ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೮೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೨೦ ಶ್ರೀಮದ್ರಾಮಾಯಣವು ಸರ್ಗ, ೫೩, ನೆಲದಮೇಲೆಯೇ ಮಲಗಿದನು, ಲಕ್ಷಣನೊಡನೆ ಮೃದುವಾದ ಮಾತುಗಳ ನಾಡುತ್ತ, ಪುನಃ ಅವನನ್ನು ಕುರಿತು < ವತ್ಸ ಲಕ್ಷಣಾ ! ಈಗ ನಮ್ಮ ತಂದೆಯು ಏನವಸ್ಥೆಯನ್ನನುಭವಿಸುತ್ತಿರಬಹುದೆಂದು ಬಲ್ಲೆಯಾ? ದುಃಖ ವನ್ನು ತಡೆಯಲಾರದೆ ಮಲಗಿಬಿಟ್ಟಿರುವನು. ಆತನಿಗೆ ಸುಖನಿದ್ರೆಯೂ ಬಂದಿರಲಾರದು ! ಇದು ನಿಶ್ಚಯವು ! ಕೈಕೇಯಿಯುಮಾತ್ರ ತನ್ನ ಕೋರಿಕೆಯು ಕೈಗೂಡಿತೆಂಬ “ಸಂತೋಷದಿಂದ ಉಬ್ಬುತ್ತಿರುವಳು. ಆಕೆಯು ಭರತನನ್ನು ಕರೆಸಿದೊಡನೆಯೇ ಆತನಿಗೆ ರಾಜ್ಯವನ್ನು ಕೊಡಿ ಸುವುದಕ್ಕಾಗಿಯೂ, ಆತನಿಗೆ ಆ ರಾಜ್ಯವನ್ನು ನಿರುಪಾಧಿಕವಾಗಿ ಸ್ಥಿರಪಡ ಬೇಕೆಂಬದಕ್ಕಾಗಿಯೂ, *ನಮ್ಮ ಮಹಾರಾಜನ ಪ್ರಾಣವನ್ನೇ ಹಿಂಡಿಬಿಡು ವಳು ! ಈಗ ನಮ್ಮ ತಂದೆಯಾದರೋ ಅನಾಥನಾಗಿರುವನು. ಆತ ನನ್ನು ಕೇಳುವವರೇ ಇಲ್ಲ. ಇದರಮೇಲೆ ನಾವೂ ಆವನನ್ನು ಬಿಟ್ಟು ಬಂ ದೆವು. ಆತನು ಬಹಳ ಮೃದನಾಗಿರುವುದರಿಂದ ಅವನ ದೇಹದಲ್ಲಿಯೂ ಬ ಅವಿಲ್ಲ. ಇಷ್ಟಾದರೂ ಕಾಮಪಾಶದಲ್ಲಿ ಬಿದ್ದು ಕೈಕೇಯಿಯ ವಶನಾಗಿರು ವನು. ಇನ್ನು ಆತನು ಏನು ಮಾಡಬಲ್ಲನು ? ಈಗ ನಮಗೆ ಬಂದೊದಗಿರುವ ಕಷ್ಟದಶೆಯನ್ನೂ, ರಾಜನಿಗುಂಟಾಗಿರುವ ಬುದ್ಧಿಭ್ರಮವನ್ನೂ ನೋಡಿ ದರೆ, ಧರಾರ್ಥಗಳಿಗಿಂತ ಕಾಮವೆಂಬ ಪುರುಷಾರ್ಥವೇ ಪ್ರಬಲವೆಂದು ತೋರುವುದು.ಎಷ್ಟೇ ಬುದ್ಧಿಹೀನರಾಗಿದ್ದರೂ,ತಂದೆಯು ನನ್ನನ್ನು ತೊರೆದು ಬಿಟ್ಟಂತೆ, ತನ್ನ ಇಷ್ಟಾನುಸಾರವಾಗಿ ನಡೆದುಕೊಳ್ಳುತಿದ್ದ ವಿಧೇಯನಾದ ಪುತ್ರನನ್ನು ಹೆಂಡತಿಯಮಾತಿಗಾಗಿ ಕಾಡಿಗೆ ಕಳುಹಿಸುವವರುಂಟೇ? ಯಾ ರೂ ಬಿಡಲಾರರು. ಕೈಕೇಯಿಗೆ ಮಗನಾದ ಭರತನೊಬ್ಬನೇ ಭಾಗ್ಯಶಾ ಲಿಯು! ರಾಜಾಧಿರಾಜನೆನಿಸಿಕೊಂಡು ಕೋಸಲದೇಶವೆಲ್ಲವನ್ನೂ ಸುಖವಾಗಿ ಆನುಭವಿಸುವನು. ಅವನೊಬ್ಬನೇ ಹೆಂಡತಿಯೊಡಗೂಡಿ ಸುಖವಾಗಿ ರಾಜ್ಯ * * * ನಿಸ್ಸಹನಾದ ರಾಮನು, ತನಗೆ ರಾಜ್ಯವು ತಪ್ಪಿಹೋದುದಕ್ಕಾಗಿ ಕೈಕೇಯಿ ಯನ್ನು ನಿಂದಿಸಬಹುದೆ?” ಎಂದರೆ, ಈತನು ಬೆಳಗಾದಮೇಲೆ ಅಯೋಧ್ಯೆಗೆ ಹಿಂತಿರುಗಿ ಹೋಗುವಂತೆ ಲಕ್ಷಣನಿಗೆ ಬೋಧಿಸುವುದರಿಂದ, ಆಕೆಯಲ್ಲಿ ಬದ್ಧದ್ವೇಷವುಳ್ಳ ಲಕ್ಷ ಕನ ಮನೋಧರ ವನ್ನನುಸರಿಸಿ ಹೇಳುವುದಕ್ಕಾಗಿಯೇ ಹೀಗೆನಿಂದಿಸುತ್ತಿದ್ದನೇ ಹೊರತು ಬೇರೆಯಲ್ಲ.