ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಖರ್ಗ. ೩೪.] ಅಯೋಧ್ಯಾಕಾಂಡವು. ತಿಳಿಸುವುದಕ್ಕಾಗಿ ಆ ಸುಮಂತ್ರನನ್ನೇ ನಿರೀಕ್ಷಿಸುತ್ತ, ಸ್ವಲ್ಪಹೊತ್ತಿನವರೆಗೆ ಅಲ್ಲಿಯೇ ಸುಮ್ಮನೆ ನಿಂತಿದ್ದನು. ಕೊನೆಗೆ ತಾನಾಗಿಯೇ ಆತನ ಬಳಿಗೆ ಹೋಗಿ, ತಾನು ವನಪ್ರಯಾಣಕ್ಕೆ ಸಿದ್ಧನಾಗಿ ಬಂದಿರುವ ವಿಷಯವನ್ನು ದಶರಥನಿಗೆ ತಿಳಿಸಿ ಬರಬೇಕೆಂದು ಆತನನ್ನು ಕೇಳಿಕೊಂಡನು. ಇಲ್ಲಿಗೆ ಮೂವತ್ತುಮೂರ ನೆಯ ಸರ್ಗವು. ರಾಮನು ವನಪ್ಪಯಾಣಕ್ಕಾಗಿ ದಶರಥನ ಅನುಮತಿ 1 ಯನ್ನು ಕೇಳಿದುದು, j4 ಕಮಲದಳದಂತೆ ವಿಸ್ತಾರವಾದ ಕಣ್ಣುಳ್ಳವನಾಗಿಯೂ, ಶ್ಯಾಮವ ರ್ಣನಾಗಿಯೂ, ಸಣ್ಣನಡುವುಳ್ಳವನಾಗಿಯೂ ಇರುವ ಪೂಜ್ಯನಾದ ರಾಮ ನು, ಅಲ್ಲಿದ್ದ ಸತನನ್ನು ನೋಡಿ, ತಂದೆಗೆ ತಾನು ಬಂದಿರುವ ವೃತ್ತಾಂತ ವನ್ನು ತಿಳಿಸಬೇಕೆಂದು ಹೇಳಿದನು. ರಾಮನಿಂದ ಪ್ರೇರಿಸಲ್ಪಟ್ಟ ಆ ಸುಮಂತ್ರನು, ದುಃಖದಿಂದ ಕಲಗಿದ ಇಂದ್ರಿಯಗಳುಳ್ಳವನಾಗಿ, ಆಗಲೇ ಒಳಕ್ಕೆ ಪ್ರವೇಶಿಸಿ, ಅಲ್ಲಿ ದೈನ್ಯದಿಂದ ನಿಟ್ಟುಸಿರುಬಿಡುತ್ತಿರುವ ದಶರಥನನ್ನು ನೋಡಿದನು. ಆಗ ದಶರಥನ ದುಸ್ಸಿತಿಯನ್ನು ಹೇಳತಕ್ಕುದೇನು ! ರಾಹು ಗ್ರಸ್ತನಾದ ಸೂರನಂತೆಯೂ, ಬೂದಿಮುಚ್ಚಿದ 'ಬೆಂಕಿಯಂತೆಯೂ, ನೀರಿ ಲ್ಲದ ಕೆರೆಯಂತೆಯೂ, ಕಳೆಗುಂದಿದವನಾಗಿದ್ದನು. ಆತನ ಮನಸ್ಸೆಲ್ಲವೂ ಸಂಪೂರ್ಣವಾಗಿ ಕಳವಳಿಸಿತ್ತು. ಅವನು ರಾಮನನ್ನೇ ಕುರಿತು ಹಂಬಲಿಸು ತಿದ್ದನು ಹೀಗೆ ದುರವಸ್ಥೆಯನ್ನು ಹೊಂದಿದ ದಶರಥನಬಳಿಗೆ, ಪ್ರಾಜ್ಯ ನಾದ ಆ ಸುಮಂತ್ರನು ವಿನಯದಿಂದ ಬದ್ಧಾಂಜಲಿಯಾಗಿಯೇ ಬಂ ದು, ಕ್ರಮಪ್ರಕಾರವಾಗಿ ಆತನಿಗೆ ಜಯಶಬ್ದದೊಡನೆ ಮಂಗಳಾಶಾಸನ ವನ್ನು ಮಾಡಿ, ಭಯದಿಂದ ಕುಗ್ಗಿದ ಸ್ವರವುಳ್ಳವನಾಗಿ, ಮೆಲ್ಲಗೆ ಒಂದಾ ನೊಂದು ಮಾತನ್ನು ಹೇಳುವನು, 'ಎಲೈ, ಮಹಾರಾಜನೆ ! ಪುರುಷಶ್ರೇಷ್ಠ ನಾದ ನಿನ್ನ ಕುಮಾರನು ಬಾಗಿಲಲ್ಲಿ ಬಂದು ನಿಂತಿರುವನು. ಆಗಲೇ ಅವನು ಅನೇಕಬ್ರಾಹ್ಮಣರಿಗೂ, ಪರಿಜನರಿಗೂ, ವಿಶೇಷವಾದ ದ್ರವ್ಯವನ್ನು ದಾನ ಮಾಡಿ, ನಿನ್ನನ್ನು ನೋಡಿಹೋಗುವುದಕ್ಕಾಗಿ ಬಂದಿರುವನು. ಮತ್ತು ತನ್ನ