ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೦೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೪೫ ಸರ್ಗ, ೪೦.] ಅಯೋಧ್ಯಾಕಾಂಡವು. ಕ್ಷೇಮದಿಂದ ನೋಡಿಕೊಳ್ಳುತ್ತಿರು.ನನ್ನ ವನವಾಸಕಾಲವು ಶೀಘ್ರದಲ್ಲಿಯೇ ಮುಗಿದು ಹೋಗುವುದು.ನೀನು ಮಲಗಿದ್ದು,ಕಣ್ಣು ಮುಚ್ಚಿ ಕಣ್ಣು ತೆರೆಯು ವಷ್ಟರಲ್ಲಿಯೇ ನಾನು ಹಿಂತಿರುಗಿ ಬಂದುಬಿಡುವೆನು. ಆಗ ಕೃತಾರ್ಥನಾಗಿ ಮಿತ್ರರೊಡಗೂಡಿ ಸಂತೋಷದಿಂದ ಬಂದ ನನ್ನನ್ನು ನೀನು ನಿನ್ನ ಕಣ್ಣಾರೆ ನೋಡಬಹುದು” ಎಂದನು.ಹೀಗೆ ರಾಮನು ನಿಷ್ಪ್ಯಾರವುಳ್ಳ ಈ ಮಾತನ್ನು ಹೇಳಿ, ಆಕೆಯನ್ನು ಸಮಾಧಾನಪಡಿಸಿದಮೇಲೆ,ಉಳಿದ ಮುನ್ನೂ ರೈವತ್ತು ಮಂದಿ ಮಾತೆಯರನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ನೋಡಿ, ಅವರಿಗೂ ಹೀಗೆಯೇ ಸಮಾಧಾನವಾಕ್ಯಗಳನ್ನು ಹೇಳಿ, ಆಮೇಲೆ ಅವರೆಲ್ಲರಿಗೂ ಒಟ್ಟಿಗೆ ಕೈ ಮುಗಿದುಎಲೆ, ಜನನಿಯರೆ! ಅಜಾ ನದಿಂದಲಾಗಲಿ, ಅಥವಾ ನಿ ಮ್ಮಲ್ಲಿ ವಿಶೇಷವಾದ ಸಲಿಗೆಯಿಂದಾಗಲಿ, ನಾನುಯಾವ ಅಪರಾಧವನ್ನು ಮಾ ಡಿಬ್ಬರೂ ಮನ್ನಿಸಿ, ನನ್ನ ವನಪ್ರಯಾಣಕ್ಕೆ ಅನುಮತಿಯನ್ನು ಕೊಡಬೇಕು” ಎಂದನು. ಹೀಗೆ ರಾಮನು ಹೇಳಿದ ಥರ ಯುಕ್ತವಾದ ಮಾತನ್ನು ಕೇಳಿ,ಆ ರಾಜಸಿಯರೆಲ್ಲರೂ ವ್ಯಸನಪೀಡಿತರಾಗಿ ಉಚ್ಚಸ್ವರದಿಂದ ಅಳುವುದಕ್ಕಾ ರಂಭಿಸಿದರು. ಕ್ರೌಂಚಪಕ್ಷಿಗಳು ಕೂಗಿಕೊಳ್ಳುವಂತೆ ಆ ಸ್ತ್ರೀಯರೆಲ್ಲರೂ ಒಟ್ಟಾಗಿ ಕೂಡಿ, ಗೋಳಿಡುತಿದ್ದರು. ಮೊದಲು ನಿತ್ಯವೂ ಭೇರೀಮೃದಂಗ ಮೊದಲಾದ ಮಂಗಳವಾದ್ಯಗಳಿಂದ ಶೋಭಿಸುತ್ತಿದ್ದ ಆ ದಶರಥನ ಅರಮನೆಯಲ್ಲಿ, ಈಗ ಒಂದುಕಡೆಯಲ್ಲಿ ರಾಜಸ್ತ್ರೀಯರ ಗೋಳಾಟದ ಧ್ವನಿ! ಮತ್ತೊಂದು ಕಡೆಯಲ್ಲಿ ರಾಮನಗುಣಗಳ ಕೊಂಡಾಟದ ಧ್ವನಿ ! ಇನ್ನೊಂದುಕಡೆಯಲ್ಲಿ ಕೈಕೇಯಿ ವಿಷಯವಾದ ನಿಂದಾ ವಾಕ್ಯಗಳ ಧ್ವನಿ ! ಇವೆಲ್ಲವೂ ಬಹಳ ದುಃಖಕರವಾಗಿ ಕಾಣಿಸುತಿತ್ತು. ಇಲ್ಲಿಗೆ ಮೂವತ್ತೊಂ ಭತ್ತನೆಯ ಸರ್ಗವು, ++ರಾಮನು ವನಕ್ಕೆ ಪ್ರಯಾಣಮಾಡಿದ್ದು, ಪ್ರಜೆಗಳ ವಿಲಾಪವು+w ಹೀಗೆ ಸೀತಾರಾಮಲಕ್ಷ್ಮಣರು ಮೂವರೂ ಕೈಮುಗಿದು, ದಶರ ಥನ ಪಾದಗಳನ್ನು ಹಿಡಿದು ನಮಸ್ಕರಿಸಿ, ತಾಯಿತಂದೆಗಳ ಶುಶೂಷೆಯ ನ್ನು ಬಿಟ್ಟು ಹೋಗಬೇಕೆಂಬ ವ್ಯಸನಕ್ಕಾಗಿ ಮನಸ್ಸಿನಲ್ಲಿಯೇ ಕೊರಗುತ್ತ 35