್ಮಣೋತ್ತಮನೊಬ್ಬನು, ಬಹುಕಾಲದಿಂದ ನಮ್ಮ ತಾಯಿಯಾದ ಕೌಸಿಯನ್ನಾಶ್ರಯಿಸಿಕೊಂಡು, ಪ್ರತಿದಿನವೂ ಆ ಕೆಗಮಂಗಳಾತೀರಾದಗಳನ್ನು ಮಾಡಿಹೋಗುತ್ತಿರುವನು ಆತನಿಗೆ ಮನಸ್ಯ ಪ್ರಿಯಾಗುವಂತೆ,ಆನೆ, ಕುದುರೆ, ಪಲ್ಲಕ್ಕಿ, ಮೊದಲಾದ ವಾಹನಗಳನ್ನೂ , ದಾಸ ದಾಸೀಜನರನ್ನೂ, ಪಟ್ಟೆ ಪಡಿ ಮೊದಲಾದವಸ್ತ್ರಗಳನ್ನೂ ಕೊಟ್ಟು ಪೂಜಿಸು. ಚಿತ್ರರಥನೆಂಬ ಸಾರಥಿಯು ನಮ್ಮ ತಂದೆಗೆ ಬಹಳಪ್ರೀತಿಪಾತ್ರನಾಗಿರುವನು ಆತನು ಬಹುಕಾಲದಿಂದ ನಮ್ಮ ಅರಮನೆಯಲ್ಲಿಯೇ ಸೇರಿಕೊಂಡಿರುವನು.