ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೧೬ ಶ್ರೀಮದ್ರಾಮಾಯಣವು [ಸರ್ಗ. ೫೨, ಡಿ, ವತ್ಸನೆ ! ಇದೋ ಇಲ್ಲಿ ದೋಣಿಯು ಸಿದ್ಧವಾಗಿ ಅಳ್ಳಾಡದಹಾಗೆ ನಿಲ್ಲಿಸಲ್ಪಟ್ಟಿದೆ. ಮೊದಲು ನೀನು ಇದನ್ನೆರು ! ಆಮೇಲೆ ಭಯಶೀಲೆಯಾದ ಈ ಸೀತೆಯನ್ನೂ ಮೆಲ್ಲಗೆ ಕೈಗೊಟ್ಟು ಮೇಲಕ್ಕೇರಿಸು.” ಎಂದನು. ಲಕ್ಷ ಣನು ಬುದ್ಧಿವಂತನಾದುದರಿಂದ, ಅಣ ನ ಈ ಆಜೆ ಯನ್ನು ಕೇಳಿ, ಮೋ ದಲು ಸೀತೆಯನ್ನೇರಿಸಿ ಆಮೇಲೆ ತಾನೇರುವುದೇ ರಾಮನ ಅಭಿಪ್ರಾಯವೆಂ ದು ತಿಳಿದು, ಅದಕ್ಕನುಸಾರವಾಗಿ, ಮೊದಲು ಸೀತೆಯನ್ನೇ ಏರಿಸಿ, ಆಮೇಲೆ ತಾನೂ ಆನಾವೆಯನ್ನೇರಿದನು. ಒಡನೆಯೇ ರಾಮನೂ ಹತ್ತಿದನು. ಆಗ ಗು ಹನು ತನ್ನ ಕಡೆಯವರನ್ನು ನೋಡಿ, ದೋಣಿಯನ್ನು ಬಿಡುವಂತೆ ನಿಯಮಿಸಿ ದನು. ಅತ್ತಲಾಗಿ ತೇಜಸ್ವಿಯಾದ ರಾಮನು ನಾವೆಯನ್ನೇರಿದಕೂಡಲೆ, ಬಾಹ್ಮಣಕತ್ರಿಯ ವರ್ಣದವರಿಬ್ಬರಿಗೂ ಅನುಸಂಧೇಯವಾದೆ, ««ದೈವೀಂ ನಾವಂ” ಇತ್ಯಾದಿ ನಾವಾರೋಹಮಂತ್ರವನ್ನು ಜಪಿಸಿದನು. ಆಮೇಲೆ ಸೀತಾಸಮೇತನಾಗಿ ಆಚಮನವನ್ನು ಮಾಡಿ, ಆ ನದಿಯನ್ನು ಭಕ್ತಿ ಪೂರೈಕ ವಾಗಿ ಸಂತೋಷದಿಂದ ನಮಸ್ಕರಿಸಿದನು. ಲಕ್ಷ್ಮಣನೂ ಶಾಸ್ರೋಕ್ತವಾಗಿ ಆ ಪುಣ್ಯನದಿಯನ್ನು ನಮಸ್ಕರಿಸಿದನು. ರಾಮನು ಸುಮಂತ್ರನಿಂದಲೂ, ಸೇನಾಸಮೇತನಾದ ಗುಹನಿಂದಲೂ ಅನುಮತಿಯನ್ನು ಪಡೆದು, ನಾವೆ ಯಲ್ಲಿ ಕುಳಿತು, ಮುಂದೆ ನಡೆಸುವಂತೆ ನಾವಿಕರಿಗೆ ಹೇಳಿದನು. ಹಾಗೆಯೇ ಆ ನಾವಿಕರು ಎಚ್ಚರಿಕೆಯಿಂದ ನಾವೆಯನ್ನು ನಡೆಸಿಕೊಂಡು ಹೋಗು ತಿರಲು, ಬಲವಾಗಿ ಹುಟ್ಟುಗಳನ್ನು ತೆಗೆಯುವ ವೇಗದಿಂದ ಆ ನಾವೆಯು ಬಹುಬೇಗನೆ ನದಿಯ ಮಧ್ಯವನ್ನು ಸೇರಿತು. ಗಂಗಾನದಿಯ ನಡು ನೀರಿನಲ್ಲಿ ನಾವೆಯು ಬಂದು ನಿಂತಾಗ, ಸೀತೆಯು ಸುತ್ತಲೂ ನೋಡಿ ಕೈಮುಗಿಯುತ್ತಾ ಆ ನದಿಯನ್ನು ಕುರಿತು « ಎಲೆ ಗಂಗೆ ! ಇದೋ ಈತನು ದಶರಥಮಹಾರಾಜನ ಪುತ್ರನು. ತಂದೆಯ ಆಜ್ಞಾನುಸಾರವಾಗಿ ಹದಿನಾಲ್ಕು ವರ್ಷಗಳವರೆಗೆ ಪೂರ್ಣವಾಗಿ ಕಾಡಿನಲ್ಲಿರಬೇಕಾಗಿರುವುದು. ಪಿತೃವಾಕ್ಯ ಪರಿಪಾಲನವೆಂಬ ಈ ವ್ರತವನ್ನು ನಿರಿಷ್ಟು ವಾಗಿ ಮುಗಿಸಿ ಕೊಂಡು, ತನ್ನ ತಮ್ಮನಾದ ಲಕ್ಷಣನೊಡಡನೆಯೂ, ನನ್ನೊಡನೆಯೂ ಹಿಂತಿರುಗಿಬರುವನು. ಅದುವರೆಗೆ ಈತನನ್ನು ನೀನು ನಿರಪಾಯವಾಗಿ ರಕ್ಷಿ ಸುತ್ತಿರು. ನಾವೆಲ್ಲರೂ ನಿನ್ನ ಅನುಗ್ರಹದಿಂದ ಕಾಡಿನಲ್ಲಿ ಸುಖವಾಗಿದ್ದು