ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೪೩.] ಅಯೋಧಾ ಕಾಂಡವು. ೫೮ ಯಶಸ್ವಿನಿಯಾದ ತಾಯಿಯನ್ನೂ, ನೆನೆಸಿಕೊಂಡು ಮಹಾವ್ಯಸನವುಂಟಾಗಿ ರುವುದು, ಅವರ ಗೋಳಾಟವನ್ನು ನೋಡಿ ಸಹಿಸುವುದಕ್ಕಾಗುವುದಿಲ್ಲ.ಹೀಗೆ ಯೇ ಅವರು ಎಡೆಬಿಡದೆ ಕಣ್ಣೀರನ್ನು ಸುರಿಸಿ ಅಳುತಿದ್ದರೆ, ಅವರ ಕಣ್ಣುಗ ಳು ಹೇಗೆತಾನೇ ಕೆಟ್ಟುಹೋಗದಿರುವುವು ? ಅವರು ಇದೇ ಅವಸ್ಥೆಯಲ್ಲಿ ದರೆ ಸ್ವಲ್ಪ ಕಾಲದೊಳಗಾಗಿ ಕುರುಡರಾಗಿಯೇ ಬಿಡುವರೆಂದು ಶಂಕಿಸು ವೆನು. ಆದರೆ ಭರತನು ಧರಗಳೆಲ್ಲವನ್ನೂ ಚೆನ್ನಾಗಿ ತಿಳಿದವನಾದುದರಿಂದ, ಆತನು ಮಾವನ ಮನೆಯಿಂದ ಹಿಂತಿರುಗಿ ಬಂದೊಡನೆಯೇ,ಧಾರಯುಕ್ತ ವಾದ ಮಾತುಗಳಿಂದ, ಮೊದಲು ನಮ್ಮ ತಂದೆತಾಯಿಗಳನ್ನು ಸಮಾಧಾನ ಪಡಿಸಬಹುದು. ಆ ಭರತನು ಬಹಳ ದಯಾರ ಹೃದಯನಾಗಿರುವುದ ರಿಂದ, ಅತನ ಸುಸ್ವಭಾವವನ್ನು ಯೋಚಿಸಿದರೆ, ನಮ್ಮ ತಂದೆತಾಯಿಗಳಿ ಗಾಗಿ ನಾವು ಚಿಂತಿಸಬೇಕಾದುದೇ ಇಲ್ಲವೆಂದು ಆಗಾಗ ನನ್ನ ಕೈನಾನೇ ಸಮಾಧಾನಮಾಡಿಕೊಳ್ಳುವೆನು, ವತ್ಸಲಕ್ಷಣಾ ! ನೀನು ನನಗೆ ಸಹಾಯ ಕನಾಗಿ ಬಂದುದು ಉತ್ತಮವೇ ಆಯಿತು!ನೀನೂ ಬಾರದಿದ್ದರೆ ಈಸೀತೆಯ ನ್ನು ರಕ್ಷಿಸುವುದಕ್ಕಾಗಿ ಬೇರೆಯವರ ಸಹಾಯವನ್ನು ಕೋರಬೇಕಾಗಿತ್ತಲ್ಲ ವೆ? ಈಗ ನನಗೆ ಆ ಕಷ್ಟವಿಲ್ಲ! ಅದೆಲ್ಲವೂ ಹಾಗಿರಲಿ ! ನಮ್ಮ ವನವಾಸಕ್ಕೆ ಇದೇ ಮೊದಲನೆಯ ದಿನವು. ಮತ್ತು ಈ ಸ್ಥಳವು ತಮಸಾನದಿಯ ತೀರವೆನಿಸಿ ಕೊಂಡಿರುವುದರಿಂದ,ಪುಣ್ಯಕ್ಷೇತ್ರವಾಗಿಯೂ ಇರುವುದು. ಆದುದರಿಂದ ಈ ದಿವಸದಲ್ಲಿ, ನಾವು ಉಪವಾಸವಿರುವುದೇ ಉತ್ತಮವೆಂದು ತೋರುವುದು.ಅದ ಕ್ಕಾಗಿ ಈಗ ನಾವು ನೀರನ್ನು ಮಾತ್ರ ಕುಡಿದು ಹಾಗೆಯೇ ಮಲಗಿಬಿಡುವೆವು ಇಲ್ಲಿ ನಮಗೆ ಕಾಡಿನಲ್ಲಿ ಬೆಳೆಯುವ ಹಣ್ಣು ಮೊದಲಾದ ಆಹಾರಪದಾರ್ಥ ಗಳು ಬೇಕಾದಷ್ಟು ಸಿಕ್ಕುವುವು.ಹಾಗಿದ್ದರೂ ಈಗ ನನಗೊಂದೂ ಸೇರುವು ದಿಲ್ಲ”ಎಂದನು. ಆಮೇಲೆ ಸುಮಂತ್ರನನ್ನು ನೋಡಿ, 14 ಎಲೆಸೂತನೆ! ಕುದು ರೆಗಳನ್ನು ನೀನು ಜಾಗ್ರತೆಯಿಂದ ನೋಡುತ್ತಿರು. ಹೋಗು”ಎಂದನು. ಒಡ ನೆಯೇ ಸುಮಂತ್ರನು ಸೂದ್ಯನು ಮುಳುಗಿದಕೂಡಲೆ, ಆ ಕುದುರೆಗಳನ್ನು ಒಂದುಕಡೆಯಲ್ಲಿ ಕಟ್ಟಿ, ಅವುಗಳಿಗೆ ಹುಲ್ಲು ಹಾಕಿ, ಮುಂದಿನಕಾಧ್ಯವೇನೆಂದು ರಾಮನ ಆಜ್ಞೆಯನ್ನು ನಿರೀಕ್ಷಿಸುತ್ತಿದ್ದನು. ಆಮೇಲೆ ಆ ಸುಮಂತ್ರನು