ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬೨ ಶ್ರೀಮದ್ರಾಮಯಣವು [ಸರ್ಗ ೪೩. ನದಿಂದ ಹಿಂತಿರುಗಿ ಬಂದವರಂತೆ,ಅಮಂಗಳಕರವಾದ ಆ ಅಯೋಧ್ಯಾಪುರವ ನ್ನು ಪ್ರವೇಶಿಸಿದನು. ಆಗ ಅಯೋಧ್ಯಾ ಪಟ್ಟಣದ ದುಸ್ಥಿತಿಯನ್ನು ಹೇಳ ತಕ್ಕುದೇನು?ಅಲ್ಲಿನ ಚತುಷ್ಪಥಗಳೂ,ಮನೆಯಬಾಗಿಲುಗಳೂ ಹಾಳುಬಿದ್ದು, ನಿರ್ಜನವಾಗಿ ಕೇವಲಶೂನ್ಯಪ್ರದೇಶದಂತೆ ಕಾಣುತಿದ್ದುವು.ಆಪಟ್ಟಣದ ಅಂ ಗಡಿಬೀದಿಗಳಲ್ಲಿರುವ ದೇವಾಲಯಗಳೆಲ್ಲವೂ ಮುಚ್ಚಲ್ಪಟ್ಟಿದ್ದುವು. ಸಂಚಾರ ಶಕ್ತಿಯಿಲ್ಲದ ಕೇವಲದುಶ್ಚಲರು ಮಾತ್ರವೇ ಅಲ್ಲಲ್ಲಿ ನಿಂತು ದುಃಖಿಸುತಿದ್ದ `ರು.ದೊಡ್ಡ ದೊಡ್ಡ ರಾಜಮಾರ್ಗಗಳಲ್ಲಿ ಕೂಡ ಒಬ್ಬರಿಬ್ಬರೇ ನಿಂತಿದ್ದರು. ಹೀ ಗೆ ಹಾಳುಬಿದ್ದಂತಿರುವ ಆಪಟ್ಟಣವನ್ನು ನೋಡಿ ದಶರಥನು,ರಾಮನನ್ನೇ ಚಿಂ ತಿಸಿ ಪ್ರಲಾಪಿಸುತ್ತ,ಮೇಘಮಂಡಲದಲ್ಲಿ ಮರೆಹುಗುವ ಸೂ‌ನಂತೆ ಕಾಂ ತಿಹೀನನಾಗಿ ಆರಮನೆಯನ್ನು ಪ್ರವೇಶಿಸಿದನು. ಮಡುವಿನಲ್ಲಿ ಬಹುಕಾಲದಿಂ ದ ಕಾವಲಿದ್ದ ಒಂದು ಮಹಾಸವನ್ನು ಗರುಡನು ಎತ್ತಿಕೊಂಡುಹೋದ ಮೇಲೆ, ಆಮಡುವಿನ ಸ್ಥಿತಿಯು ಹೇಗಿರಬಹುದೋ,ಹಾಗೆ ಸೀತಾರಾಮಲಕ್ಷ ಣರಿಂದ ಶೂನ್ಯವಾದ ಅಮನೆಯು ಬಹಳ ಹೀನದಶೆಯನ್ನು ಹೊಂದಿದ್ದುದನ್ನು ನೋಡಿ, ಮೇಲೆಮೇಲೆ ಹೆಚ್ಚುತ್ತಿರುವ ವ್ಯಸನದಿಂದ ದಶರಥನು ಪ್ರಲಾಪಿಸು ತ್ಯ ಒಳಕ್ಕೆ ಪ್ರವೇಶಿದನು. ಆಗ ದುಃಖಾತಿಶಯದಿಂದ ಆತನ ಕಂಠದಲ್ಲಿ ಸ್ವ ರವೇಹೊರಡಲಿಲ್ಲ! ಹೀಗಿದ್ದರೂ ಬಹುದೈವದಿಂದ ಕುಗ್ಗಿದ ಧ್ವನಿಯುಳ್ಳವ ನಾಗಿ ನನ್ನ ನ್ನು ಈಗಲೇ ರಾಮನತಾಯಿಯಾದ ಕೌಸಿಯ ಆಂತಃಪುರಕ್ಕೆ ಕರೆದುಕೊಂಡು ಹೋಗಿರಿ! ಬೇರೆಲ್ಲಿಯೂ ನನ್ನ ಮನಸ್ಸಿಗೆ ಸಮಾಧಾನವಿ ರದು” ಎಂದನು. ಇದನ್ನು ಕೇಳಿ ದ್ವಾರಪಾಲಕರು ಆತನನ್ನು ಎತ್ತಿಕೊಂಡು ಬಂದವರನ್ನು, ಮೃತ ಸ್ನಾನಮಾಡಿ ಬಂದವರಿಗೆ ಹೋಲಿಸುವುದು ಅಶ್ಲೀಲವಾದುದ ರಿಂದ, ಹೀಗೆ ಹೇಳುವುದು ಯುಕ್ತವಲ್ಲವಾದರೂ, ಆಗ ದಶರಥನು 'ನೋನಂ ಭಯ ಮುಷ್ಯತಿ” ಎಂದು ಸೀತೆಗೆ ವಿಪತ್ತನ್ನು ಶಂಕಿಸಿ, ತನ್ಮೂಲಕವಾಗಿ ರಾಮವಿಪತ್ತಿ ಯನ್ನೂ, ಅದರಿಂದ ತನಗೂ ಹಾನಿಯನ್ನೂ ಶಂಕಿಸಿದನು, ಈ ಶಂಕೆಯಿಂದಲೇಸರ್ ಮಾ ಭವ ಕೈಕೇಯಿ” ಎಂದೂ 'ವಿಧವಾ ರಾಜ್ಯ ಮಾವಸ” ಎಂದೂ ಹೇಳಿರುವನು. ಆದುದರಿಂದ ಇಲ್ಲಿ ಸೀತಾರಾಮಾದಿಗಳಿಗೆ ಮರಣವು ನಿಜವಾಗಿಲ್ಲದಿದ್ದರೂ, ದಶರಥನ ಬುದ್ದಿಗೆ ಹಾಗೆ ತೋರಿಬಿಟ್ಟುದರಿಂದ, ಅದನ್ನನುಸರಿಸಿಯೇ ಕವಿಯು ಹೀಗೆ ಹೇಳಿರುವ ನಂದು ಗ್ರಹಿಸುವುದರಿಂದ ಆ ವಿಧವಾದ ಅಶ್ಲೀಲದೋಷವಿಲ್ಲವು.