ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೮೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩ ಶ್ರೀಮದ್ರಾಮಾಯಣವು [ಸರ್ಗ.4 ಯು ಫಕ್ಕನೆ ನಕ್ಕನು. ಆಗ ನಿನ್ನ ತಾಯಿಗೆ ಪತಿಯು ತನ್ನನ್ನು ಹಾಸ್ಯಮಾ ಈ ನಗುವನೆಂಬ ಭಾವವುಂಟಾಗಿ, ಆಕೆಯು ಬಹಳವಾಗಿ ಕೋಪಿಸಿಕೊ೦ ಡಳು. ಆ ಕೋಪವೇ ತನಗೆ ಮರಣಹೇತುವಾಗುವುದೆಂಬುದನ್ನು ತಿಳಿಯದೆ ಪತಿಯನ್ನು ಕುರಿತು, ಎಲೆ ಸೌಮ್ಯನೆ! ನೀನು ನಕ್ಕುದೇಕೆ? ಅದರ ನಿಜವಾ ದ ಕಾರಣವನ್ನು ನಾನು ತಿಳಿದುಕೊಳ್ಳಬೇಕೆಂದಿರುವೆನು.” ಎಂದಳು, ಆಗ ನಿನ್ನ ತಂದೆಯು ಪತ್ತಿ ಯನ್ನು ಕುರಿತು, ಎಲೆ ದೇವಿ ! ಅದನ್ನು ನಾನು ಹೇಳಿದೆನಾದರೆ ಈಗಲೇ ನನಗೆ ಮರಣವು ಸಂಭವಿಸುವುದು. ಆದುದರಿಂದ ನಾನು ಯಾರೊಡನೆಯೂ ಅದನ್ನು ಹೇಳಬಾರದು” ಎಂದನು. ಆಗ ಕೂರ ಬುದ್ದಿಯುಳ್ಳ ನಿನ್ನ ತಾಯಿಯು, ಪತಿಯನ್ನು ಕುರಿತು, ನೀನು ಹೇಳಿಯೇ ತೀರ ಬೇಕು! ನೀನು ಬದುಕಿದರೂ ಸರಿ! ಸತ್ತರೂ ಸರಿ! ನನ್ನನ್ನೇ ನೀನು ಹಾಸ್ಯಮಾ ಡಿರುವೆಯೆಂದು ನನಗೆ ತೋರಿರುವುದು. ನೀನು ಹೇಳಿದಹೊರತು ನಾನು ಎಂ ದಿಗೂ ಬಿಡುವಳಲ್ಲ.” ಎಂದಳು, ಈ ನಿನ್ನ ತಾಯಿಯ ಮಾತನ್ನು ಕೇಳಿ ಕೇಕ ಯರಾಜನ್ನು,ಒಡನೆಯೇ ತನಗೆ ವರವನ ಹೋಗಿ ಆತನೊಡನೆ ಆಲೋಚಿಸುವುದಕ್ಕಾಗಿ, ಯಥಾಸ್ಥಿತವಾಗಿ ಆತನಿಗೆ ತಿಳಿಸಿದನು. ಅದನ್ನು ಕೇಳಿ ಆ ಮಹಾತ್ಮನು ನಿನ್ನ ತಂದೆಯನ್ನು ಕುರಿತು, 'ಎಲೆ ರಾಜನೆ ! ಹೇಗಿದ್ದರೂ ನೀನು ಅದನ್ನು ಹೊರ ಪಡಿಸಕೂಡದು. ನಿನ್ನ ಹೆಂಡತಿಯು ಸತ್ತರೂ ಸಾಯಲಿ! ಈ ಅರಮನೆಯನ್ನು ಬಿಟ್ಟು ಹೊರಟುಹೋದರೂ ಹೋಗಲಿ ! ಏನುಮಾಡಿದರೂ ನೀನು ಆ ವಿಷಯವನ್ನು ತಿಳಿಸಬೇಡ” ಎಂದನು, ಇದನ್ನು ಕೇಳಿ ನಿನ್ನ ತಂದೆಯು ಒಡ ನೆಯೇ ಹೊರಟುಬಂದು, ನನ್ನ ತಾಯಿಯನ್ನು ಮನೆಯಿಂದ ಹೊರಡಿಸಿ ನಿಶ್ಚಿಂತನಾಗಿ ಕುಬೇರನಂತೆ ಸುಖದಿಂದಿದ್ದನು, ಎಲೆ ಕೈಕೇಯಿ ! ನೀನು ಪತಿಯಾದ ದಶರಥರಾಜನನ್ನು ದುರಾದೃಕ್ಕೆಳೆದು ಮರುಳುಮಾಡಿ, ಆತನ ನ್ನು ಕೆಡಿಸುವಪ್ರಯತ್ನದಲ್ಲಿರುವೆ! ಲೋಕದಲ್ಲಿ ತಂದೆಯಂತೆ ಗಂಡುಮಕ್ಕಳೂ, ತಾಯಿಯಂತೆ ಹೆಣ್ಣು ಮಕ್ಕಳೂ ಹುಟ್ಟುವರೆಂದು ಜನಜನಿತವಾದ ಪ್ರಸಿದ್ಧಿ ಯುಂಟಲ್ಲವೆ? ಈಗ ನಿನ್ನ ಸ್ವಭಾವವನ್ನು ನೋಡಿದರೆ ಅದು ನಿಜವೆಂದೇ ವ್ಯಕ್ತ ವಾಗುವುದು. ಈ ಅಪವಾದಕ್ಕೆ ನಿನ ಒಳಗಾಗಬೇಡ ! ಪತಿಗೆ ವಿಧೇಯಳಾ ಗಿದ್ದು, ಆತನು ಹೇಳಿದಂತೆ ನಡೆಸು!ನಿನ್ನ ಗಂಡನ ಇಷ್ಟಾನುಸಾರವಾಗಿ ರಾಮನ ಇವನೂ