ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ka ಸರ್ಗ, ೩೮.] ಅಯೋಧ್ಯಾಕಾಂಡವು. ರತ್ನಾಭರಣಗಳನ್ನೇ ಧರಸಿ, ಸಮಸ್ತ ಸುಖಸಾಮಗ್ರಿಗಳೊಡನೆಹೋಗಲಿ! ನಾ ನಂತೂ ಇನ್ನು ಬದುಕಿರುವುದೇ ಅಸಾಧ್ಯವು.ಮರಣಕಾಲವು ಸಮೀಪಿಸಿತೆಂದೇ ಹೇಳಬಹುದು ! ಇದರಿಂದಲೇ ನಿನಗೆ ಕೇಳಿದ ವರಗಳನ್ನು ಕೊಡುವುದಾಗಿ ಸತ್ಯಮಾಡಿಕೊಡುವಂತೆ ನನಗೆ ಈ ವಿಪರೀತಬುದ್ಧಿಯು ಹುಟ್ಟಿತು. ಅದಕ್ಕೆ ತಕ್ಕಂತೆ ನಿನಗೂ ದುರ್ಬುದ್ದಿಯು ಹುಟ್ಟಿ, ನಾನು ಕೊಟ್ಟವರಗಳಲ್ಲಿ ಒಂದಕ್ಕೆ ರಾಮನನ್ನು ಕಾಡಿಗೆ ಕಳುಹಿಸಬೇಕೆಂದೂ, ಮತ್ತೊಂದಕ್ಕೆ ಭರತನಿಗೆ ಪಟ್ಟ ಕಟ್ಟಬೇಕೆಂದೂ ಕೇಳಿಕೊಂಡೆ.ಬಿದಿರುಮೆಳೆಗಳಲ್ಲಿ ಹುಟ್ಟಿದ ಪದ್ಮವೇ ಅವು ಗಳನ್ನು ದಹಿಸುವಂತೆ, ನನ್ನ ಪ್ರತಿಜ್ಞೆಯೇ ಈಗ ನನ್ನನ್ನು ಸುಡುತ್ತಿರುವುದು. ಎಲೆ ಕೈಕೇಯಿ! ರಾಮನಲ್ಲಿ ಒಂದುವೇಳೆ ನಿನಗೆ ಏನಾದರೂ ವೈರಬುದ್ಧಿ ಯಿದ್ದರೂ,ಸೀತೆಯು ನಿನಗೆ ಮಾಡಿದ ಅಪಕಾರವೇನು?ಜಿಂಕೆಯ ಕಣ್ಣಿನಂತೆ ವಿಸ್ತಾರವಾದ ಕಣ್ಣುಳ್ಳವಳಾಗಿ, ಮೃದುಸ್ವಭಾವವುಳ್ಳ ಈಬಾಲೆಯು, ಮುಂ ದೆಯಾದರೂ ನಿನಗೆ ಯಾವ ಅಪಕಾರವನ್ನು ಮಾಡಬಲ್ಲಳು?ಎಲೆ ಪಾಪಿ!ರಾ ಮನನ್ನು ಕಾಡಿಗೆ ಹೊರಡಿಸಿದರೆ ಸಾಲದೆ?ಇದೊಂದೇ ನಿನ್ನ ಆತ್ಮವಿರುವವರೆ ಗೂ ಸೀನು ನರಕ ಬಾಧೆಯನ್ನನುಭವಿಸುವುದಕ್ಕೆ ಸಾಕಾಗಿರುವುದು ಅದಕ್ಕೂ ಮೇಲೆಮೇಲೆ ದುಃಖಕರವಾದ ಪಾಪಕೃತ್ಯಗಳನ್ನು ಮಾಡಬೇಕೆಂಬ ದುರ್ಬ `ಯು ನಿನಗೇಕೆ ಹುಟ್ಟಿತು?ಇನ್ನು ನೀನು ಯಾವಯಾವನರಕಯಾತನೆಯನ್ನ ನುಭವಿಸಬೇಕೋ ತಿಳಿಯದು!ರಾಮನನ್ನು ನಾನು ಆಭಿಷೇಕಾರವಾಗಿ ಇಲ್ಲಿ ಗೆ ಕರೆಸಿವಗ್ರ, ಆತನ ಕೈಗೆ ನಾರುಬಟ್ಟೆಗಳನ್ನು ಕೊಟ್ಟು, ಕಾಡಿನಲ್ಲಿ ಹದಿನಾ ಲ್ಕು ವರುಷಗಳಿದ್ದು ಬರಬೇಕೆಂದು ನೀನು ಹೇಳಿದೆ' ಮೋಹಾಂಧನಾದ ನಾ ನೂ ಹಾಗೆಯೇ ನಿನಗೆ ಪ್ರಜ್ಞೆ ಮಾಡಿಕೊಟ್ಟೆನು. ಇಷ್ಟೆಹೊರತು ಸೀತೆಯ ವಿಷಯವಾಗಿ ನೀನು ಯಾವ ಮಾತನ್ನೂ ಹೇಳಲಿಲ್ಲ! ನಾನೂ ಈ ವಿಷಯ ದಲ್ಲಿ ಏನೂ ಪ್ರತಿಜ್ಞೆ ಮಾಡಿಕೊಟ್ಟಿಲ್ಲ. ಹೀಗಿರುವಾಗಲೂ ಸುಕುಮಾರಿ ಯಾದ ಈಸೀತೆಯು ನಾರುಬಟ್ಟೆಯನ್ನು ಟ್ಟುಕೊಳ್ಳುವಾಗ ನೀನು ಕಣ್ಣಾ ರೆನೋಡುತ್ತಿರುವೆಯಲ್ಲವೆ ? ಆಃ ! ನಿನ್ನ .ಕೌರವನೆಂದು ಹೇಳಲೆ ! ನೀವು ಯಾವ ನರಕದಲ್ಲಿ ಬಿಳುವೆಯೋ ಕಾಣೆನು : ಮೊದಲು ಕೊಟ್ಟಿ, ಮಾತಿನಲ್ಲಿ ನಿಲ್ಲದೆ, ಮೇಲೆಮೇಲೆ ಮಿತಿಮೀರಿ ಹೋಗುತ್ತಿರುವ ನೀನು ನಿನ್ನ ದುರ್ಬುದ್ಧಿಗೆ ತಕ್ಕ ನರಕಶಿಕ್ಷೆಯನ್ನು ಅನುಭವಿಸದಿರಲಾರೆ!” ಎಂದನು.