ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೫೨.] ಅಯೋಧ್ಯಾಕಾಂಡವು. do೯ ಭಂಗವನ್ನುಂಟುಮಾಡದೆ ಅವರ ಮನೋಧಮ್ಮವನ್ನನುಸರಿಸಿ ನಡೆಯಬೇಕಾ ದುದೇ ಆಶ್ರಿತರ ಧರವು. ರಾಜ್ಯಾಧಿಕಾರವೆಂಬುದರಲ್ಲಿರತಕ್ಕ ಸೌಖ್ಯವು ಇ ದೊಂದೇಹೊರತು ಬೇರೊಂದೂ ಇಲ್ಲ. ಈ ಆಶೋತ್ತರದಿಂದಲೇ ಅರಸ ರು ರಾಜ್ಯಭರಣದಲ್ಲಿರುವ ಇತರಕಷ್ಟಗಳನ್ನೂ ಲಕ್ಷಕ್ಕೆ ತಾರದೆ ರಾಜ್ಯವ ನ್ನು ಪಾಲಿಸುತ್ತಿರುವರು. ಎಲೈ ಸುಮಂತ್ರನೆ! ಮುಖ್ಯವಾಗಿ ನಮ್ಮ ಮಹಾ ರಾಜನು ಬೇಸರಪಡದೆಯೂ,ದುಃಖದಿಂದ ಕೊರಗದೆಯೂ ಇರುವಂತೆ ನೋ ಡಿಕೊಳ್ಳುವನಾಗು! ನನ್ನ ತಂದೆಯು ಇದುವರೆಗೆ ದುಃಖವೆಂಬುದನ್ನೇ ಕಂಡ ವನಲ್ಲ. ಬಹಳವೃದ್ಧನು. ಲೋಕಗಳಿಗೆಲ್ಲಾ ಪೂಜ್ಯನು, ಮತ್ತು ಜಿತೇಂದ್ರಿಯ ನು. ಅಂತವನಿಗೆ ಈಗ ಇದೊಂದು ಮಹಾವ್ಯಸನವು ಪ್ರಾಪ್ತವಾಯಿತು.ಮ ಡಬೇಕಾದುದೇನು! ನೀನು ಈಗಲೇ ಹೋಗಿ ಆತನಿಗೆ ನಮಸ್ಕರಿಸಿ, ಈ ನನ್ನ ಮಾತುಗಳನ್ನು ಆತನಲ್ಲಿ ವಿಜ್ಞಾಪಿಸು. ಅಯೋಧ್ಯೆಯನ್ನು ಬಿಟ್ಟು ಬಂದು ಕಾಡಿನಲ್ಲಿರಬೇಕಾದುದಕ್ಕಾಗಿ ನಾನಾಗಲಿ, ಸೀತೆಯಾಗಲಿ, ಅಥವಾ ಲಕ್ಷ ಣನಾಗಲಿ ಸ್ವಲ್ಪವೂ ದುಖಿಸುವವರಲ್ಲ. ಈ ಹದಿನಾಲ್ಕು ವರ್ಷಗಳು ಕಳೆ ದಕೂಡಲೆ, ನಾವು ಮೂವರೂ ಹಿಂತಿರುಗಿ ಬಂದು ನಿನ್ನನ್ನು ಆದರಿಸುವೆವು. ನೀನು ಶೀಘ್ರದಲ್ಲಿಯೇ ನಮ್ಮನ್ನು ನೋಡಬಹುದು. ಇದಕ್ಕಾಗಿ ಸ್ವಲ್ಪವೂ ದುಃಖಿಸಬೇಕಾದುದಿಲ್ಲವು” ಎಂದು ನಾನು ಹೇಳಿದುದಾಗಿ ರಾಜನಿಗೆ ತಿಳಿಸು. ಮತ್ತು ತನ್ನ ತಾಯಿಯಾದ ಕೌಸಲೈಯನ್ನೂ ಇತರರಾಜಪ ಯರನ್ನೂ ಹೀ ಗೆಯೇ ಸಮಾಧಾನಪಡಿಸು! ಕೈಕೇಯಿಯೂ ಈಗ ನಮ್ಮನ್ನು ಕುರಿತು ದುಖಿ ಸಬಹುದು ಅವಳಿಗೂ ಸಮಾಧಾನವನ್ನು ಹೇಳು!ನನ್ನ ತಾಯಿಯಾದ'ಕೌಸ ಲೈಗೆ ನಮ್ಮೆಲ್ಲರ ಆರೋಗ್ಯವನ್ನೂ ತಿಳಿಸು. ಆಕೆಗೆ ನಾನು * ಪಾದಪ್ರಣಾಮ

  • ಇಲ್ಲಿ ರಾಮನು ತಾನೊಬ್ಬನೇ ಕಸಿಗೆ ಮಾತ್ರ ಪಾದಪ್ರಣಾಮವನ್ನು ಮಾಡಿ ದುದಾಗಿ ಹೇಳಿರುವನೆಂದು ಗ್ರಹಿಸಬೇಕು. ಆಚಾರವದಾಚಾರದಾರೇ ವೃತ್ತಿ: ಪಾದ ಸಂವಾಹನವರ್ಜo” ಆಚಾರನಲ್ಲಿ ಹೇಗೋ ಹಾಗೆಯೇ ಆಚಾರಪತಿ ಯರಲ್ಲಿಯೂ ವರ್ತಿಸಬೇಕಾಗಿದ್ದರೂ, ಅವರಿಗೆ ಪಾದಸಂವಾಹವನ್ನು ಮಾತ್ರ ಮಾಡಬಾರದು ಎಂಬ ವಿಧಿಯಿರುವುದರಿಂದ, ಈ ವಿಧಿಯು ಬಲತಾಯಿಯರಲ್ಲಿಯೂ ಅನ್ವಯಿಸುವುದು ಆದಕಾರಣದಿಂದಲೇ ಬಲತಾಯಿಯರಿಗೆ ಪಾದಪ್ರಣಾಮವನ್ನು ಹೇಳಲಿಲ್ಲವೆಂದು ಗ್ರಹಿ.

ಸಬೇಕು. 39 -4' :