ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಸರ್ಗ. ೧.] ಅಯೋಧ್ಯಾಕಾಂಡವು, ಈಗಲೇ ರಾಮನಿಗೆ ಪಟ್ಟವನ್ನು ಕಟ್ಟಿಬಿಡಬಹುದೆಂದೇ ನಿಶ್ಚಯಿಸಿಕೊಂಡ ನು. ಧಾತ್ಮನಾದ ಆ ರಾಜನು ತನ್ನ ಮತ್ತು ತನ್ನ ಪ್ರಜೆಗಳ ಶ್ರೇಯೋಭಿ ವೃದ್ಧಿಗೂ, ರಾಮನಿಗೆ ಪಟ್ಟವನ್ನು ಕಟ್ಟಬೇಕೆಂಬ ತನ್ನ ಆಸೆಯನ್ನು ತೀರಿಸಿ ಕೊಳ್ಳುವುದಕ್ಕೂ, ಇದೇ ತಕ್ಕ ಕಾಲವೆಂದು ನಿರ್ಧರಿಸಿ ಆತುರಪಡುತಿದನು. ಅದಕ್ಕಾಗಿ ಪಟ್ಟಣವಾಸಿಗಳನ್ನೂ, ದೇಶವಾಸಿಗಳನ್ನೂ, ಅಲ್ಲಲ್ಲಿ ಮುಖ್ಯ ಮುಖ್ಯರಾದ ರಾಜರನ್ನೂ ಬೇರೆ ಬೇರೆಯಾಗಿ ಕರೆಸಿದನು. ಜನಕರಾಜ ಕೇಕಯರಾಜರಿಬ್ಬರೂ, ಬಹುದೂರದೇಶವಾಸಿಗಳಾಗಿದ್ದುದರಿಂದ ಅವರನ್ನು ಕರೆಸುವುದಕ್ಕೆ ಮಾತ್ರ ತಕ್ಕಷ್ಟು ಅವಕಾಶವಿಲ್ಲದೆ ಹೋಯಿತು. ಈ ಶುಭಕಾರವು ಅತ್ಯಾತುರದಿಂದ ನಡೆಯಬೇಕಾದುದರಿಂದ, ಇಲ್ಲಿನ ಕಾಠ್ಯವು ನಡೆದು ಹೋದಮೇಲೆ, ಆ ಶುಭವೃತ್ತಾಂತವನ್ನು ಅವರಿಗೆ ತಿಳಿಸಿ ಬಿಟ್ಟರೆ ಸಾಕೆಂದು ನಿಶ್ಚಯಿಸಿಕೊಂಡು ಸುಮ್ಮನಾದನು. ಹೀಗೆ ಕರೆಸಲ್ಪ ಟ್ಯ ರಾಜರಿಗೂ, ಪ್ರಜೆಗಳಿಗೂ, ಅವರವರ ಯೋಗ್ಯತಾನುಸಾರವಾಗಿ ವಾಸ ಸ್ಥಳಗಳನ್ನು ಕಲ್ಪಿಸಿ, ಅವರನ್ನು ನಾನಾವಿಧವಾದ ವಸ್ತ್ರಾಭರಣಾದಿಗಳಿಂದ ಮನ್ನಿಸುವಹಾಗೆ ಹೇಳಿ, ಆಮೇಲೆ ತಾನೂ ರಾಜಯೋಗ್ಯವಾದ ಅಲಂಕಾ ರವನ್ನು ಧರಿಸಿ ಬಂದು, ಬ್ರಹ್ಮನು ತನ್ನ ಪ್ರಜೆಗಳನ್ನು ನೋಡುವಂತೆ ಆವ ರೆಲ್ಲರನ್ನೂ ತನ್ನ ಪ್ರಸನ್ನ ದೃಷ್ಟಿಯಿಂದ ನೋಡಿದನು. ಜನಕಕೇಕಯರಾ ಜರು ಹೊರತು, ಅಲ್ಲಿ ಬಂದಿದ್ದ ಲೋಕಪೂಜ್ಯರಾದ ಉಳಿದ ರಾಜರೆಲ್ಲರೂ ಶತ್ರುನಾಶಕನಾದ ಆ ದಶರಥನು ಪೀಠದಲ್ಲಿ ಕುಳಿತುಕೊಂಡಮೇಲೆ. ಮುಂದೆ ಬಂದು, ರಾಜದತ್ತವಾದ ತಮ್ಮ ತಮ್ಮ ಉಚಿತಾಸನದ ಸಮೀಪ ವನ್ನು ಸೇರಿ, ರಾಜನಿಗೆ ಇದಿರಾಗಿಯೇ ಬಹಳ ನಮ್ರಭಾವದಿಂದ ಕುಳಿತರು, ಹೀಗೆ ತನ್ನಿಂದ ವಿಶೇಷವಾಗಿ ಸತ್ಕರಿಸಲ್ಪಟ್ಟು ಸಂತೋಷಯುಕ್ತರಾದ ರಾ ಜಾಧಿರಾಜರೂ, ಪಟ್ಟಣವಾಸಿಗಳೂ, ದೇಶವಾಸಿಗಳೂ ಬಂದು, ತನ್ನ ಸು ತಲೂ ನೆರೆದಿರಲು, ಅವರಿಂದ ಪರಿವೇಷ್ಟಿತನಾಗಿ, ನಡುವೆ ತನ್ನ ರಾಜಪೀಠ ದಲ್ಲಿ ಕುಳಿತಿದ್ದ ದಶರಥರಾಜನು, ದೇವತೆಗಳಿಂದ ಪರಿವೃತ್ತನಾದ ದೇವೇಂದ್ರ ನಂತೆ ಪ್ರಕಾಶಿಸುತ್ತಿದ್ದನು. ಇಲ್ಲಿಗೆ ಮೊದಲನೆಯ ಸರ್ಗವು.