ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Yo ಶ್ರೀಮದ್ರಾಮಾಯಣದ [ಸರ್ಗ. ೩೮. ಮಹಾತ್ಮನಾದ ದಶರಥನು ಹೀಗೆಂದು ಹೇಳುತ್ತಾ ಫುಟ್ಟೆಯಾಗಿ ಪ್ರಲಾ ಪಿಸುತ್ತಿದ್ದನು. ಆತನ ದುಃಖಕ್ಕೆ ಪಾರವೇ ಇರಲಿಲ್ಲ. ಪತ್ರವ್ಯಸನದಲ್ಲಿ ಮು ಳುಗಿ,ಹಾಗೆಯೇ ಪ್ರಜ್ಞೆ ತಪ್ಪಿ ನೆಲದಮೇಲೆ ಬಿದ್ದನು. ಇತ್ತಲಾಗಿ ವನಪ್ರ ಯಾಣಕ್ಕೆ ಸಿದ್ಧನಾದ ರಾಮನು, ತಲೆಯನ್ನು ತಗ್ಗಿಸಿಕೊಂಡು ಮುಂದೆಕುಳಿ ತಿದ್ದ ತನ್ನ ತಂದೆಯನ್ನು ನೋಡಿ, ಎಲೈ ತಂದೆಯೆ! ನೀನು ಸಮಸ್ತಧಮ್ಮಗಳ ನ್ನೂ ತಿಳಿದವನಾದುದರಿಂದ, ನಾನು ನಿನ್ನಲ್ಲಿಪ್ರಾಸಿ ಕೇಳಬೇಕಾದುದೆಂ ದೂ ಇಲ್ಲವು. ಆದರೂ ವಿಜ್ಞಾಪಿಸಿಕೊಳ್ಳುವೆನು. ಯಶಸ್ವಿನಿಯಾದ ನನ್ನ ತಾಯಿಯು ವೃದಳೆಂಬುದನ್ನು ನೀನೂ ಬಲ್ಲೆ. ಅವಳು ಸರೌತಮವಾ ದ ಸೌಶೀಲ್ಯವುಳ್ಳವಳೆಂಬುದನ್ನೂ ಬಲ್ಲೆ. ಆ ಸುಸ್ವಭಾವದಿಂದಲೇ ಆಕೆಯು ಪ್ರಿಯಪುತ್ರನಾದ ನನ್ನನ್ನು ನೀನು ಕಾಡಿಗೆ ಕಳುಹಿಸುತ್ತಿದ್ದರೂ, ನಿನ್ನಲ್ಲಿ ಯಾವವಿಧವಾದ ಅತೃಪ್ತಿಯನ್ನೂ ತೋರಿಸಿಕೊಳ್ಳದೆ, ನಿನ್ನನ್ನು ನಿಂದಿಸದೆ, ಗೌರವಿಸುತ್ತಿರುವಳು. ನನ್ನ ಗಲಿಕೆಯನ್ನು ಸಹಿಸಲಾರದೆ ಆಕೆಯು ಮಹ ತಾದ ದುಃಖಸಾಗರದಲ್ಲಿಯೇ ಮುಳುಗಿರುವಳು. ಇಂತಹ ಮಹಾದುಃಖವ ನ್ನು ಆಕೆಯು ಎಂದಿಗೂ ಕಂಡನುಭವಿಸಿದವಳಲ್ಲ. ಆದುದರಿಂದ ಆಕೆಯನ್ನು ನೀನು ಮೊದಲಿಗಿಂತಲೂ ಹೆಚ್ಚಾಗಿ ಆದರಿಸುತ್ತಿರಬೇಕು. ಇದೇ ನನ್ನ ಮು ಖ್ಯವಾದ ಪ್ರಾರನೆಯು, ನೀನು ಆಕೆಗೆ ಮಾಡುತ್ತಿರುವ ಸತ್ಕಾರಗಳಿಂದ ಆ ಕೆಯು ಪುತ್ರಶೋಕವನ್ನೇ ಮರೆತು ಬಿಡುವಂತೆ ಮಾಡಬೇಕು. ಸೀನು ಆವ ಇನ್ನು ಸತ್ಕರಿಸುತಿದ್ದರೆ, ಅವಳು ಆಗಾಗ ನನ್ನನ್ನು ಸ್ಮರಿಸಿಕೊಂಡರೂ, ಆ ಷ್ಟಾಗಿ ದುಃಖಿಸದೆ, ನಿನ್ನ ಆದರಣೆಯಿಂದ ನಾನು ಬರುವವರೆಗೂ ಜೀವಿಸಿ ಕೊಂಡಿರುವಳು. ನೀನು ಸಾಕ್ಷಾನ್ಮಹೇಂದ್ರನಿಗೆ ಸಮಾನವಾದ ತೇಜಸ್ಸುಳ್ಳ ವನು. ನನ್ನನ್ನು ಕುರಿತು ಯಾವಾಗಲೂ ಹಂಬಲಿಸುತ್ತಿರುವ ತಾಯಿಯಾದ ಕೌಸಲ್ಯಯು, ನಾನು ಕಾಡಿಗೆ ಹೊರಟುಹೋದಮೇಲೆ, ನನ್ನ ವಿರಹದುಃ ಖದಿಂದ ಕೊರಗಿ ಸಾಯದಂತೆ ನೋಡಿಕೊಳ್ಳತಕ್ಕ ಭಾರವು ನಿನಗೇ ಸೇರಿರು ವುದು” ಎಂದನು ಇಲ್ಲಿಗೆ ಮೂವತ್ತೆಂಟನೆಯಸರ್ಗವು.