ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯಣವು (ಸರ್ಗ, ೩೭. ಗಿಲ್ಲ! ರಾಮನು ಹಿಂತಿರುಗಿ ಬರುವವರೆಗೂ ರಾಜ್ಯಾಥಿಕಾರವು ಈಕೆಗೇ ಸಲ್ಲ ಬೇಕು! ಈಕೆಯೇ ರಾಜ್ಯವನ್ನು ಪಾಲಿಸುತ್ತಿರಲಿ! ಗೃಹಸ್ಥರಾದವರಿಗೆ*ಭಾಗ್ಯ ಯೇ ಆತ್ಮವೆಂದು ಶ್ರುತಿಪ್ರಮಾಣದಿಂದ ಸಿದ್ಧವಾಗಿರುವುದು. ಹೀಗೆ ಕೈಹಿಡಿದ ಹೆಂಡತಿಯಾದ ಈ ಸೀತೆಯು ರಾಮನಿಗೆ ಆತ್ಮಭೂತೆಯಾಗಿರುವು ದರಿಂದ, ಅವನಿಗೆ ಸಲ್ಲಬೇಕಾದ ರಾಜ್ಯವನ್ನು ಪಾಲಿಸುವುದಕ್ಕೆ ಈಕೆಯೇ ಬಾಧ್ಯಳು ! ಒಂದುವೇಳೆ ಈ ಸೀತೆಯು ತನ್ನ ಪತಿಯನ್ನಗಲಿರಲಾರದೆ ತಾ ನಾಗಿಯೇ ಇಷ್ಟಪಟ್ಟು ಕಾಡಿಗೆ ಹೊರಡುವುದಾದರೆ, ನಾವೂ ಅವರೊಡ ನೆಯೇ ಹೊರಟು ಹೋಗುವೆವು! ಈ ಪಟ್ಟಣವೂ ಅವರನ್ನು ಹಿಂಬಾಲಿಸುವು ದು! ರಾಮನು ಪತ್ನಿ ಸಮೇತನಾಗಿ ಎಲ್ಲಿಗೆ ಹೋಗುವನೋ, ಅಲ್ಲಿಗೆ ನಮ್ಮ ದಂ ಡನಾಯಕರೆಲ್ಲರೂ ಹೊರಟುಹೋಗುವರು. ರಾಜನಾಗಲಿ, ಆತನ ಅನುಜೀವಿಗ ಳಾಗಲಿ, ಪುರವಾಸಿಗಳಾಗಲಿ, ದೇಶವಾಸಿಗಳಾಗಲಿ, ತಮ್ಮ ತಮ್ಮ ಪರಿವಾರಗ ಳೊಡನೆ ಆ ರಾಮನನ್ನೇ ಹಿಂಬಾಲಿಸುವರು. ಭರತಶತ್ರುಫುರಾದರೂ ಇಲ್ಲಿ ನಿಲ್ಲುವರೆಂದೆಣಿಸಬೇಡ ! ಅವರೂ ನಾರುಮಡಿಗಳನ್ನು ಟ್ಟು ಅಣ್ಣನ ಹಿಂ ಬಾಲಿಸುವರು. ಆಮೇಲೆ ಘೋರಾರಣ್ಯದಂತೆ ಶುದ್ಯಶೂನ್ಯವಾದ ಈ ದೇ' ಶವನ್ನು ನೀನೊಬ್ಬಳೇ ಸೈಜ್ಞೆಯಾಗಿ ಆಳಬಹುದು! ಇಷ್ಟಬಂದಂತೆ ಪ್ರಜೆಗ ಳನ್ನು ಹಿಂಸಿಸುತ್ತಿರಬಹುದು ! ಮುಖ್ಯವಾಗಿ ನಡೆಯತಕ್ಕ ನಿಜತತ್ವವನ್ನು ಒಂ ದೇಮಾತಿನಲ್ಲಿ ಹೇಳುವೆನು ಕೇಳು. ರಾಮನಿರತಕ್ಕ ಪ್ರದೇಶವೇ ರಾಜ್ಯವು. ಆವ ನಿಲ್ಲದ ಸ್ಥಳವೇ ಅರಣ್ಯವೆಂದು ತಿಳಿ ! ಭರತನು ದಶರಥನಿಗೆ ಹೊಟ್ಟೆಯಲ್ಲಿಹು ಟ್ಟಿದ ಮಗನಾಗಿದ್ದರೂ, ತಂದೆಯು ತಾನಾಗಿ ಇಷ್ಟಪಟ್ಟು ಕೊಡದ ರಾಜ್ಯ ವನ್ನು ಪಾಲಿಸುವುದಕ್ಕೆ ಮಗನು ಎಂದಿಗೂ ಅರ್ಹನಾಗಲಾರನು. ಇನ್ನು ಮುರಿ ದೆ ಆತನು ತಂದೆಗೆ ಕೇಡನ್ನು ತಂದ ನಿನ್ನನ್ನು ತಾಯಿಯೆಂದೂ ಗೌರವಿಸಲಾ ರನು! ನಿನ್ನ ಬುದ್ಧಿಯು ವಿಪರೀತವಾಗಿ ಪರಿಣಮಿಸಿಹೋಗಿರುವುದರಿಂದ, ನೀ ನ ಭೂಮಿಯಿಂದ ಆಕಾಶಕ್ಕೆ ಹಾರುವವಳಾಗಿದ್ದರೂ, ತನ್ನ ತಂದೆಯ ವಂಶ ಚರಿತ್ರವೆಲ್ಲವನ್ನೂ ಚೆನ್ನಾಗಿ ಬಲ್ಲ ಆಭರತನು, ನಿನ್ನಂತೆ ವಿಪರೀತ ಮಾರ್ಗಕ್ಕೆ ಪ್ರವರಿಸಲಾರನು. ಆತನು ದಶರಥನ ಮಗನೇ ಆಗಿದ್ದ ಪಕ್ಷದಲ್ಲಿ, ತನ್ನ

  • ಇಲ್ಲಿ ಅರೆವಾ ಏಷ ಆತ್ಮನೋ ಯತ್ನಿ” ಎಂದು ಶ್ರುತಿಯು