ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೮, ೨೮೨ ಶ್ರೀಮದ್ರಾಮಾಯಣವು [ಸರ್ಗ, ೧, ಬಹಳಸ್ಮರಣ ಶಕ್ತಿಯುಳ್ಳವನು. ಹೊಸಹೊಸದಾಗಿ ವಿಕಾಸಹೋಂ 'ದುವ ಬುದ್ದಿಮಹಿಮೆಯುಳ್ಳವನು. ಜನಗಳಲ್ಲಿ ಸಾಂಕೇತಿಕವಾಗಿ ಅನುಸರಿಸಿ ಬಂದ ಆಚಾರಸಂಪ್ರದಾಯಗಳ ನ್ಯಾಯಗಳನ್ನರಿತವನು. ಎಲ್ಲಾ ವಿಷ ಯಗಳಲ್ಲಿಯೂ ಸಂಪೂರ್ಣವಾದ ತಿಳುವಳಿಕೆಯುಳ್ಳವನಾಗಿರುವನು. ಬಹಳ ವಿನೀತನು. ತನ್ನ ಮನೋವಿಕಾರಗಳನ್ನೂ, 'ಇಂಗಿತಗಳನ್ನೂ ಹೊರಪಡಿಸದ ಗಂಭೀರಸ್ವಭಾವವುಳ್ಳವನು. ಆತನ ಕಾರೈಾಲೋಚನೆ ಗಳು'ಫಲಸಿದ್ಧಿಯಾಗುವಾಗಲೇ ಹೊರಕ್ಕೆ ಬರುವುವೇ ಹೊರತು,ಅದಕ್ಕೆ ಮೊದ ಲು ಯಾರಿಂದಲೂ ತಿಳಿಯಲು ಸಾಧ್ಯವಲ್ಲ. ಆತನಿಗೆ ಪ್ರಶಸ್ತರಾದ ಮಂತ್ರಿಗ ಳಿರುವರು.ಆತನಿಗೆ ಒಬ್ಬರಮೇಲೆ ಕೋಪವಾಗಲಿ, ಅಥವಾ ಅನುಗ್ರಹವಾಗಲಿ ಹುಟ್ಟಿದರೆ, ಅದು ಫಲಪ‌ಂತವಾಗಿ ಕೊನೆಮುಟ್ಟದೆ ಬಿಡದು. ತನ್ನಲ್ಲಿರುವ ಧನವನ್ನಾಗಲಿ,ಅಥವಾ ಇತರ ವಸ್ತುಗಳನ್ನಾಗಲಿ, ಯಾವಾಗ ಧಾರಾಳವಾಗಿ ಹೊರಕ್ಕೆ ಬಿಡಬೇಕೋ,ಯಾವಾಗ ಕೈತಡೆಯಬೇಕೋ, ಆಸೂಕ್ಷಾಂಶಗಳನ್ನೆ ಲ್ಲಾ ಆತನು ಚೆನ್ನಾಗಿಬಲ್ಲನು.ಗುರುಜನಗಳಲ್ಲಿಯೂ ದೇವತೆಗಳಲ್ಲಿಯೂ ದೃಢ ಭಕ್ತಿಯುಳ್ಳವನು, ಅಂತಹ ಭಕ್ತಿಯಿಂದುಂಟಾದ ಆತನ ಜ್ಞಾನವೂ ಸ್ಥಿರ ವಾದುದು. ಆತನು ಕೆಟ್ಟ ವಸ್ತುಗಳನ್ನಾಗಿ ಕೆಟ್ಟದ್ರವ್ಯಗಳನ್ನಾಗಿ ಪರಿಗ್ರ ಹಿಸತಕ್ಕವನಲ್ಲ. ಕೆಟ್ಟಮಾತೆಂಬುದು ಆತನ ಬಾಯಿಂದ ಎಂದಿಗೂ ಹೊರ ಮುದಿಲ್ಲ. ಯಾವ ಕಾರಗಳಲ್ಲಿಯೂ ಬೇಸರಪಡತಕ್ಕವನಲ್ಲಿ ಎಲ್ಲಾ ವಿಷಯಗ ಇನ್ನೂ ಬಹಳಜಾಗರೂಕತೆಯಿಂದ ನೋಡುವನು, ಪರರದೋಷಗಳನ್ನು ಮಾ ತ್ರವೇ ಅಲ್ಲದೆ ತನ್ನ ದೋಷಗಳನ್ನೂ ತಾನು ಚೆನ್ನಾಗಿತಿಳಿದುಕೊಂಡು ಅದನ್ನು ತಿದ್ದಿಕೊಳ್ಳುವ, ಅದ್ಭುತವಾದ ಒಂದುಗುಣವು ಆತನಿಗುಂಟು, ಸಮಸ್ಯಶಾ ಸಗಳನ್ನೂ ಬಲ್ಲವನು.ಇತರರು ತನಗೆ ಮಾಡಿದ ಎಳ್ಳಷ್ಟುಪಕಾರವನ್ನೂ ಬೆ ಟ್ಯದಂತೆ ಭಾವಿಸತಕ್ಕವನು, ಇತರರನ್ನು ನೋಡಿದಾಗಲೇ ಅವರ ಸುಗುಣ ದುರ್ಗುಣಗಳನ್ನು ತಿಳಿದುಕೊಳ್ಳತಕ್ಕವನು, ಮಿತ್ರರನ್ನು ಸ್ವೀಕರಿಸುವುದ ರಲ್ಲಿಯೂ, ಹಾಗೆ ಸ್ವೀಕರಿಸಲ್ಪಟ್ಟವರನ್ನು ಕಾಪಾಡುವ ವಿಷಯದಲ್ಲಿಯೂ, ಶಾಸ್ತಮರಾದೆಯನ್ನನುಸರಿಸಿಯೇ ನಡೆದುಕೊಳ್ಳತಕ್ಕ ಮಹಾನಿಪುಣನು. ಸತ್ಪುರುಷರನ್ನು ಸಂಗ್ರಹಿಸುವುದಕ್ಕೂ, ಅವರನ್ನು ಪಾಲಿಸುವುದಕ್ಕೂ, ದು