ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೦೬ ಶ್ರೀರಾಮಾಯಣವು {ಸರ್ಗೆ, ೫೨ ಮಯವಾಯಿತು. ಪೂಜ್ಯವಾದ ರಾತ್ರಿಯೂ ಕಳೆದುಹೋಯಿತು.ಅದೋ! ಆ ಆಭರದ್ವಾಜಗಳೂ,ಕೋಗಿಲೆಗಳೂ ಕೂಗುತ್ತಿರುವುವು. ಅಲ್ಲಲ್ಲಿ ಕಾಡುನವಿಲು ಗಳ ಕೇಕಾಧ್ವನಿಯು ಕೇಳಿಸುತ್ತಿರುವುದು ಆದುದರಿಂದ ನಾವು ಶೀಘ್ರದ ಲ್ಲಿಯೇ ಸಾಗರಗಾಮಿನಿಯಾದ ಈ ಜಾಹ್ನವೀನದಿಯನ್ನು ದಾಟಿ ಹೋಗಬೇ ಕು” ಎಂದನು. ಲಕ್ಷಣನು ರಾಮನ ಈ ಮಾತನ್ನು ಕೇಳಿ, ಆ ನದಿಯನ್ನು ಕಾಲುನಡೆಯಿಂದಲೇ ದಾಟುವುದು ಅಸಾಧ್ಯವಾದುದರಿಂದ, ಅದಕ್ಕೆ ತಕ್ಕ ಸಾ ಧನವನ್ನು ಸಿದ್ಧಪಡಿಸಿಡಬೇಕೆಂಬುದೇ ರಾಮನ ಅಭಿಪ್ರಾಯವೆಂದು ತಿಳಿದು, ಗುಹನನಸುಮಂತ್ರನನ್ನೂ ಕರೆದು ಈ ರಾಮನ ಅಭಿಪ್ರಾಯವು ನಿಮ ಗೆ ತಿಳಿಯಿತೆ?” ಎಂದು ಕೇಳಿ,ರಾಮನ ಮುಂದೆ ಸುಮ್ಮನೆ ನಿಂತಿದ್ದನು. ಒರ ಫೆಯೇ ಗುಹನು ಆ ಅಭಿಪ್ರಾಯವನ್ನು ತಿಳಿದು, ತನ್ನ ಮಂತ್ರಿಗಳನ್ನು ಕರೆ ಯಿಸಿ, (ಎಲೆ, ಮಂತ್ರಿಗಳೆ! ಇವರನ್ನು ಸುಲಭವಾಗಿ ಈ ಗಂಗಾನದಿಯ ನ್ನು ದಾಟಿಸುವುದಕ್ಕೆ ತಕ್ಕ ಒಂದು ದೃಢವಾದ ನಾವೆಯನ್ನು ಸಿದ್ಧಪಡಿ ಸಿರಿ ! ಅದನ್ನು ನಡೆಸುವುದಕ್ಕೆ ಬೇಕಾದ ಹುಟ್ಟು ಮೊದಲಾದ ಉಪಕರಣ ಗಳೆಲ್ಲವೂ ಸಿದ್ಧವಾಗಿರಲಿ ! ಈಕಾರಕ್ಕೆ ಸಮರ್ಥರಾದ ನಾವಿಕರನ್ನು ನಿ ಯಮಿಸಿರಿ! ಈಗಲೇ ಆ ನಾವೆಯನ್ನು ತರಿಸಿರಿ?” ಎಂದನು. ಆ ಮಂತ್ರಿಗಳೆಲ್ಲ ರೂ ಇದನ್ನು ಕೇಳಿದೊಡನೆ ಅಂದವಾದ ಒಂದು ನಾವೆಯನ್ನು ತರಿಸಿಟ್ಟು, ಆ ವಿಷಯವನ್ನು ಗುಹನಿಗೆ ತಿಳಿಸಿದರು. ಆಗ ಗಹನು ರಾಮನಬಳಿಗೆ ಬಂದು ಕೈಮುಗಿದು ನಿಂತು ಸ್ವಾಮಿ ! ಇದೊ! ಇಲ್ಲಿ ನಾವೆಯು ಸಿದ್ದವಾಗಿರು ವುದು. ಸಾಗರಗಾಮಿನಿಯಾದ ಈ ಗಂಗಾನದಿಯನ್ನು ದಾಟುವುದಕ್ಕೆ ಇದು ಬಹಳ ಅನುಕೂಲವಾಗಿರುವುದು. ಇನ್ನು ನೀವು ಇದನ್ನೇರಬಹುದು. ಇನ್ನು ನನ್ನಿಂದ ನಿಮಗಾಗಬೇಕಾದ ಕೆಲಸವೇನು? ಎಂದನು. ಆಗ ರಾಮನು ಗುಹ ನನ್ನು ನೋಡಿ ( ಎಲೈ ಸಖನೆ! ಇದೊಂದೇ ನನಗೆ ನಿನ್ನಿಂದಾಗಬೇಕಾಗಿದ್ಧ ಮುಖ್ಯಕಾರವು. ನನಗೆ ಬೇಕಾದುದೆಲ್ಲವೂ ಆಯಿತು. ಇನ್ನು ಗುದ್ದಲಿ, ಪಟ್ಟಿ,ಸೀತೆಯ ವಸ್ತ್ರಾಭರಣವೇ ಮೊದಲಾದ ಇತರಸಾಮಗ್ರಿಗಳು, ಯಾವು ಪುಂಟೋ ಅವೆಲ್ಲವನ್ನೂ ತರಿಸಿ ನಾವೆಯಲ್ಲಿಡು” ಎಂದನು. ಆಮೇಲೆ ರಾ ಪಲಕ್ಷಣರಿಬ್ಬರೂ ತಮ್ಮ ತಮ್ಮ ಬತ್ತಳಿಕೆಗಳನ್ನೂ, ಕತ್ತಿಗಳನ್ನೂ ಕಟ್ಟಿ