ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಇಳಂ ಶ್ರೀಮದ್ರಾಮಾಯಣವು [ಸರ್ಗ, ೪೫, ಕುರಿತು, (ವತ್ಸರಾಮಾ! ಇದೇನು? ನೀನು ಯಾವಾಗಲೂ ಬ್ರಾಹ್ಮಣರನ್ನು ಎಷ್ಟೇ ಗೌರವದಿಂದ ಪೂಜಿಸುತ್ತಿದ್ದವನಲ್ಲವೆ ? ಈಗ ಅನೇಕಬ್ರಾಹ್ಮಣರು ನಿನ್ನನ್ನು ಬಿಡದೆ ಹಿಂಬಾಲಿಸಿ ಬರುತ್ತಿರುವರು. ಆ ಬ್ರಾಹ್ಮಣರುಮಾತ್ರವೇ ಆ ಲ್ಲ. ಅವರು ಅರಣಿಯಲ್ಲಿ ಆರೋಪಿತವಾದ ಅಗ್ನಿಗಳನ್ನು ತಮ್ಮ ತಮ್ಮ ಹೆಗಲಿ ನಮೇಲೆ ಹೊತ್ತುಕೊಂಡು ಬರುವುದರಿಂದ, ಅವರವರ ಅಗ್ನಿ ಹೋತ್ರಗಳೂ ನಿನ್ನನ್ನು ಹಿಂಬಾಲಿಸುತ್ತಿರುವುವು. ಶರತ್ಕಾಲದ ಮೇಫುಗಳಂತೆ ಬಿಳುಪಾದ ನಮ್ಮ ವಾಜಪೇಯಚ್ಛತ್ರಗಳೂ ಇದೋ ನಿನ್ನನ್ನೇ ಹಿಂಬಾಲಿಸಿ ಬರುತ್ತಿರು ವುವು. ಈಗ ನನಗೆ ಛತ್ರಾಕ್ಯುಪಚಾರಗಳೊಂದೂ ಇಲ್ಲವಲ್ಲವೆ ? ನಮಗೆ ವಾಜಪೇಯದಲ್ಲಿ ಬಂದಿರುವ ಈ ಕೊಡೆಗಳಿಂದಲೇ ನಿನಗೆ ನೆಳಲನ್ನುಂಟುಮಾ ಡುವೆವು. ವತ್ಸನೆ! ಇದುವರೆಗೂ ನಿಶ್ಚಿಂತನಾಗಿ,ಯಾವಾಗಲೂ ವೇದಮಂತ್ರ ಗಳಲ್ಲಿಯೇ ಪ್ರವರಿಸುತಿದ್ದ ನಮ್ಮ ಬುದ್ಧಿಯು, ಈಗ ನಿನಗಾಗಿ ವನವಾಸಕ್ಕೆ ಎಳೆಯಲ್ಪಟ್ಟಿರುವುದು. ಬ್ರಾಹ್ಮಣರಾದವರು ತಮಗೆ ಧನದಂತಿರುವ ವೇದ ಮಂತ್ರಗಳನ್ನೂ ಬಿಟ್ಟು, ಸಹಧಮ್ಮಚಾರಿಣಿಯರಾದ ಪತ್ನಿ ಯರನ್ನೂ ಕಾಪಾ ಡದೆ, ನಿನ್ನನ್ನು ಹಿಂಬಾಲಿಸಿ ಕಾಡಿಗೆ ಹೋಗುವುದುಚಿತವೆ?” ಎಂದು ನೀನು ಶಂಕಿಸಬಹುದು. ನಮಗೆ ಪರಮಧನವಾದ ವೇದಮಂತ್ರಗಳೆಲ್ಲವೂ ನಮ್ಮ ಹೃದಯದಲ್ಲಿಯೇ ಇರುವುವು. ನಮ್ಮ ನಮ್ಮ ಧಮ್ಮಪತ್ನಿಯರನ್ನು ಅವರವರ ಪಾತಿವ್ರತ್ಯವೇ ಸುರಕ್ಷಿತವಾಗಿ ಕಾಪಾಡುವುದರಿಂದ, ಅವರು ನಮ್ಮ ಮನೆ ಗಳಲ್ಲಿಯೇ ಇರುವರು. ನಾವು ಅವರನ್ನು ರಕ್ಷಿಸಬೇಕಾದುದೇ ಇಲ್ಲ. ಈಗ ನಿನ್ನ ನ್ನು ಹಿಂತಿರುಗಿಸಿ ಕರೆದುಕೊಂಡು ಹೋಗುವುದುಹೊರತು ನಮಗೆ ಬೇರೆ ಕೆಲಸವಿಲ್ಲ. ಈ ವನಪ್ರಯಾಣದ ನಿಶ್ಚಯವನ್ನು ಬಿಟ್ಟುಬಿಡು. ನೀನು ಪಿತೃವಾಕ್ಯ ಪರಿಪಾಲನವೆಂಬ ನಿನ್ನೊಬ್ಬನ ಧರವನ್ನೇ ಕಾಪಾಡಿಕೊಳ್ಳುವು ದಾದರೆ, ನಾವೆಲ್ಲರೂ ನಮ್ಮ ಜಾತಿಧಮ್ಮಗಳೆಲ್ಲವನ್ನೂ ಬಿಟ್ಟುಬಿಡಬೇಕಾಗಿ ಬರುವುದು. (ನೀನು ಬ್ರಾಹ್ಮಣರಾದ ನಮ್ಮ ಪ್ರಾರನೆಗಳನ್ನು ತಿರಸ್ಕರಿಸಿ ಹೋಗಬಾರದೆಂಬ ಧರವನ್ನು ಬಿಟ್ಟು ಹೋಗುವುದಾದರೆ, ನೀನು ಬೇರೆಯಾ ವಧರವನ್ನೂ ನಡೆಸಿದಂತಾಗುವುದಿಲ್ಲ)ನಿನಗೆ ಅದಕ್ಕಿಂತಲೂ ವಿಶೇಷವಾಗಿ ಆ ದರಿಸಬೇಕಾದ ಧರವು ಬೇರೆ ಯಾವುದುಂಟು? ನೀನು ನಿಶ್ಚಲವಾದ ಧಾ