ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೫೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಇರಲೆ ಶ್ರೀಮದ್ರಾಮಾಯಣವು [ಸರ್ಗ, ೪. ಅಳುತಿದ್ದರು. ಹೀಗೆ ಅವರು ರಥಚಕ್ರದ ದಾರಿಯನ್ನೇ ಅನುಸರಿಸಿ ಸ್ವಲ್ಪ ದೂರ ಹೋಗಿ, ಆಮೇಲೆ ಆ ರೇಖೆಯೂ ತಿಳಿಯದುದರಿಂದ ದುಃಖಿತರಾಗಿ ಹಿಂತಿರುಗಿಬರುತ್ತಾ,ಒಬ್ಬರಿಗೊಬ್ಬರು 'ಇದೇನು ಈ ವಿಪರೀತವು ? ಈಗ ನಾವು ಮಾಡಬೇಕಾದುದೇನು ? ಆ ದುರ್ದೈವುವು ನಮ್ಮನ್ನು ಪೂರ್ಣವಾಗಿ ಕೆಡಿಸಿಬಿಟ್ಟಿತು.” ಎಂದು ವಿಲಪಿಸುತ್ತಾ ತಾವು ಹೋದ ದಾರಿಯನ್ನೇ ಹಿಡಿದು ಹಿಂತಿರುಗಿದರು. ಒಬ್ಬರ ಮನಸ್ಕಾದರೂ ನಿಂತವಾಗಿರಲಿಲ್ಲ. ಹೀ ಗೆ ಅವರೆಲ್ಲರೂ ಕೂಡಿಹೊರಟು, ದುಃಖಿತರಾದ ಜನರಿಂದ ತುಂಬಿದ ಅಯೋ ಧ್ಯಾಪಟ್ಟಣವನ್ನು ಪ್ರವೇಶಿಸಿದರು. ಆ ಪಟ್ಟಣವನ್ನು ನೋಡಿದಾಗ ಅವ ರ ಮನಸ್ಸು ಮತ್ತಷ್ಟು ವ್ಯಾಕುಲವಾಯಿತು.ಆ ಪಟ್ಟಣದಲ್ಲಿ ಪ್ರತಿನಿತ್ಯವೂ ನಡೆಯಬೇಕಾದ ಸಂಮಾರ್ಜನಾಡಿಸಂಸ್ಕಾರಗಳೂ ಕೂಡ ನಡೆದಿರಲಿಲ್ಲ. ಹೀಗೆ ಹೀನದಶೆಯಲ್ಲಿರುವ ಆ ಪಟ್ಟಣವನ್ನು ನೋಡಿದೊಡನೆಯೇ, ಆ ಜನರ ಕಣ್ಣುಗಳಿಂದ ಫಳಫಳನೆ ಕಣ್ಣೀರು ಸುರಿಯಿತು. ಗರುಡನು ಮಡುವಿನಲ್ಲಿ ಬಹುಕಾಲದಿಂದ ಕಾವಲಿದ್ದ ಒಂದು ಮಹಾಸರ್ಪವನ್ನೆತ್ತಿಕೊಂಡು ಹೋ ದಮೇಲೆ, ಆ ಮಡುವು ಹೇಗೋ ಹಾಗೆ, ರಾಮನಿಲ್ಲದ ಆ ಅಯೋಧ್ಯೆಯು ಕಾಂತಿಹೀನವಾಗಿತ್ತು. ಚಂದ್ರನಿಲ್ಲದ ಆಕಾಶದಂತೆಯ, ನೀರಿಲ್ಲದ ಸಮು ದ್ರದಂತೆಯೂ ಉತ್ಸಾಹವಿಲ್ಲದ ಆ ಪಟ್ಟಣವನ್ನು ನೋಡಿದೊಡನೆ, ಅ ವರೆಲ್ಲರಿಗೂ ವ್ಯಸನದಿಂದ ಪ್ರಜ್ಞೆ ತಪ್ಪಿದಂತಾಯಿತು. ಮೊದಲೇ ಮಹಾ ದುಃಖದಿಂದ ಪೀಡಿತರಾದ ಈ ಪುರಜನರೆಲ್ಲರೂ ಆ ಪಟ್ಟಣವನ್ನು ನೋಡಿ ಮತ್ತಷ್ಟು ವ್ಯಸನಗೊಂಡವರಾಗಿ, ತಮ್ಮ ಮನೆಗಳನ್ನು ಪ್ರವೇಶಿ ಸುವಾಗ, ಆ ಮನೆಗಳು ಸಮಸ್ತಸಂಪತ್ತುಗಳಿಂದಲೂ ತುಂಬಿದ್ದರೂ, ಎ ಹೈ ಕಷ್ಟಗಳಿಂದ ಅವುಗಳನ್ನು ಪ್ರವೇಶಿಸಿದರು. ತಮ್ಮ ಬಂಧುಮಿತ್ರಾದಿ ಗಳು ತಮ್ಮ ಕಣ್ಣಿರಿಗೆ ಬಂದು ನಿಂತಿದ್ದರೂ, ಅವರು ಯಾರೆಂದು ತಿಳಿಯ ಲಾರದೆ ವ್ಯಸನದಿಂದ ಬುದ್ಧಿಗೆಟ್ಟವರಾಗಿದ್ದರು. ಇಲ್ಲಿಗೆ ನಾಲ್ವತ್ತೇಳನೆಯ ಸರ್ಗವು,