ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೧ ಸರ್ಗೆ. ೫೨.] ಅಯೋಧ್ಯಾಕಾಂಡವು, ನಡೆಸತಕ್ಕ ಸುಖವಂತೂ ಭಾಗ್ಯಹೀನನಾದ ನನಗೆ ಲಭಿಸದೆ ಹೋಯಿತು. ಈಗ ನೀನು ಅನುಗ್ರಹಿಸಿದರೆ ವನವಾಸದಲ್ಲಿಯಾದರೂ ನಿನ್ನ ಸಹವಾಸ ಸೌಖ್ಯವನ್ನನುಭವಿಸಬೇಕೆಂದಪೇಕ್ಷಿಸುವೆನು. ಅದನ್ನಾದರೂ ಅನುಗ್ರಹಿ ಸು ! ಕಾಡಿನಲ್ಲಿಯಾದರೂ ನಿನ್ನ ಪರಿಚರೈಯನ್ನು ಮಾಡುತ್ತಿರುವೆನು ! ನನ್ನಲ್ಲಿ ಪ್ರಸನ್ನ ನಾಗಿ ನನ್ನ ಈ ಕೋರಿಕೆಯನ್ನು ಈಡೇರಿಸಿಕೊಡು ! ಎಲೆ ರಾಮನೆ! ಈಗ ನೀನು ನನ್ನನ್ನು ಕುರಿತು ನನ್ನ ಸಮೀಪದಲ್ಲಿರು.” ಎಂಬು ದೊಂದುಮಾತನ್ನು ಹೇಳಿ ಬಿಟ್ಟರೆ ಸಾಕು! ಪ್ರೀತಿಯುಕ್ತವಾದ ನಿನ್ನ ಆಮಾ ತಿನಿಂದಲೇ ನಾನು ಎಷ್ಟೋ ಆನಂದಿಸುವೆನು. ಎಲೈ ವೀರನೆ! ಕಾಡಿನಲ್ಲಿ ನಿನಗೆ ಪರಿಚರೈಯನ್ನು ಮಾಡಿ ಈಕುದುರೆಗಳೂ ಉತ್ತಮಗತಿಯನ್ನು ಪಡೆಯು ವುವು. ನಾನೂ ಕಾಡಿನಲ್ಲಿದ್ದು ನಿನ್ನ ಶುಶೂಷೆಯನ್ನು ತಿರಸಾವಹಿಸಿ ಮಾಡು ತಿರುವೆನು. ಇದನ್ನು ಬಿಟ್ಟು ಅಯೋಧ್ಯೆಯನ್ನಾಗಲಿ, ಸ್ವರ್ಗಲೋಕವನ್ನಾ ಗಲಿ ಅಪೇಕ್ಷಿಸುವವನಲ್ಲ. ಪಾಪಕರವುಳ್ಳವನು ಸ್ವರ್ಗಲೋಕವನ್ನು ಹೇಗೆ ಪ್ರವೆಶಿಸಲಾರನೋ, ಹಾಗೆ ನಿನ್ನನ್ನು ಬಿಟ್ಟು ನಾನೂ ಈಗ ಅಯೋಧ್ಯೆಯನ್ನು ಪ್ರವೇಶಿಸಲಾರೆನು. ನಿನ್ನ ವನವಾಸವು ಮುಗಿದಮೇಲೆ ಈ ರಥದಿಂದಲೇ ನಿನ್ನನ್ನು ಪಟ್ಟಣಕ್ಕೆ ತಂದು ಬಿಡಬೇಕೆಂಬುದು ನನ್ನ ಮುಖ್ಯವಾದ ಉದ್ದೇ ಶವು, ನಾನು ನಿನ್ನೊಡನೆ ಕಾಡಿನಲ್ಲಿದ್ದರೆ ಈ ಹದಿನಾಲ್ಕು ವರ್ಷಗಳು ನನಗೆ ನಿಮಿಷಮಾತ್ರದಂತೆ ಕಳೆದುಹೋಗುವುವು. ನಿನ್ನನ್ನು ಬಿಟ್ಟಿದ್ದರೆ ಇದೇ ನನಗೆ ನೂರಾರುವರ್ಷಗಳಂತಾಗುವುದು. ಎಲೈ ರಾಮನೆ ! ನೀನು ನೃತ್ಯ ರಲ್ಲಿ ಪರಮವಾತ್ಸಲ್ಯವುಳ್ಳವನಲ್ಲವೆ ? ನಿನಗೆ ನಾನು ಕೃತ್ಯವೆಂಬುದನ್ನು ತಿಳಿಯೆಯಾ ? ನಿನ್ನಲ್ಲಿ ನಾನು ಮನಃಪೂರೈಕವಾದ ಭಕ್ತಿಯುಳ್ಳವನೆಂಬು ದನ್ನೂ ನೀನು ಬಲ್ಲೆ! ಹೀಗೆ ನೃತ್ಯಧರವನ್ನು ಮೀರದೆ ನಡೆಯುತ್ತಿರುವ ನಾನು ನನ್ನ ಪ್ರಭುಪುತ್ರನಾದ ನಿನ್ನನ್ನೇ ಅನುಸರಿಸಿ ಬರಬೇಕೆಂದಿರು ವಾಗ, ನನ್ನನ್ನು ನೀನು ಬಿಟ್ಟು ಹೋಗುವುದುಚಿತವೆ?” ಎಂದನು. ಹೀಗೆ ಬಹುಪೈನ್ಯದಿಂದ ಅನೇಕವಿಧದಲ್ಲಿ ಪ್ರಾಸುತ್ತಿರುವ ಸುಮಂತ್ರನನ್ನು ನೋಡಿ ಆಿತವತ್ಸಲನಾದ ರಾಮನು ಎಲೆ ಸೂತನೆ! ನೀನು ಸ್ವಾಮಿಭ ಕೈಯುಳ್ಳವನೆಂಬುದನ್ನು ನಾನು ಚೆನ್ನಾಗಿ ಬಲ್ಲೆನು, ನನ್ನಲ್ಲಿ ನಿನಗೆ ಅಸಾ ಧಾರಣವಾದ ಪ್ರೀತಿಯಿದೆಯೆಂಬುದರಲ್ಲಿಯೂ ಸಂದೇಹವಿಲ್ಲ. ಆದರೆ ನಿ