ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೪೯. ಆಯೋಧ್ಯಾವಂದನ, ೫ ಕೆಯೆಂಬ ಮತ್ತೊಂದು ನದಿಯು ಕಾಣಿಸಿತು. ನವಿಲುಗಳ ಕೇಕಾಧ್ವನಿಯಿಂ ದಲೂ, ಹಂಸಗಳ ಕೂಗಿನಿಂದಲೂ, ಅತಿಮನೋಹರವಾದ ಆ ನದಿಯ ದಾಟಿಹೋದನು. ಅಲ್ಲಿ ನಿಂತು, ಸುತ್ತಲೂ ಕಾಣತಿದ್ಧ ಕೋಸಲದೇಶದ ಅಂದವನ್ನು ನೋಡಿ * ಪೂರದಲ್ಲಿ ಮನುವಿನಿಂದ ಇಕಾಕುವಿಗೆ ಕೊಡಲ್ಪ ಬ್ಯು, ಧನಧಾನ್ಯಸಮೃದ್ಧವಾಗಿ, ಅನೇಕ ರಾಷ್ಟ್ರಗಳಿಂದ ಕೂಡಿದ ಆ ಭೂಪ್ರದೇಶದ ಅಂದವನ್ನು ಸೀತೆಗೂ ತೋರಿಸುತ್ತಿದ್ದನು. ಆಮೇಲೆ ಸಾ ರಥಿಯನ್ನು ಕುರಿತು, ಹಂಸದಂತೆ ಇಂಪಾದ ಸ್ವರವುಳ್ಳವನಾಗಿ ಒಂದಾ ನೊಂದುಮಾತನ್ನು ಹೇಳುವನು ಎಲೆ ಸೂತನೆ! ನಾನು ಇಲ್ಲಿಗೆ ಪುನಃ ಯಾ ವಾಗ ಹಿಂತಿರುಗಿಬಂದು, ಈ ಸರಯೂನದಿಯ ತೀರದಲ್ಲಿರುವ ಪುಷ್ಟಿತವಾದ ತೋಟಗಳಲ್ಲಿಯೂ, ಕಾಡುಗಳಲ್ಲಿಯೂ ಬೇಟೆಯನ್ನಾಡಿಕೊಂಡು, ನಮ್ಮ ತಂ ಹೆತಾಯಿಗಳೊಡನೆ ಸೇರಿ ಸಂತೋಷದಿಂದಿರುವೆನೊ? + ರಾಜಋಷಿಗಳಾದ ವರಿಗೆ ಲೋಕದಲ್ಲಿ ಬೇಟೆಯೆಂಬುದು ಕೇವಲವಿನೋದಾರ್ಥವಾಗಿಯೇ ಹೊರತು ಬೇರೆಯಲ್ಲ. ಸದಾಚಾರಸಂಪನ್ನರಾದವರೂಕೂಡ ಉಚಿತ ಕಾಲಗಳಲ್ಲಿ ಇದನ್ನು ನಡೆಸುವುದುಂಟು. ಧನುರ್ವಿದ್ಯೆಯನ್ನು ಕಲಿತವರೂ ಇದನ್ನು ಆಗಾಗ ಆಪೇಕ್ಷಿಸುವುದುಂಟು. ಆದರೆ ನಾನು ಈ ಬೇಟೆಯೆಂಬು ದನ್ನು ಅಷ್ಟು ವಿಶೇಷವಾಗಿ ಅಪೇಕ್ಷಿಸತಕ್ಕವನಲ್ಲವಾದರೂ, ಅದರಲ್ಲಿ ಸ್ವಲ್ಪ ಮಟ್ಟಿಗೆ ಕುತೂಹಲವುಂಟು. ಅನವರತವೂ ಇದೊಂದೇ ವ್ಯಸನವಾಗಿ ಆ

  • (ಆಕ್ಷಕಣಾಮಿಯಂಭೂಮಿಶೈಲವನಕಾನನಾ?” ಎಂಬುದಾಗಿ, ಭೂಮಿ ಯೆಲ್ಲವೂ ಇಕುವಿಗೇ ಸೇರಿರುವಾಗ, ಕೋಸಲದೇಶವನ್ನು ಮಾತ್ರ ಇಕ್ಷಾಕುವಿನ ದೇಶವೆಂದು ಹೇಳುವುದು ಹೇಗೆಂದು ಶಂಕೆಯುಂಟಾಗಬಹುದು. ಈ ದೇಶವು ಆತನಿಗೆ ಜನ್ಮ ಭೂಮಿಯಾದುದರಿಂದ, ಇದನ್ನು ಮುಖ್ಯವಾಗಿಯೂ, ಇತರ ದೇಶಗಳೆಲ್ಲವೂ, ಆತ ನಿಗೆ ಕಪ್ಪವನ್ನು ಕೊಡತಕ್ಕುವುಗಳನ್ನಾಗಿಯೂ ಗ್ರಹಿಸಬೇಕು. - + “ಸ್ತ್ರೀವ್ಯೂತ ಮೃಗಯಾಮದ್ಯ ವಾಕ್ಷಾರುಗ್ರದಂಡಕಾಃ | ಅರ್ಥಕ್ಯದ .ಷಣಂ ಚೇತಿ ರಾಜ್ಯಾಂವ್ಯಸನಸಪ್ತಕoll””ಎಂಬಂತೆ ರಾಜರ ಮನಸ್ಸನ್ನು ಕೆಡಿಸತಕ್ಕ ಸವ್ಯಸನಗಳಲ್ಲಿ ಭೇಟಿಯೂ ಒಂದಾಗಿ ಎಣಿಸಲ್ಪಟ್ಟಿರುವಾಗ, ರಾಮನು ಇದರಲ್ಲಿ ಆಸೆಯನ್ನು ತೋರಿಸಬಹುದೆ??” ಎಂದರೆ ಅದಕ್ಕೆ ಸಮಾಧಾನರೂಪವಾಗಿ ಈಮುಂದಿನ ವಾಕ್ಯಗಳನ್ನು ಹೇಳುವನು.